twitter
    For Quick Alerts
    ALLOW NOTIFICATIONS  
    For Daily Alerts

    ಬದುಕು ಜಟಕಾಬಂಡಿ ಕಾರ್ಯಕ್ರಮ ನಮಗೆ ಬೇಕೆ?

    By * ಕೆ.ಎನ್.ಅಂಜನಾ, ಚಾಮರಾಜನಗರ
    |

    Malavika Avinash
    ಜೀ ಕನ್ನಡದಲ್ಲಿ ಮಾಳವಿಕಾ ಅವಿನಾಶ್ 'ಬದುಕು ಜಟಕಾಬಂಡಿ' ಕಾರ್ಯಕ್ರಮ ನಡೆಸಿಕೊಡುತ್ತಾರೆ. ಪ್ರಬುದ್ಧರಂತೆ, ಬುದ್ಧಿಜೀವಿಯಂತೆ ಕಾಣುವ ಮಾಳವಿಕಾ, ಈ ರೀತಿಯ ಕಾರ್ಯಕ್ರಮದಲ್ಲೇಕೆ ಭಾಗವಹಿಸುತ್ತಿದ್ದಾರೋ ತಿಳಿಯದು. ಕುಟುಂಬಗಳೊಳಗೆ, ನಾಲ್ಕು ಗೋಡೆಗಳ ಮಧ್ಯೆ ಇತ್ಯರ್ಥವಾಗಬೇಕಾದ ಭಿನ್ನಾಭಿಪ್ರಾಯಗಳು, ಕಲಹಗಳು ಟಿವಿ ಪರದೆಯ ಮುಖಾಂತರ ಢಾಣಾಡಂಗುರವಾಗಬೇಕೆ?

    ಮೊದಲೇ ವೈಮನಸ್ಯದಿಂದ, ಅಪಮಾನದಿಂದ ಕುಗ್ಗಿ ಹೋಗಿರುವ ಮನಸ್ಸುಗಳು ಲಕ್ಷಾಂತರ ಜನರಿಗೆ ಆಹಾರವಾಗಬೇಕೆ? ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು, ಅವರೂರಿಗೆ ಹೋದ ನಂತರ, ಜನರು ಅವರನ್ನು ನೋಡಿ ನಗುವುದಿಲ್ಲವೆ? ಇನ್ನು ಈ ಕಾರ್ಯಕ್ರಮದಲ್ಲಿ ಪರ ವಿರುದ್ಧ ಆರೋಪಗಳು ನಡೆಯುತ್ತಾ ತಾರಕಕ್ಕೇರುತ್ತವೆ.

    ಅಂಥಹ ಸಂದರ್ಭದಲ್ಲಿ ಪರಸ್ಪರ ಕೈ ಕೈ ಮಿಲಾಯಿಸುವ ಪ್ರಸಂಗಗಳು ನಡೆಯುತ್ತವೆ. ಇವನ್ನೆಲ್ಲಾ ಮಾಳವಿಕಾ ಗಂಭೀರ ಮುಖ ಹೊತ್ತು ಆಸ್ವಾದಿಸುತ್ತಾರೇನೋ ಅನ್ನಿಸುತ್ತದೆ. ನಿಜ ಟಿ.ವಿ ಅವರಿಗೆ ಟಿ.ಆರ್.ಪಿ ಬೇಕು. ಇದನ್ನೆಲ್ಲಾ ಮಾಡುತ್ತಾರೆ, ಮಾಡಿಸುತ್ತಾರೆ. ಆದರೆ ಸಂವೇದನಾಶೀಲರಂತೆ ಕಾಣುವ ಮಾಳವಿಕಾ ಅವರು ಇದಕ್ಕೆಲ್ಲ ಇಂಬು ಕೊಡಬೇಕೆ?

    English summary
    Do we really want Reality Shows like Baduku Jataka Bandi? Which will be airs on Zee Kannada. Why the much admired actress Malavika Avinash hosting such shows, which is all about real people, real events, real emotions and real judgments.
    Tuesday, September 6, 2011, 13:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X