ಜೂ.25ಕ್ಕೆ ಸುವರ್ಣ ಕನ್ನಡ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ, ಪತ್ರಕರ್ತ, ಲೇಖಕ ಜೋಗಿ ಹಾಗೂ ಮಿಲನ ಪ್ರಕಾಶ್ ಅವರು ತೀರ್ಪುಗಾರರಾಗಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಒಟ್ಟು 150 ಚಿತ್ರಗಳು ನಾಮ ನಿರ್ದೇಶನಗೊಂಡಿದ್ದವು. ಐದು ವಿಶೇಷ ಪ್ರಶಸ್ತಿಗಳು ಸೇರಿದಂತೆ ಒಟ್ಟು 29 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
" 2010ರಲ್ಲಿ ಬಿಡುಗಡೆ ಕಂಡ ಚಿತ್ರಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ನೀಡಲಾಗಿದೆ. ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ" ಎಂದು ಸುವರ್ಣ ಬ್ಯುಸಿನೆಸ್ ಹೆಡ್ ಅನೂಪ್ ಚಂದ್ರಶೇಖರ್ ತಿಳಿಸಿದರು.
ಮತ ಸಂಗ್ರಹಕ್ಕೆ ಸುವರ್ಣ ವಾಹಿನಿ ವಿಶೇಷ ಫಿಲಂ ಫ್ಯಾನ್ಸ್ ಎಕ್ಸ್‌ಪ್ರೆಸ್ ವ್ಯಾನ್ ಸಿದ್ಧವಾಗಿದ್ದು ರಾಜ್ಯದ ನಾನಾ ಕಡೆ ಸಂಚರಿಸಿ ಮತಗಳನ್ನು ಸಂಗ್ರಹಿಸಲಿದೆ. ಮೈಸೂರು, ಹಾಸನ, ಮಂಗಳೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಧಾರವಾಡ ಹಾಗೂ ಚಿತ್ರದುರ್ಗದಲ್ಲಿ ಈ ವಿಶೇಷ ವಾಹನ ಸಂಚರಿಸಿ ಮತಗಳನ್ನು ಸಂಗ್ರಹಿಸಲಿದೆ ಎಂದು ಸುವರ್ಣ ವಾಹಿನಿ ತಿಳಿಸಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











