ಜೀ ಕನ್ನಡ ವಾಹಿನಿಗೆ ಗೌತಮ್ ಮಾಚಯ್ಯ ರಾಜೀನಾಮೆ

ಹೌದು, ಬೆಂಗಳೂರಿನ ಎಂ ಜಿ ರೋಡಿನಲ್ಲಿರುವ ಜೀ ಕನ್ನಡ ವಾಹಿನಿಗೆ ಕಳೆದ ನಾಲ್ಕೈದು ವರ್ಷಗಳಿಂದ ಗೌತಮ್ ಮಾಚಯ್ಯ ಮುಖ್ಯಸ್ಥರಾಗಿದ್ದರು. ಅದಕ್ಕೂ ಮೊದಲು ಅವರು 'ಜೀ' ವಾಹಿನಿ ಸೌತ್ ಇಂಡಿಯಾಕ್ಕೆ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಕೆಲದಿನಗಳ ಹಿಂದೆ ಜೀ ಕನ್ನಡಕ್ಕೆ ರಾಜೀನಾಮೆ ಸಲ್ಲಿಸಿ ಹೊರನಡೆದಿದ್ದಾರೆ.
ಈ ಪ್ರಕ್ರಿಯೆ ಹಿಂದಿನ ಆಂತರಿಕ ಬಿಕ್ಕಟ್ಟು ಅದೇನಿತ್ತು ಎಂಬ ಗುಟ್ಟು ಗೌತಮ್ ಮಾಚಯ್ಯ ಬಾಯಿ ಹಾಗೂ ಜೀ ಕನ್ನಡ ಆಫೀಸ್ ಗೋಡೆ ಬಿಟ್ಟು ಈಚೆ ಬರುತ್ತಿಲ್ಲ. ಮುಂದಿನ ನಡೆಯ ಬಗ್ಗೆ ಯಾವ ಅಧಿಕೃತ ಮಾಹಿತಿಯೂ ಲಭ್ಯವಾಗಿಲ್ಲ. ತೆರವಾಗಿರುವ ಮುಖ್ಯಸ್ಥರ ಕುರ್ಚಿಯಲ್ಲಿ ಇನ್ಮುಂದೆ ಕುಳಿತುಕೊಳ್ಳುವವರು ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)
English summary
Zee Kannada Channel Head Gowtham Machayya resigns. Before this, he worked as South zone head.


Click it and Unblock the Notifications