twitter
    For Quick Alerts
    ALLOW NOTIFICATIONS  
    For Daily Alerts

    ಕಿರುತೆರೆಯಲ್ಲಿ 'ಬಂಗಾರದ ಮನುಷ್ಯ' ಯಾವಾಗ?

    By * ವಾಸುದೇವ, ಬೆಂಗಳೂರು
    |

    Dr.Raj in Bangaaradha Manushya
    ನಗುನಗುತಾ ನಲೀ ನಲೀ... ಎಂದು 'ಬಂಗಾರದ ಮನುಷ್ಯ' ರಾಜಣ್ಣ ತೆರೆ ಮೇಲೆ ಎಂಟ್ರಿ ಕೊಡುವ ಸ್ಟೈಲೇ ಸೂಪರ್. ಟಿ.ಕೆ ರಾಮರಾವ್ ಕಾದಂಬರಿ ಆಧಾರಿತ, ಸಿದ್ದಲಿಂಗಯ್ಯ ನಿರ್ದೇಶನದ ಈ ಚಿತ್ರ ಮಾರ್ಚ್ 31, 1972 ರಲ್ಲಿ ತೆರೆ ಕಂಡಿತ್ತು. ಡಾ.ರಾಜಕುಮಾರ್, ಭಾರತಿ, ವಜ್ರಮುನಿ, ಶ್ರೀನಾಥ್, ಬಾಲಕೃಷ್ಣ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರಕ್ಕೆ ಜಿ ಕೆ ವೆಂಕಟೇಶ್ ಸಂಗೀತ ನೀಡಿದ್ದರು.

    ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ಮೈಲಿಗಲ್ಲಿಗೆ ಸಾಕ್ಷಿಯಾದ ಬಂಗಾರದ ಮನುಷ್ಯ ಚಿತ್ರದ ಕೆಲವೊಂದು ಸಾಧನೆ ಇಂತಿದೆ:
    *ಸತತ 104 ವಾರಗಳ ಪ್ರದರ್ಶನ (ಬೆಂಗಳೂರು ಸ್ಟೇಟ್ಸ್ ಚಿತ್ರಮಂದಿರ) ಕಂಡ ಚಿತ್ರ. ಈ ದಾಖಲೆ ಇದುವರೆಗೆ ಯಾವ ಚಿತ್ರಗಳೂ ಮುರಿದಿಲ್ಲ.
    *ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ ಸತತ ಒಂದು ವರ್ಷ, ಆರು ವಾರಗಳ ಪ್ರದರ್ಶನ.
    * ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಸತತ 28 ವಾರ, ಚನ್ನಪಟ್ಟಣದ ಶಿವಾನಂದ ಚಿತ್ರಮಂದಿರದಲ್ಲಿ ಸತತ 18 ವಾರ ಪ್ರದರ್ಶನ.
    *1988 ರಲ್ಲಿ ರಾಜ್ಯಾದ್ಯಂತ ಪುನರ್ ಪ್ರದರ್ಶನ ಗೊಂಡ ಚಿತ್ರ 11 ಕೇಂದ್ರದಲ್ಲಿ ಶತದಿನ, ಬೆಂಗಳೂರಿನಲ್ಲಿ 25 ವಾರ ಪ್ರದರ್ಶನ ಗೊಂಡಿತು.
    *ಚಿತ್ರ ವೀಕ್ಷಿಸಿದ ಹಲವು ಯುವಕರು ಮನಪರಿವರ್ತನೆ ಗೊಂಡು ಕೃಷಿಗೆ ಆದ್ಯತೆ ನೀಡಿದ ಚಿತ್ರ.

    ಕಳೆದ ಐದಾರು ವರ್ಷಗಳಲ್ಲಿ ಇಂತಹ ಅದ್ಭುತ ಚಿತ್ರ ವೀಕ್ಷಿಸುವ ಅವಕಾಶ ಕಿರುತೆರೆಯಲ್ಲಾಗಲಿ ದೊಡ್ದತೆರೆಯಲಾಗಲಿ ನಮಗೆ ಲಭಿಸಿಲ್ಲ. ಕನ್ನಡ ವಾಹಿನಿಗಳು ಪ್ರಸಾರ ಮಾಡಿದ ಚಿತ್ರಗಳನ್ನೇ ಮತ್ತೆ ಮತ್ತೆ ಪ್ರಸಾರ ಮಾಡಿ ಚಿತ್ರದ ಕುತೂಹಲವನ್ನೆ ಕಮ್ಮಿ ಮಾಡಿದೆ. ಉದಾಹರಣೆಗೆ ಆಪ್ತಮಿತ್ರ, ಜೋಗಿ, ಮಿಲನ, ಮುಂಗಾರುಮಳೆ, ಗಾಳಿಪಟ, ಅರಸು ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳು ಕಳೆದ ಒಂದು ವರ್ಷದಲ್ಲಿ ಕನಿಷ್ಠ ಆರೇಳು ಬಾರಿ ಬಂದು ಹೋಗಿವೆ.

    ಹೀಗಿರುವಾಗ 40 ವರ್ಷಗಳ ಹಿಂದಿನ "ಬಂಗಾರದ ಮನುಷ್ಯ' ಚಿತ್ರ ಯಾಕೆ ಪ್ರಸಾರಗೊಳ್ಳುತ್ತಿಲ್ಲ? ಅಥವಾ ಸಾಮಾಜಿಕ ಹಿತಾಶಕ್ತಿಯುಳ್ಳ ಇಂತಹ ಚಿತ್ರಗಳ ಪ್ರಸಾರ ಇಷ್ಟೇ ಬಾರಿ ಮಾಡಬೇಕೆಂದು ವಾರ್ತಾ ಇಲಾಖೆ ನಿರ್ಬಂಧನೆ ವಿಧಿಸಿದೆಯೇ? ಈ ಚಿತ್ರದ ಹಕ್ಕನ್ನು ಪಡೆದಿರುವ ಟಿವಿ ವಾಹಿನಿಯವರು ಹಳೇ ಚಿತ್ರವೆಂದು ರೀಲನ್ನು ಪಕ್ಕಕ್ಕೆ ಇಟ್ಟಿದ್ದಾರೆಯೇ? ಒಟ್ಟಿನಲ್ಲಿ, ಈ ಚಿತ್ರದ ಪ್ರಸಾರ ಹಕ್ಕು ಯಾವ ವಾಹಿನಿಯ ಬಳಿಯೇ ಇರಲಿ ಆದಷ್ಟು ಬೇಗ ಈ ಚಿತ್ರವನ್ನು ಪ್ರಸಾರ ಮಾಡಿ ಎನ್ನುವುದೊಂದು ನಮ್ಮ ಕಳಕಳಿಯ ವಿನಂತಿ.

    English summary
    Late Dr Rajkumar's Bangaaradha Manushya is an ever-green Kannada movie, which viewers want to see it time and again. Here is a request from the Kannada small screen audience. He wants to watch the Kannada matinee idol's hit movie. It was released in 1970. It starred Rajkumar and Bharathi Vishnuvardhan and ran for over two years at the States Theatre in Bangalore.
    Thursday, July 7, 2011, 13:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X