twitter
    For Quick Alerts
    ALLOW NOTIFICATIONS  
    For Daily Alerts

    ಸದಾನಂದ ಗೌಡರ ಟೈಮ್ 2013 ರತನಕ ಚೆನ್ನಾಗಿದೆ

    |
    <ul id="pagination-digg"><li class="previous"><a href="/tv/05-kodimatha-swamiji-interview-samaya-tv-aid0189.html">« Previous</a>

    Kodimatha Swamiji and Chidananda Patel
    ಚಿದಾನಂದ : ಮಠಗಳು ಸಾರ್ವಜನಿಕರಿಂದ ಮತ್ತು ರಾಜಕಾರಣಿಗಳಿಂದ ವಂತಿಗೆ ತೆಗೆದುಕೊಳ್ಳುವುದರ ಬಗ್ಗೆ ನಿಮ್ಮ ಅಭಿಪ್ರಾಯ?

    ಸ್ವಾಮೀಜಿ : ಮಠಗಳಿಗೆ ಜನ ಮತ್ತು ಸರಕಾರ ಆರ್ಥಿಕ ಸಹಾಯ ನೀಡುವುದು ತಪ್ಪಲ್ಲ. ಹಿಂದಿನ ಕಾಲದಲ್ಲೂ ಸ್ವಾಮೀಜಿಗಳಿಗೆ ರಾಜಮಹಾರಾಜರು ರಾಜಾಶ್ರಯ ನೀಡಿದ್ದರು. ಮಠಕ್ಕೆ ಬರುವ ಹಣ ಸದ್ವಿನಿಯೋಗ ಆಗಬೇಕು ಎನ್ನುವುದು ನಮ್ಮ ವಾದ.

    ಚಿದಾನಂದ : ನಿಮ್ಮ ಮಠಕ್ಕೆ ಬರುವವರೆಲ್ಲರೂ ಯೋಗ್ಯರೇ?

    ಸ್ವಾಮೀಜಿ : ಮಠಕ್ಕೆ ಬರುವ ಭಕ್ತಾದಿಗಳು ನಮ್ಮಿಂದ ಆಶೀರ್ವಾದ ಮಂತ್ರಾಕ್ಷತೆ ಪಡೆಯಲು ಬರುತ್ತಾರೆ. ಅದರಲ್ಲಿ ಯೋಗ್ಯರೂ ಇರಬಹುದು ಅಯೋಗ್ಯರೂ ಇರಬಹುದು. ಪಾದಕ್ಕೆ ಬೀಳುತ್ತಾರೆ. ನಮ್ಮ ಆಶೀರ್ವಾದ ಪಡೆಯಲು ಬರುವ ಭಕ್ತಾದಿಗಳಿಗೆ ಆಶೀರ್ವಾದ ಮಾಡುವುದಷ್ಟೇ ನಮ್ಮ ಕೆಲಸ. ನಮ್ಮಲ್ಲಿ ಬರುವ ಭಕ್ತರು ಕಳ್ಳರೂ ಇರಬಹುದು, ಆದರೆ ಆ ಸಮಯದಲ್ಲಿ ಆಶೀರ್ವಚನ ನೀಡುವುದಷ್ಟೇ ನಮ್ಮ ನಿಯಮ. ಜ್ಞಾನ, ವಿವೇಕ, ಸದಾಚಾರಗಳಿಗೆ ನಮ್ಮ ಬೆಂಬಲ.

    ಚಿದಾನಂದ : ನೀವು ಪ್ರಚಾರಪ್ರಿಯರು ಎನ್ನುವ ಮಾತಿದೆ?

    ಸ್ವಾಮೀಜಿ :
    ನಾವು ಪ್ರಚಾರ ಬಯಸುವವರಲ್ಲ. ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿಯಿಂದ ಹಿಡಿದು ಎಲ್ಲರೂ ನಮ್ಮ ಮಠಕ್ಕೆ ಸ್ವಪ್ರೇರಣೆಯಿಂದ ಬಂದಿದ್ದಾರೆ. ಮಠಕ್ಕೆ ಬರುವ ರಾಜಕಾರಣಿಗಳ ಪಟ್ಟಿ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಎಲ್ಲರಿಗೂ ಪ್ರಚಾರ ಕೊಡುವವರು "ನೀವು" ಮಾಧ್ಯಮದವರು.

    ಚಿದಾನಂದ : ಮುಖ್ಯಮಂತ್ರಿ ಸದಾನಂದ ಗೌಡರ ಅವರ ನಾಳೆಗಳು ಹೇಗಿರುತ್ತವೆ?

    ಸ್ವಾಮೀಜಿ : ಡಿವಿಎಸ್ ಒಬ್ಬ ಒಳ್ಳೆ ಮತ್ತು ಯೋಗ್ಯ ಮನುಷ್ಯ. 2013ರವರೆಗೆ ಅವರ ಟೈಮ್ ಚೆನ್ನಾಗಿದೆ. ಆದರೆ ರಾಜ್ಯ ಮಧ್ಯಂತರ ಚುನಾವಣೆ ಎದುರಿಸಬೇಕಾಗ ಬಹುದು.

    ಚಿದಾನಂದ : ಮೂವರು ಶಾಸಕರ ಅಮಾನತು, ಶ್ರೀರಾಮುಲು ಅವರ ಹೊಸ ರಾಜಕೀಯ ನಡೆ, ಒಟ್ಟಾರೆ ರಾಜ್ಯದ ಭವಿಷ್ಯದ ಬಗ್ಗೆ?

    ಸ್ವಾಮೀಜಿ : ಈ ಹಿಂದೇನೆ ನಾನು ಹೇಳಿದ್ದೆ. ಬಂಗಾರದ ಪಂಜರ ಮೂರು ಭಾಗವಾಗುತ್ತೆ, ಮುತ್ತಿನ ಗಿಣಿ ಮಾತನಾಡುವುದು, ರಾಜಕೀಯ ಚದುರಂಗ ಆಟವಾಗುವುದು. ಇದರಿಂದ ನೀವು ಅರ್ಥೈಸಿಕೊಳ್ಳಬಹುದು. ಜಾತಿ, ಭಾಷೆಯ ವಿಷಯದಲ್ಲಿ ಕಲಹ ನಡೆಯುವುದು. 2012ರ ನಂತರ ರಾಜ್ಯದಲ್ಲಿ ಅಶಾಂತಿ ತಲೆದೋರಲಿದೆ. ಕಾಮಿಗಳು ಕಾವಿ ಧರಿಸುತ್ತಾರೆ. ಉತ್ತರ ಭಾಗದಲ್ಲಿ ಮತ್ತೆ ಜಲಪ್ರಳಯ ಆಗಬಹುದು.

    ಚಿದಾನಂದ : ಈ ದೇಶದ ಭವಿಷ್ಯ ಏನು?

    ಸ್ವಾಮೀಜಿ : ದೇಶದಲ್ಲಿ ಭೀತಿ, ಅಶಾಂತಿ, ಅರಾಜಕತೆ, ರಾಜಕೀಯ ಅಸ್ಥಿರತೆ ತಲೆದೋರುತ್ತದೆ. ದೇಶದ ದಕ್ಷಿಣದಲ್ಲಿ ಜಾತಿ, ಭಾಷೆ ಕಿತ್ತಾಟ ತಾರಕಕ್ಕೆರಲಿದೆ. ಭಯೋತ್ಪಾದಕರ ಹಾವಳಿ ಕಾಣಬರುತ್ತದೆ. ಪಶ್ಚಿಮ ಮತ್ತು ಈಶಾನ್ಯ ಭಾಗದಲ್ಲಿ ಯುದ್ದ ಭೀತಿ ಎದುರಿಸಬೇಕಾಗಬಹುದು. ಜನರಲ್ಲಿ ಸುಖ, ನೆಮ್ಮದಿಯಿರುವುದಿಲ್ಲ.

    ಚಿದಾನಂದ : ಈ ಹಿಂದೆ ನೀವು 2012ರಲ್ಲಿ ಪ್ರಳಯವಾಗುತ್ತದೆ ಎಂದಿದ್ದೀರಿ?

    ಸ್ವಾಮೀಜಿ : ಅಕಾಲಿಕ ಮಳೆ, ತೀರ್ಥದಲ್ಲಿ ರುಚಿಯಿಲ್ಲ. ಪ್ರಳಯದ ಪ್ರಶ್ನೆ ನಮ್ಮ ದೇಶಕ್ಕೆ ಇರದಿದ್ದರೂ ಪ್ರಪಂಚದ ಇತರ ಭಾಗದಲ್ಲಿ ಅವಘಡ ಸಂಭವಿಸಬಹುದು. ಪ್ರಳಯ ಅಂದರೆ ಪ್ರಪಂಚದ ಅಂತ್ಯವೆಂದಲ್ಲ. ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿ ಆಸ್ತಿಪಾಸ್ತಿ, ಪ್ರಾಣಹಾನಿ ಸಂಭವಿಸುವುದು. ನಮ್ಮ ದೇಶದ ಉತ್ತರ ಭಾಗದಲ್ಲಿ ಸ್ವಲ್ಪ ಹಾನಿ ಸಂಭವಿಸಬಹುದು.

    ಚಿದಾನಂದ :
    ಈಗಿನ ರಾಜಕೀಯದ ಬಗ್ಗೆ?

    ಸ್ವಾಮೀಜಿ :
    ಜನಸಾಮಾನ್ಯರಿಗೆ ಹಣ ಹೆಸರು ಮಾಡುವ ಸುಲಭ ಉಪಾಯವೆಂದರೆ ರಾಜಕೀಯ ನಾಯಕರುಗಳಾಗುವುದು. ಇದು ನಮ್ಮ ದೇಶದ ರಾಜಕೀಯ ವ್ಯವಸ್ಥೆ. ರಾಜಕಾರಣಿಗಳಿಗೆ ದೇಶಪ್ರೇಮದ ಪಾಠ ಕಲಿಸಬೇಕಾಗಿದೆ. ದುಡ್ಡು ಮಾಡುವುದೊಂದೇ ಗುರಿ ಎಂದರೆ ದೇಶ ಹೇಗೆ ಅಭಿವೃದ್ದಿಗೊಳ್ಳುವುದು? ಎಲ್ಲಾ ರಾಜಕಾರಣಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗುವುದಿಲ್ಲ. ಒಟ್ಟಾರೆ, "ಗುರುವೂ ಇಲ್ಲ, ಗುರಿಯೂ ಇಲ್ಲ" ಎಂಬಂತಹ ಸ್ಥಿತಿ ವ್ಯಾಪಕವಾಗಿ ಆವರಿಸಿಕೊಂಡಿದೆ.

    <ul id="pagination-digg"><li class="previous"><a href="/tv/05-kodimatha-swamiji-interview-samaya-tv-aid0189.html">« Previous</a>

    English summary
    Karnataka Astrologer and Seer Sri Kodimatha Shivananda Shivayogi Swamiji predictions for Karnataka and India: Excerts from Samaya Channel interview in Kannada; 'Straight Hit'. Interview by Political correspondent Chidanand Patel
    Monday, December 5, 2011, 15:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X