ಈಟಿವಿ ವರದಿಗಾರ ಮೊಹಮ್ಮದ್ ಅಕ್ರಂ ಗುಂಡಿಗೆ ಬಲಿ

ಈ ಹಿಂದೆ ಇವರು ಈ ಟಿವಿಯ ಹೈದರಾಬಾದ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಮೊರಾದಾಬಾದಿಗೆ ವರ್ಗವಾಗಿದ್ದರು. ಶುಕ್ರವಾರ (Aug 5) ಬೆಳಗ್ಗೆ 11.30ರಲ್ಲಿ ನವದೆಹಲಿ ಈಶಾನ್ಯ ಸ್ವಾಗತ ದ್ವಾರದ ಬಳಿ ರಕ್ತದ ಮಡುವಿನಲ್ಲಿ ರಸ್ತೆ ಬದಿಯ ಮೋರಿಯಲ್ಲಿ ಬಿದ್ದಿದ್ದ ಇವರನ್ನು ಕಂಡು ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಕ್ರಂ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಶನಿವಾರ ಸಂಜೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಕ್ರಂ ಅವರ ಬಳಿ ಇದ್ದ ಕ್ಯಾಮರಾ ಮತ್ತು ಇನ್ನಿತರ ವಸ್ತುಗಳು ಕಾಣೆಯಾಗಿವೆ.
ಇತ್ತೀಚೆಗಷ್ಟೇ ಮಿಡ್ ಡೇ ಪತ್ರಿಕೆಯ ಕ್ರೈಂ ವಿಭಾಗದ ಸಂಪಾದಕ ಜೇ ಡೇ ಅವರ ಹತ್ಯೆ ನಡೆದ ನಂತರ ಗುಂಡಿನ ದಾಳಿ ಮೂಲಕ ಮತ್ತೊಬ್ಬ ಪತ್ರಕರ್ತನ ಹತ್ಯೆಯಾಗಿದೆ.
More from Filmibeat
English summary
Journalist Mohammad Akram, 32, a native of Amroha in Uttar Pradesh, working with an Urdu E TV channel in Uttar Pradesh's Moradabad, was shot dead by unidentified assailants in New Delh on Friday (Aug 5).


Click it and Unblock the Notifications











