ಬಿಗ್ ಬಾಸ್‌ ರಿಯಾಲಿಟಿ ಶೋ ವಿರುದ್ಧ ಶಿವಸೇನೆ ಗರಂ

By Rajendra

ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್‌'ಮೇಲೆ ಶಿವಸೇನೆಯ ವಕ್ರದೃಷ್ಟಿ ಬಿದ್ದಿದೆ. ಈ ಕಾರ್ಯಕ್ರಮದಲ್ಲಿ ಇಬ್ಬರು ಪಾಕಿಸ್ತಾನಿಯರಾದ ವೀಣಾ ಮಲಿಕ್(ನಟಿ) ಮತ್ತು ಬೇಗಂ ನವಾಜಿಶ್ ಅಲಿ(ವಸ್ತ್ರ ವಿನ್ಯಾಸಕಿ) ಭಾಗವಹಿಸಿರುವುದು ಶಿವಸೇನೆಯನ್ನು ಕೆರಳಿಸಿದೆ. 'ಬಿಗ್ ಬಾಸ್' ವಿರುದ್ಧ ಶಿವಸೇನೆ ಗರಂ ಆಗಿದೆ.

ಜೈ ಭವಾನಿ, ಜೈ ಶಿವಾಜಿ ಎಂದು ಘೋಷಣೆ ಕೂಗುತ್ತಾ ಶಿವಸೈನಿಕರು ಧ್ವಜಗಳನ್ನು ಹಿಡಿದು 'ಬಿಗ್ ಬಾಸ್' ಸ್ಟುಡಿಯೋ ಒಳಕ್ಕೆ ನುಸುಳಲು ಬುಧವಾರ (ಅ.6) ಯತ್ನಿಸಿದರು. ಕೂಡಲೆ ಪೊಲೀಸರು ಅವರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ 24 ಮಂದಿ ಶಿವ ಸೈನಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಸ್ಥಳೀಯರ ಪ್ರಕಾರ ಬಂಧಿತರಸಂಖ್ಯೆ ಸುಮಾರು ಐವತ್ತರಷ್ಟಿರಬಹುದು.

ಶಿವಸೇನೆಯ ಮುಖಂಡ ಮಚಿಂದ್ರ ಖಾರಡೆ ನೇತೃತ್ವ ವಹಿಸಿದ್ದ ತಂಡ 'ಬಿಗ್ ಬಾಸ್' ಕಾರ್ಯಕ್ರಮ ನಡೆಯುತ್ತಿರುವ ಕಾಂಪೌಂಡನ್ನು ಹತ್ತಿ ಒಳನುಗ್ಗಲು ಯತ್ನಿಸಿತು. ಆದರೆ ಪೊಲೀಸರು ಅವರನ್ನು ಬಂಧಿಸಿ ನಿಯಂತ್ರಿಸಿದರು ಎನ್ನಲಾಗಿದೆ. ಈ ಅಡೆತಡೆಗಳ ನಡುವೆಯೂ 'ಬಿಗ್ ಬಾಸ್' ಚಿತ್ರೀಕರಣ ಸುಸೂತ್ರವಾಗಿ ನಡೆಯುತ್ತಿದೆ . ಮುಂಬೈನ ಲೋನಾವಾಲಾ ಪ್ರದೇಶದಲ್ಲಿರುವ ಸ್ಟುಡಿಯೋಗೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X