ಪೊಲೀಸ್ ದಾಳಿ: ವೇಶ್ಯಾವಾಟಿಕೆಯಿಂದ ಭೋಜ್ ಪುರಿ ನಟಿ ಪಾರು

By Srinath

bhojpuri-tv-actress-rescued-from-prostitution
ಪುಣೆ, ಅ. 8: ನಗರದ ಹೊರವಲಯದಲ್ಲಿರುವ ಕುಖ್ಯಾತ ಲೋನಿ ಕಲ್ ಭೋರ್ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಭೋಜ್ ಪುರಿ ಟಿವಿ ನಟಿ ಸೇರಿದಂತೆ 6 ಯುವತಿಯರನ್ನು ವೇಶ್ಯಾವಾಟಿಕೆಯಿಂದ ಪಾರು ಮಾಡಿದ್ದಾರೆ. ಇದೇ ವೇಳೆ, ಲಾಡ್ಜ್ ಮಾಲೀಕ ಅಜಯ್ ಪಾಟೀಲ್ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಕಳೆದ ಭಾನುವಾರ ರಾತ್ರಿ ನಡೆದ ಈ ದಾಳಿಯ ವೇಳೆ ಪೊಲೀಸರು ಲಾಡ್ಜ್ ಮ್ಯಾನೇಜರ್ ಮತ್ತು ಇಬ್ಬರು ವಿಟಪುರುಷರನ್ನು ಬಂಧಿಸಿದ್ದಾರೆ.

ವಿಟಪುರುಷರಿಬ್ಬರೂ ಯುವತಿಯರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸಿದ್ದರು. ಈ ಸಂಬಂಧ ಮೂವರನ್ನೂ ಬಂಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಸುಹಾಸ್ ಗರುಡ ತಿಳಿಸಿದ್ದಾರೆ.

ವೇಶ್ಯಾವಾಟಿಕೆಯಿಂದ ಪಾರು ಮಾಡಲಾದ ಮೂವರು ಯುವತಿಯರು ಪದವೀಧರರು. ಉಳಿದವರು ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದವರು. ಒಬ್ಬ ಯುವತಿ ತಾನು ನಗರಕ್ಕೆ ಬರುವ ಮುನ್ನ ಭೋಜ್ ಪುರಿ ಟಿವಿ ಸೀರಿಯಲ್ ನಟಿ ಎಂದು ಪೊಲೀಸರಿಗೆ ಹೇಳಿದ್ದಾಳೆ.

ಉದ್ಯೋಗ ಅರಸಿ ಬಂದ ಈ ಯುವತಿಯರನ್ನು ಬಂಧಿತ ಆರೋಪಿಗಳು ವಂಚಿಸಿ, ವೇಶ್ಯಾವಾಟಿಕೆಗೆ ದೂಡಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲು ಈ ಯುವತಿಯರು ಮುಂಬೈ ಡ್ಯಾನ್ಸ್ ಬಾರ್ ಗಳಲ್ಲಿ ದುಡಿಯುತ್ತಿದ್ದರು. ಮುಂಬೈನಲ್ಲಿ ಬಾರ್ ಗಳೆಲ್ಲ ಬಂದ್ ಆದ ಮೇಲೆ ಆರೋಪಿಗಳು ಯುವತಿಯರನ್ನು ಪುಸಲಾಯಿಸಿ, ವೇಶ್ಯಾವಾಟಿಕೆಗೆ ತಳ್ಳಿದ್ದಾರೆ. ಕಲ್ಯಾಣಿನಗರದಲ್ಲಿರುವ ಸದರಿ ಲೋನಿ ಕಲ್ ಭೋರ್ ಲಾಡ್ಜ್ ನಲ್ಲಿ ಇವರೆಲ್ಲ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು ಎಂದು ಇನ್ಸ್‌ಪೆಕ್ಟರ್ ಗರುಡ ತಿಳಿಸಿದ್ದಾರೆ.

More from Filmibeat

English summary
A Bhojpuri model-actor was among six women rescued from the flesh trade by the Pune Rural police following a raid on a lodge in Loni Kalbhor on Sunday evening (Oct 2). The police arrested three people. Two of the arrested peopel were agents and the third was the lodge manager.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X