ಉದಯ ಟಿವಿಯಲ್ಲಿ ತ್ರಿವಿಧ ದಾಸೋಹಿ ಸಿದ್ದಗಂಗಾಶ್ರೀ

ಈ ಧಾರಾವಾಹಿಯನ್ನು ಉದ್ಯಮಿ ಅಶೋಕ್ ಖೇಣಿ ಅವರು ತಮ್ಮ ಎಕೆಕೆ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಮೂಲಕ ನಿರ್ಮಿಸಿದ್ದಾರೆ. ಪತ್ರಕರ್ತ ದೀಪಕ್ ತಿಮ್ಮಯ್ಯ ನಿರ್ದೆಶನದಲ್ಲಿ ಈ ಧಾರಾವಾಹಿ ಮೂಡಿಬಂದಿದೆ. ಸ್ವಾಮೀಜಿ ಅವರ ಹಿನ್ನೆಲೆ, ಬಾಲ್ಯ, ವಿದ್ಯಾಭ್ಯಾಸ, ದೀಕ್ಷೆ, ಸಾಧನೆ, ಸಿದ್ದಗಂಗಾ ಮಠದ ಬೆಳವಣಿಗೆ ಮೊದಲಾದ ಸಂಗತಿಗಳು ಧಾರಾವಾಹಿಯಲ್ಲಿ ಇರುತ್ತವೆ.
ಸಾಕ್ಷ್ಯಚಿತ್ರ ಹಾಗೂ ನಾಟಕೀಯ ಮರುಸೃಷ್ಟಿಯಲ್ಲಿ ವಿಭಿನ್ನವಾಗಿ ಧಾರಾವಾಹಿಯನ್ನು ತೆರೆಗೆ ತರಲಾಗಿದೆ. ಗೀತ ಸಂಗೀತ ಪ್ರವೀಣ್ ಡಿ ರಾವ್ ಅವರದು. ಹಿನ್ನೆಲೆ ಸಂಗೀತ ಸುಮಾರಾಣಿ. ದಿವಂಗತ ಸಿ ಅಶ್ವತ್ಥ್ ಅವರ ಧ್ವನಿಯಲ್ಲಿ ಗೀತೆಯೊಂದಿರುವುದು ವಿಶೇಷ. ಅಕ್ಟೋಬರ್ 10ರಿಂದ ಪ್ರತಿ ಭಾನುವಾರ ಬೆಳಗ್ಗೆ 9 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ತುಮಕೂರು ಸಿದ್ದಗಂಗಾಶ್ರೀ ಶಿವಕುಮಾರ ಸ್ವಾಮಿ ಅಶೋಕ್ ಖೇಣಿ ದೀಪಕ್ ತಿಮ್ಮಯ್ಯ ಉದಯ ವಾಹಿನಿ siddaganga sree shivakuma swamiji tumkur udaya tv ashok kheni


Click it and Unblock the Notifications