ಕಿರುತೆರೆಗೆ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್
ಬಾಲಿವುಡ್ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಕಿರುತೆರೆಗೆ ದಾಂಗುಡಿಯಿಡುತ್ತಿದ್ದಾರೆ. 'ಚಕ್ ಧೂಮ್ ಧೂಮ್' ಎಂಬ ಡಾನ್ಸ್ ರಿಯಾಲಿಟಿ ಶೋನಲ್ಲಿ ಅವರು ಕುಣಿದು ಚಿತ್ರರಸಿಕರ ಮೈ ಮನ ಮುದಗೊಳಿಸಲಿದ್ದಾರೆ. ಡಿಸೆಂಬರ್ 14ರಿಂದ ಡಾನ್ಸ್ ಕಾರ್ಯಕ್ರಮದ ಚಿತ್ರೀಕರಣ ಆರಂಭವಾಗಲಿದೆ.
ಈ ಡಾನ್ಸ್ ರಿಯಾಲಿಟಿ ಕಾರ್ಯಕ್ರಮ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. 'ಹಿಸ್' ಚಿತ್ರದ ಪ್ರಚಾರ ಸಂದರ್ಭದಲ್ಲಿ ಕಲರ್ಸ್ ವಾಹಿನಿಯೊಂದಿಗೆ ಮಲ್ಲಿಕಾ ಒಪ್ಪಂದ ಮಾಡಿಕೊಂಡಿದ್ದರಂತೆ. ಹಾಗಾಗಿ ಈಗ 'ಚಕ್ ಧೂಮ್ ಧೂಮ್'ನಲ್ಲಿ ಕುಣಿಯಲು ಮುಂದಾಗಿದ್ದಾರೆ.
ಮೂಲಗಳ ಪ್ರಕಾರ ಮಲ್ಲಿಕಾ ಶೆರಾವತ್ ಅವರಿಗೆ ರು.45 ಲಕ್ಷ ಸಂಭಾವನೆ ಕೊಡಲಾಗಿದೆ. ಅದೂ ಕೇವಲ ಒಂದೇ ಒಂದು ಎಪಿಸೋಡಿಗೆ ಎಂಬುದು ವಿಶೇಷ. ಮಲ್ಲಿಕಾ ಕುಣಿತ ಎಂದರೆ ಕೇಳಬೇಕೆ? ಅದರಲ್ಲೂ ಮುಖ್ಯವಾಗಿ ಪಡ್ಡೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆಯಂತೆ.
More from Filmibeat
English summary
Bollywood hot Mallika Sherawat debuts to small screen. She performs dance reality show, Chak Dhoom Dhoom in Colours channel. The shooting start on December 14. Mallika took Rs 45 lakh remuneration for episode.


Click it and Unblock the Notifications











