ಬಿಗ್ ಬಾಸ್ 5 ಗೆದ್ದ ಕಿರುತೆರೆ ನಟಿ ಜೂಹಿಗೆ 1 ಕೋಟಿ

By Mahesh

ಕಿರುತೆರೆ ನಟಿ ಜೂಹಿ ಪರ್ಮಾರ್ ಬಿಗ್ ಬಾಸ್ 5 ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ವಿವಾದಿತ ರಿಯಾಲಿಟಿ ಶೋನ ಅಂತಿಮ ಹಂತದಲ್ಲಿ ಜೂಹಿಗೆ ಸ್ಕೈ ಅಲಿಯಾಸ್ ಆಕಾಶ್ ದೀಪ್ ಸೈಗಲ್, ಅಮರ್ ಉಪಾಧ್ಯಾಯ್, ಸಿದ್ದಾರ್ಥ್ ಭಾರದ್ವಾಜ್, ಮೆಹೆಕ್ ಚಾಹಾಲ್ ತೀವ್ರ ಸ್ಪರ್ಧೆ ಒಡ್ಡಿದ್ದರು.

ಆದರೆ, ಶನಿವಾರ ನಡೆದ ಅಂತಿಮ ಹಣಾಹಣಿಯಲ್ಲಿ ಗೆದ್ದ ಜೂಹಿ ಕೈಗೆ ನಿರೂಪಕ ಸಲ್ಮಾನ್ ಖಾನ್ 1 ಕೋಟಿ ರು ನೀಡಿ ಶುಭ ಹಾರೈಸಿದರು.

ಬಿಗ್ ಬಾಸ್ 5 ರ ಮನೆಗೆ ಅಕ್ಟೋಬರ್ 2 ರಂದು ಉಳಿದ 13 ಸ್ಪರ್ಧಿಗಳೊಡೆ ಹೊಕ್ಕ ಜೂಹಿ ಮೊದಲಿನಿಂದಲೂ ಉತ್ತಮ ರೀತಿಯಲ್ಲಿ ಸಂಕಷ್ಟಗಳನ್ನು ನಿಭಾಯಿಸಿದ್ದರು.

ಕುಂಕುಮ್ ಧಾರವಾಹಿಯ ತಾರೆ ಜೂಹಿಗೆ ಸ್ಕೈ ಹಾಗೂ ಸನ್ನಿ ಲಿಯೋನ್ ಬಿಟ್ಟರೆ ಉಳಿದವರ ಬೆಂಬಲ ಅಷ್ಟಾಗಿ ಇರಲಿಲ್ಲ. ಸದಾ ಜಗಳ, ಕೂಗಾಟ, ಅರಚಾಟದ ಗೂಡಾಗಿದ್ದ ಬಿಗ್ ಬಾಸ್ ಮನೆಯಲ್ಲಿ ಪ್ರತಿಸ್ಪರ್ಧೆಗಳ ಟೀಕೆಗಳಿಗೆ ಅಂಜದೆ ತಾಳ್ಮೆಯಿಂದ ಮನೆಯಲ್ಲಿ ಉಳಿದಿದ್ದು ಜೂಹಿಗೆ ಫಲ ನೀಡಿದೆ.

'ಪತಿ ಪತ್ನಿ ಔರ್ ವೋ' ಮತು 'ಮಾ ಎಕ್ಸ್ ಚೇಂಜ್' ಮುಂತಾದ ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದ ಜೂಹಿ ಪರ್ಮಾರ್ ಅವರು ಟಿವಿ ನಟ, ಉದ್ಯಮಿ ಸಚಿನ್ ಶ್ರಾಫ್ ಅವರನ್ನು ಮದುವೆಯಾಗಿದ್ದಾರೆ.

1999ರಲ್ಲಿ ಮಿಸ್ ರಾಜಸ್ಥಾನ್ ಆಗಿದ್ದ ಜೂಹಿಗೆ ಕಿರುತೆರೆಯಲ್ಲಿ ಬ್ರೇಕ್ ನೀಡಿದ್ದು ಸ್ಟಾರ್ ಪ್ಲಸ್ ವಾಹಿನಿಯ ಧಾರಾವಾಹಿ ಕುಂಕುಮ್. 2005ರಲ್ಲಿ ಕಿರುತೆರೆ ಪ್ರಶಸ್ತಿಯನ್ನು ಗಳಿಸಿದ ಪ್ರತಿಭಾವಂತೆ ಜೂಹಿ ಬಿಗ್ ಬಾಸ್ ಗೆಲ್ಲುತ್ತಾಳೆ ಎಂದು ಸಾರ್ವಜನಿಕರು ಕೂಡಾ ಅಭಿಪ್ರಾಯಪಟ್ಟಿದ್ದರು.

More from Filmibeat

English summary
Actress Juhi Parmar has finally been announced as the winner of the controversial reality show Bigg Boss season 5. Along with Juhi there were four other members like Sky aka Akashdeep Saigal, Amar Upadyay, Siddharth Bhardwaj, Mahek Chahal in the house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X