For Quick Alerts
    ALLOW NOTIFICATIONS  
    For Daily Alerts

    ಉದಯ ಟಿವಿಯಲ್ಲಿ ತ್ರಿವಿಧ ದಾಸೋಹಿ ಸಿದ್ದಗಂಗಾಶ್ರೀ

    By Rajendra
    |

    ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ, ಸಿದ್ದಗಂಗೆಯ ಶಿವಕುಮಾರ ಸ್ವಾಮಿಯವರ ಜೀವನ ಚರಿತ್ರೆ ಧಾರಾವಾಹಿ ಶೀಘ್ರದಲ್ಲೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿರುತೆರೆಯಲ್ಲಿ ಮೂಡಿಬರಲಿರುವ ಈ ಧಾರಾವಾಹಿ ಲಕ್ಷಾಂತರ ಭಕ್ತರ ಆರಾಧ್ಯ ದೈವ ಸಿದ್ದಗಂಗಾಶ್ರೀಗಳ ಜೀವನ ಚರಿತ್ರೆಯನ್ನು ಹಲವಾರು ಕಂತುಗಳಲ್ಲಿ ಪ್ರಸಾರವಾಗಲಿದೆ.

    ಈ ಧಾರಾವಾಹಿಯನ್ನು ಉದ್ಯಮಿ ಅಶೋಕ್ ಖೇಣಿ ಅವರು ತಮ್ಮ ಎಕೆಕೆ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಮೂಲಕ ನಿರ್ಮಿಸಿದ್ದಾರೆ. ಪತ್ರಕರ್ತ ದೀಪಕ್ ತಿಮ್ಮಯ್ಯ ನಿರ್ದೆಶನದಲ್ಲಿ ಈ ಧಾರಾವಾಹಿ ಮೂಡಿಬಂದಿದೆ. ಸ್ವಾಮೀಜಿ ಅವರ ಹಿನ್ನೆಲೆ, ಬಾಲ್ಯ, ವಿದ್ಯಾಭ್ಯಾಸ, ದೀಕ್ಷೆ, ಸಾಧನೆ, ಸಿದ್ದಗಂಗಾ ಮಠದ ಬೆಳವಣಿಗೆ ಮೊದಲಾದ ಸಂಗತಿಗಳು ಧಾರಾವಾಹಿಯಲ್ಲಿ ಇರುತ್ತವೆ.

    ಸಾಕ್ಷ್ಯಚಿತ್ರ ಹಾಗೂ ನಾಟಕೀಯ ಮರುಸೃಷ್ಟಿಯಲ್ಲಿ ವಿಭಿನ್ನವಾಗಿ ಧಾರಾವಾಹಿಯನ್ನು ತೆರೆಗೆ ತರಲಾಗಿದೆ. ಗೀತ ಸಂಗೀತ ಪ್ರವೀಣ್ ಡಿ ರಾವ್ ಅವರದು. ಹಿನ್ನೆಲೆ ಸಂಗೀತ ಸುಮಾರಾಣಿ. ದಿವಂಗತ ಸಿ ಅಶ್ವತ್ಥ್ ಅವರ ಧ್ವನಿಯಲ್ಲಿ ಗೀತೆಯೊಂದಿರುವುದು ವಿಶೇಷ. ಅಕ್ಟೋಬರ್ 10ರಿಂದ ಪ್ರತಿ ಭಾನುವಾರ ಬೆಳಗ್ಗೆ 9 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X