»   »  ಚಂದನ ವಾಹಿನಿಯಲ್ಲಿ ಭಗವದ್ಗೀತಾ ಪ್ರವಚನ

ಚಂದನ ವಾಹಿನಿಯಲ್ಲಿ ಭಗವದ್ಗೀತಾ ಪ್ರವಚನ

Subscribe to Filmibeat Kannada
Bhagavad Gita
ಸತ್ಯ ಚೇತನ ಮೋಕ್ಷ ಸಾಧನ, ಮಾಧವ ನುಡಿದ ಅಮೃತ ಗೀತೆ...ಭವದ್ಗೀತೆಯ ಮಾಹಸಂದೇಶ ಚಂದನ ವಾಹಿನಿಯಲ್ಲಿ (ಡಿಡಿ 1)ದಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 10ರಿಂದ ಪ್ರತಿ ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಬೆಳಗ್ಗೆ 8 ರಿಂದ 8.30ಕ್ಕೆ 'ಭಗವದ್ಗೀತ: ಪೀಠಿಕೆ ಪ್ರವಚನ' ಪ್ರಸಾರವಾಗಲಿದೆ. ಪ್ರವಚನಕಾರರು ಪಾವಗಡ ಪ್ರಕಾಶ್ ರಾವ್.

ಶ್ರೀ ದೇವಿ ಕ್ರಿಯೇಷನ್ ಲಾಂಛನದಲ್ಲಿ ಅಯ್ಯಂಗಾರ್ ಹೋಂ ಪ್ರಾಡಕ್ಟ್ ನ ಬಿ.ಕೆ.ದ್ವಾರಕನಾಥರು ಈ ಪ್ರವಚನದ ನಿರ್ಮಾಪಕರು. ಖ್ಯಾತ ಪ್ರವಚನಕಾರರಾದ ಪಾವಗಡ ಪ್ರಕಾಶ್‌ರಾವ್ ಅವರಿಂದ ಗತ ವೈಭವದ ಸತ್ಯದ ಸೂಕ್ಷ್ಮತೆಯನ್ನು, ವ್ಯವಹಾರಿಕ ಚಾಣಾಕ್ಷತೆಯನ್ನು ನ್ಯಾಯದ ಅಡಿಪಾಯವಾಗಿರುವ ಭಗವದ್ಗೀತೆಯ ಬೋಧನೆಯನ್ನು ಸಾಮಾನ್ಯ ಜನರಿಗೆ ಮನದಟ್ಟಾಗುವ ರೀತಿಯಲ್ಲಿ ಪ್ರವಚನ ಮಾಡಲಾಗಿದೆ.

ಪುರುಷನಾಥ್.ಕೆ ನಿರ್ದೇಶಿಸುತ್ತಿರುವ ಈ ಧಾರವಾಹಿಗೆ ಸಂಗೀತ ಎಂ.ಎಸ್.ಮಾರುತಿ, ಸಾಹಿತ್ಯ ಚಿಂದೋಡಿ ಬಂಗಾರೇಶ್, ಗಾಯಕರು : ಎಸ್.ಪಿ.ಬಾಲಸುಬ್ರವ್ಮಣ್ಯಂ, ಸಂಕಲನ : ಹರೀಶ್ ಕೊಡ್ವಾಡಿ, ಸಹ ನಿರ್ದೇಶನ ರಾಘವೇಂದ್ರ ಗುಂಡ್ಮಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada