For Quick Alerts
ALLOW NOTIFICATIONS  
For Daily Alerts

ರವಿ ಬೆಳಗೆರೆಗೆ ಓಪನ್ ಚಾಲೆಂಜ್ ಹಾಕಿದ ಪ್ರತಾಪ್ ಸಿಂಹ

By Mahesh
|

"ಭೀಮಾ ತೀರದಲ್ಲಿ ವಿವಾದ" ಟಿವಿ 9ನಲ್ಲಿ ಚರ್ಚೆಯಾಗುವಷ್ಟು ಕಾಲ ಬರೀ ಚಿತ್ರ ವಿವಾದಕ್ಕೆ ಸೀಮಿತವಾಗಿತ್ತು. ಆಗಾಗ ವಿಜಯ್ ಹಾಗೂ ರವಿ ಬೆಳಗೆರೆ ನಡುವೆ ನೇರ ವಾಗ್ದಾಳಿ ನಡೆದಿತ್ತು.

ಬಿಜಾಪುರದ ಎಂಟು ಕ್ಷೇತ್ರಗಳಲ್ಲಿ ಎಲ್ಲಿ ನಿಂತಿದ್ದರೂ ಗೆದ್ದುಬಿಡುತ್ತಿದ್ದೆ ಎಂದು ರವಿ ಬೆಳೆಗೆರೆ ಅವರು ಹೇಳಿದಾಗ ವಿಜಯ್ ಈಗಲೂ ಚುನಾವಣೆಗೆ ನಿಂತು ಗೆದ್ದು ಬಿಡಿ ಎಂದಿದ್ದು ಇದೇ. ಆದರೆ, ಇದೇ ಚರ್ಚೆ ಸುವರ್ಣ ಸುದ್ದಿ ವಾಹಿನಿಯಲ್ಲಿ ಬೇರೆಯದೇ ರೂಪ ಪಡೆಯಿತು...

ಕರ್ನಾಟಕ ಇಬ್ಬರು ಜನಪ್ರಿಯ ಪತ್ರಕರ್ತರಾದ ರವಿ ಬೆಳೆಗೆರೆ ಹಾಗೂ ಪ್ರತಾಪ್ ಸಿಂಹ ಅವರ ನಡುವಿನ ವೈಯಕ್ತಿಕ ಕಿತ್ತಾಟಕ್ಕೆ ಸುವರ್ಣ ವಾಹಿನಿ ವೇದಿಕೆಯಾಯಿತು.

ಚರ್ಚೆಯ ನಡುವೆ ಪ್ರತಾಪ್ ಸಿಂಹ ಅವರು ರವಿ ಬೆಳೆಗೆರೆಗೆ ಬಹಿರಂಗ ಸವಾಲೆಸೆದರು. ಪ್ರತಾಪ್ ಅವರು ಸಾರ್ವಜನಿಕವಾಗಿ ಮುಂದಿಟ್ಟ ಪ್ರಶ್ನೆಗಳು ಯಾವುದು? ಇಲ್ಲಿದೆ ಓದಿ...

* ರವಿ ಬೆಳಗೆರೆ ನೀವು ಯಾವತ್ತು ಎಲ್ಲರನ್ನು ಹೀಯಾಳಿಸುತ್ತಿರಿ.. ಸಾಹಿತ್ಯ, ರಾಜಕೀಯ, ಸಿನಿಮಾ ಹೀಗೆ ಯಾವುದೇ ವಿಷಯ ಇರಬಹುದು ಚರ್ಚೆ ಮಾಡೋಣ ಎಂದು ನನ್ನ ಓಪನ್ ಚಾಲೆಂಜ್ .

* ನಾನು 13 ವರ್ಷದಿಂದ ಕಾಲಂ ಬರೆಯುತ್ತೀನಿ.. ನಂಗೆ ಫ್ಯಾನ್ ಫಾಲೋಯಿಂಗ್ ಇದೆ. ಬನ್ನಿ ಚರ್ಚಿಸೋಣ.. ಈ ಹಿಂದೆ ಅನಂತ್ ಚಿನಿವಾರ್ ಅವರು ಇಬ್ಬರನ್ನು ಒಟ್ಟಿಗೆ ಸೇರಿಸಿ ಚರ್ಚೆ ಮಾಡೋಣ ಎಂದಿದ್ದರು. ಆಗ ನನ್ನ ಬಚ್ಚಾ ಎಂದು ಕರೆದು ಚರ್ಚೆಯಿಂದ ತಪ್ಪಿಸಿಕೊಂಡಿದ್ದಿರಿ. ಈಗ ಬನ್ನಿ..

* ಎಂದೂ ಮರೆಯದ ಹಾಡು ಕಾರ್ಯಕ್ರಮದಲ್ಲಿ ಈ ಮನುಷ್ಯ ಲೀಲಾವತಿ, ವಿನೋದ್ ರಾಜ್ ಪಕ್ಕದಲ್ಲಿ ನಿಲ್ಲಿಸಿಕೊಂಡೂ ವಿನೋದ್ ದೊಡ್ಡ ವ್ಯಕ್ತಿಯ ಮಗ.. ಆ ವ್ಯಕ್ತಿ ನನ್ನ ಮಗ ಹೇಳಲಿಲ್ಲ ಎಂದರು.. ಆದರೆ, ಆ ವ್ಯಕ್ತಿ ಹೆಸರು ಹೇಳಲಿಲ್ಲ.

