ಬಿಗ್ ಬಾಸ್ ರಿಯಾಲಿಟಿ ಶೋಗೆ ಸ್ವಾಮಿ ಅಗ್ನಿವೇಷ್

ಸ್ವಾಮಿ ಅಗ್ನಿವೇಷ್ ಅವರು ಇಲ್ಲೇನು ಮಾಡುತ್ತಾರೆ? ಬಿಗ್ ಬಾಸ್ ರಿಯಾಲಿಟಿ ಶೋನ ಮಹಿಳಾ ಸ್ಪರ್ಧಿಗಳಲ್ಲಿ ಹೊಸ ಉತ್ಸಾಹ ತುಂಬಲಿದ್ದು, ಅವರಲ್ಲಿ ಸಾಮಾಜಿಕಪ್ರಜ್ಞೆಯನ್ನು ಜಾಗೃತಗೊಳಿಸಲಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಸ್ವಾಮೀಜಿಗಳು ಹೇಳಿರುವುದೇನೆಂದರೆ.
ಬಿಗ್ ಬಾಸ್ ಮನೆಯಲ್ಲಿರುವ ಯುವತಿಯರಿಗೆ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಕಿಂಚಿತ್ತೂ ತಿಳುವಳಿಕೆಯಿಲ್ಲ. ಸಮಾಜದಲ್ಲಿ ಅದೆಷ್ಟೋ ಹೆಣ್ಣುಭ್ರೂಣಗಳನ್ನು ಹತ್ಯೆ ಮಾಡಲಾಗುತ್ತಿದೆ. ಸತಿಸಹಗಮನ ಪದ್ಧತಿಯಂತಹ ಸಾಮಾಜಿಕ ಪಿಡುಗಗಳ ಬಗ್ಗೆ ಅವರಿಗೆ ಅರಿವಿತ್ತೋ ಇಲ್ಲವೋ ಗೊತ್ತಿಲ್ಲ. ಇವೆಲ್ಲವನ್ನೂ ತಿಳಿಸಿ ಹೇಳುತ್ತೇನೆ ಎಂದಿದ್ದಾರೆ.
ಈ ರೀತಿಯ ರಿಯಾಲಿಟಿ ಶೋಗಳಲ್ಲಿ ಭಾಗಹಿಸುವುದರಿಂದ ತಮ್ಮ ಗೌರವ, ಘನತೆಗಳೇನು ಕಡಿಮೆಯಾಗಲ್ಲ. ಆರಂಭದಲ್ಲಿ ಶೇ.90ರಷ್ಟು ಮಂದಿ ಈ ಶೋನಲ್ಲಿ ಭಾಗವಹಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ತಾವೇ ಸ್ವತಃ ಕೆಲವೊಂದು ಸಂಚಿಕೆಗಳನ್ನು ನೋಡಿದ ಮೇಲೆ ಭಾಗವಹಿಸಲೇಬೇಕು ಎಂದು ತೀರ್ಮಾನಿಸಿದೆವು ಎನ್ನುತ್ತಾರೆ.
ಒಟ್ಟಿನಲ್ಲಿ ಕಾವಿಧಾರಿ ಸ್ವಾಮೀಜಿಗಳು ಇದೇ ಮೊದಲ ಬಾರಿಗೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಅಡಿಯಿಡುತ್ತಿರುವುದರಿಂದ ಕಾರ್ಯಕ್ರಮ ಕಾವೇರಿದೆ. ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಟೀಂನ ಅಗ್ನಿವೇಷ್ ಎಂಟ್ರಿ ಮೂಲಕ ಕಲರ್ಸ್ ವಾಹಿನಿಯ ಟಿಆರ್‌ಪಿಯಲ್ಲಿ ಗಮನಾರ್ಹ ಏರಿಕೆ ಕಂಡುಬರುವುದು ಗ್ಯಾರಂಟಿಯಾಗಿದೆ. (ಏಜೆನ್ಸೀಸ್)


Click it and Unblock the Notifications











