ರಾಧಿಕಾಗೆ ಬೇರೆ ಮದುವೆ; ಭಗ್ನವಾಯಿತೆ ಮನಸ್ಸು?

Radha Kalyana Image
ಈಗಾಗಲೇ ಒಬ್ಬನಿಂದ ತಾಳಿ ಕಟ್ಟಿಸಿಕೊಂಡು ಮದುವೆ ಎಂಬ ಸಂಸ್ಕಾರ ಮುಗಿಸಿರುವ ಹೆಣ್ಣೊಬ್ಬಳು ಇನ್ನೊಬ್ಬನಿಂದ ತಾಳಿ ಕಟ್ಟಿಸಿಕೊಳ್ಳಲು ಮನಸ್ಸು ಮಾಡುವುದು ಸಾಧ್ಯವೆ? ನಿಮ್ಮ ಮನಸ್ಸು ಸಿನಿಮಾ ಕಡೆ ಓಡಿದರೆ ಕ್ಷಮಿಸಿ. ಇವಳು ಸೀರಿಯಲ್ ರಾಧಿಕಾ. ಜೀ ಕನ್ನಡ ವಾಹಿನಿಯಲ್ಲಿ ಸಂಜೆ 6:30ಕ್ಕೆ ಪ್ರಸಾರವಾಗುತ್ತಿರುವ ರಾಧಾ ಕಲ್ಯಾಣ ಧಾರಾವಾಹಿಯ ನಾಯಕಿ. ಇವಳೀಗ ಅಂತಹುದೇ ಪರಿಸ್ಥಿತಿ ಎದುರಿಸುತ್ತಿದ್ದಾಳೆ. ಎಲ್ಲ ಅಕ್ಕ ವಿಶಾಖಾ ಮಾಡಿದ ಕಿತಾಪತಿ.

ತನ್ನ ಮದುವೆಯ ದಿನವೇ ಮಾಡೆಲಿಂಗ್ ಟೆಸ್ಟ್ ಇದೆ ಅಂತ ತಂಗಿಯನ್ನು ಹಸೆ ಮಣೆ ಮೇಲೆ ಕೂರಿಸಿ ಪರಾರಿಯಾದ ವಿಶಾಖಾ ಈಗ ಮರಳಿದ್ದಾಳೆ. ಆದರೆ ವಿಶಾಲ್ ಅವಳನ್ನು ಪತ್ನಿ ಎಂದು ಸ್ವೀಕರಿಸಲೇ ಇಲ್ಲ. ಮೊದಲೇ ನೋಡಿದ್ದ ರಾಧಿಕಾಳ ಗುಂಗಿನಲ್ಲೇ ಇದ್ದಾನೆ. ರಾಧಿಕಾ, ಈ ಮದುವೆಯಾಟದಲ್ಲಿ ಗೊಂಬೆಯಾದರೂ, ತಾಳಿ ಕಟ್ಟಿದ ವಿಶಾಲ್ ನಿಜವಾದ ಪತಿ ಎಂದು ಮನಸಾರೆ ಸ್ವೀಕರಿಸಿದ್ದಾಳೆ. ಆಡುವಂತಿಲ್ಲ; ಅನುಭವಿಸುವಂತಿಲ್ಲ. ಈ ವಿಷಯ ಗೊತ್ತಿರುವುದು ವಿಶಾಖಾ, ತಾಯಿ ದೇವಕಿ ಮತ್ತು ಅಜ್ಜಿಗೆ ಮಾತ್ರ.

ಮಿಕ್ಕವರೆಲ್ಲ ಸೇರಿ ರಾಧಿಕಾಳಿಗೆ ಇನ್ನೊಂದು ಮದುವೆ ಮಾಡಲು ಯೋಜಿಸಿದ್ದಾರೆ. ಒಪ್ಪಿಕೊಂಡ ವರ ಅರ್ಜೆಂಟ್ ಮದುವೆ ಮಾಡಿಕೊಡಲು ಕೇಳಿಕೊಳ್ಳುತ್ತಾನೆ. ಅಂತೆಯೇ ದೇವಸ್ಥಾನದಲ್ಲಿ ಮದುವೆಯ ಏರ್ಪಾಟು ಆಗಿಹೋಗುತ್ತದೆ. ಮತ್ತೆ ವಧುವಿನ ವೇಷ ಧರಿಸುವ ರಾಧಿಕಾ ಪರಪುರುಷನಿಗೆ ವರಮಾಲೆ ಹಾಕಲು ಒಪ್ಪದೇ ಮಂಟಪದಿಂದ ಹೊರನಡೆಯುತ್ತಾಳೆ. ಆದರೆ ಹಿರಿಯರು ಬಿಡಬೇಕಲ್ಲ! ರಾಧಿಕಾಳ ಈ ಮದುವೆ ನಡೆಯುತ್ತಾ? ಅನ್ನೋದು 'ರಾಧಾ ಕಲ್ಯಾಣ' ಧಾರಾವಾಹಿಯ ಸಧ್ಯದ ಕುತೂಹಲಕರ ಘಟ್ಟ. (ಒನ್ ಇಂಡಿಯಾ ಕನ್ನಡ)

More from Filmibeat

English summary
Zee Kannada channel Radha Kalyana Serial takes extra ordinary turning point. Heroine is getting Second Marriage very soon. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X