* ಇವರ ಮಕ್ಕಳ ಬಗ್ಗೆ ಯಾಕೆ ಎಲ್ಲೂ ಮೊದಲೇ ಹೇಳಲಿಲ್ಲ. ಈಗ ಏನೋ ಬರೆದುಕೊಳ್ಳುತ್ತಾರೆ ತಮ್ಮ ಮತ್ತೊಂದು ಮದುವೆ. ಇನ್ನೊಬ್ಬ ಗಂಡು ಮಗು ಬಗ್ಗೆ...

* ಕೆಟ್ಟದೇ ಸುದ್ದಿಯಾಗುವುದು. ಜನಕ್ಕೂ ಅದು ಹೆಚ್ಚು ಇಷ್ಟ ಎಂಬ ಲಾಜಿಕ್ ಹಿಡಿದುಕೊಂಡು ವೈಯಕ್ತಿಕ ವಿಷಯಗಳನ್ನು ಕೆದಕಿ ಖುಷಿಪಡೋ ವ್ಯಕ್ತಿ ರವಿ ಬೆಳೆಗೆರೆ.

* ಕುಮಾರಸ್ವಾಮಿ ರಾಧಿಕಾ, ಶೋಭಾ ಯಡಿಯೂರಪ್ಪ ಕಲ್ಪಿತ ಸಂಬಂಧ ಅನೈತಿಕತೆ ಆದರೆ ಇವರದ್ದು ಅನೈತಿಕ ಅಲ್ವ.

* ಶ್ರುತಿ ಅವರನ್ನು ಎಳೆ ಮುದುಕಿ ಎಂದು ಕರೆಯುತ್ತಾರಲ್ಲ. ರವಿ ಬೆಳೆಗೆರೆ ಏನು ಎಳೆ ಮುದಕನಾ?

ಎಂಥಾ ಹೊಲಸು ಭಾಷೆ: ಬೇರೆಯವರನ್ನು ಹಡಬೆ ನಾಯಿ ಅನ್ನೋದು, ನನಗೂ ಹಾಗೆ ಕರೆದರು. ನನ್ನ ತಾಯಿ ಏನು ಮಾಡಿದ್ದಾರೆ?. ಇವತ್ತು ನಿರ್ಮಾಪಕ ಅಣಜಿ ಅವರಿಗೆ ಅವಿವೇಕಿ ಅನ್ನೋದು.. ಎಲ್ಲವೂ ಮಾನನಷ್ಟ ಮೊಕದ್ದಮೆ ಅರ್ಹವಾಗಿದೆ.

* ರಮ್ಯಾ ನಿನ್ನ ಅಪ್ಪ ಯಾರು? ಎಂದ್ರು ..ಶ್ರುತಿಯನ್ನು ಎಳೆ ಮುದುಕಿ ಅಂದ್ರು..ತಮ್ಮ ಅಪ್ಪ ಯಾರು ಎಂದು ಹೇಳಿದ್ದಾರಾ? ಯಾರದ್ರು ಸಂಶೋಧನೆ ಮಾಡಿದ್ದಾರಾ?

* ನೋಡಿ.. ಹಂದಿ ಏನು ತಿನ್ನುತ್ತೆ..ಎಲ್ಲರಿಗೂ ಗೊತ್ತು..ಇವರಿಗೆ ಬೇರೆಯವರ ಕೆಟ್ಟ ವಿಚಾರದ ಬಗ್ಗೆ ಮಾತ್ರ ಬೇಕು..

* ಏಡ್ಸ್ ಬಗ್ಗೆ ರವಿ ಬೆಳೆಗೆರೆ ಅಭಿಪ್ರಾಯ ಏನು? ರೂಪಿಣಿಗೆ ಏಡ್ಸ್ ಬಂದಿದೆ ಎಂದು ಹದಿನೈದು ವರ್ಷದ ಹಿಂದೆ ಬರೆದು ಬಿಟ್ಟಿದ್ದರು. ಹೆಣ್ಣು ಮಕ್ಕಳ ಬಗ್ಗೆ ಅನುಕಂಪ ಇಲ್ಲ. ನಿಮ್ಮ ಮಗಳಿಗೆ ಅಜ್ಜ ಯಾರು ಎಂದು ಕೇಳಿದರೆ ಏನು ಆಗಬಹುದು? ಎಂದು ಯೋಚಿಸಿದ್ದೀರಾ?

* ಇವರ ಮಗಳು ಒಂದು ಇಂಗ್ಲೀಷ್ ಪತ್ರಿಕೆ ಮಾಡಿದ್ದರು. ಸಿಟಿ ಬಝ್ ನಲ್ಲೂ ಇದೇ ರೀತಿ ತೇಜೋವಧೆ ಮುಂದುವರೆಯಿತು. ಥ್ಯಾಂಕ್ ಗಾಡ್ ಪತ್ರಿಕೆ ಮುಂದುವರೆಯಲಿಲ್ಲ.

ಒಳ್ಳೆ ಡಬ್ಬಿಂಗ್ ಆರ್ಟಿಸ್ಟ್ ಕಣ್ರೀ: ಇವರ ಹಂತಕಿ ಐ ಲವ್ ಯೂ ಕಾದಂಬರಿ ಬೇಸಿಕ್ ಇನ್ ಸ್ಟಿಂಕ್ಸ್ ಕಾಪಿ. ಸಿಡ್ನಿ ಶೆಲ್ಡನ್ ಅವರ ರೇಜ್ ಆಫ್ ಏಂಜೆಲ್ಸ್ ಭಟ್ಟಿ ಇಳಿಸಿದ್ದಾರೆ.

* ಇವರ ಜನಪ್ರಿಯ ಕಾದಂಬರಿ ಎಲ್ಲವೂ ಅನುವಾದಿತ ಕೃತಿಗಳು ಅದಕ್ಕೆ ಇಲ್ಲಿ ಪ್ರಶಸ್ತಿ ಕೂಡಾ ಪಡೆದಿದ್ದಾರೆ.

* ಶ್ರೀನಗರ ಕಿಟ್ಟಿ ಅವರ ಯಾವ ಸಿನಿಮಾ ಹಿಟ್ ಆಗಿದೆ ಹೇಳಿ. ಆದರೂ ಎಲ್ಲಾ ಸಿನಿಮಾ ಹೊಗಳಿದ್ದಾರೆ.

* ಲೇಟೆಸ್ಟ್ ನಟಿ ಪೂಜಾ ಉಮಾ ಶಿವಶಂಕರ್.. ಬ್ಲೂ ಫಿಲಂ ಪ್ರಕರಣ.. ಇದೇ ಥರಾ ಇವರ ಮಕ್ಕಳ ಬಗ್ಗೆ ಬರೆದರೆ ಏನು ಮಾಡುತ್ತಾರೆ.

ಇವರ ಮಗನ ಪ್ರೇಮ ಪ್ರಕರಣ ಏಕೆ ಮುರಿದು ಬಿತ್ತು? ಫೇಸ್ ಬುಕ್ ನಲ್ಲಿ ಎಲ್ಲವೂ ಬಹಿರಂಗವಾಗಿದೆ.

* ಸಕತ್ ಪುಕ್ಕಲ, ಹೇಡಿ.. ಯಾವತ್ತು ಬಹಿರಂಗ ಹೋರಾಟಕ್ಕೆ ಇಳಿಯುವುದಿಲ್ಲ ಈ ವ್ಯಕ್ತಿ

* ಮನೋಹರ್ ಮಳಗಾಂವಕರ್ ಬಗ್ಗೆ ಗೊತ್ತಿರಲೇ ಇಲ್ಲ. ವಿಕದಲ್ಲಿ ವರದಿ ಬಂದ ಮೇಲೆ ಅವರು ಅಲ್ಲಿ ಹೋಗಿ ಅವರ ಸಖ್ಯ ಬೆಳೆಸಿದರು. ಅವರ ಕೃತಿಗಳ ಅನುವಾದದ ಹಕ್ಕು ಪಡೆದರು.

* ರಾಜಶೇಖರ ನಾಯ್ಡು ಆ ಭಾಗದ ಹಾಯ್ ಬೆಂಗಳೂರು ವರದಿಗಾರರಾಗಿದ್ದ ಸಂದರ್ಭದಲ್ಲಿ ಭೀಮಾತೀರದ ಹಂತಕರ ಬಗ್ಗೆ ರವಿ ಬೆಳೆಗೆರೆ ತಿಳಿದು ಬಂದಿದೆ.

* ಹಾಯ್ ಬೆಂಗಳೂರಿನಲ್ಲಿ ಚಂದಪ್ಪ ಅವರ ಬಗ್ಗೆ ಬರೆದಿರಬಹುದು. ಹಾಗೆಂದು ಸಮಾಜ ಘಾತುಕರ ಬಗ್ಗೆ ವೈಭವೀಕರಿಸಿ ಬರೆಯುವುದು. ಇತಿಹಾಸ ಎಲ್ಲವೂ ನನ್ನ ಬೌದ್ಧಿಕ ಆಸ್ತಿ ಎನ್ನುವುದು ಸರಿಯಲ್ಲ ಎಂದು ಪ್ರತಾಪ್ ಸಿಂಹ ವಾದಿಸಿದರು.

English summary
Bheema Theeradalli Kannada Film controversy : Journalist Pratap Simha Open Challenge Hi Bangalore Tabloid editor Ravi Belagere to debate with him in public about all social issues and movie. Pratap said during the discussion about courtesy controversy of movie held in Suvarna News Channel on (Apr.7)

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more