ಸ್ತನ ಜೋಡಣೆ ವೈದ್ಯರಿಂದ ಮಾನಭಂಗ: ಟಿವಿ ನಟಿ ಶಿಕಾ

'2006ರಲ್ಲಿ ಇದೇ ವೈದ್ಯರ ಬಳಿ ನಾನು ಸ್ತನ ಜೋಡಣೆ (ಬ್ರೆಸ್ಟ್ ಇಂಪ್ಲಾಂಟ್) ಮಾಡಿಸಿಕೊಂಡಿದ್ದೆ. ಆದರೆ ಅದು ಸಮಸ್ಯೆಯ ಗೂಡಾಯಿತು. ಅದರ ಬಗ್ಗೆ ಮತ್ತೆ ವೈದ್ಯರ ಬಳಿ ಹೇಳಿಕೊಳ್ಳಲು ಕಳೆದ ವಾರ ಹೋಗಿದ್ದೆ. ಆಗ ಈ ವೈದ್ಯ ಮಹಾಷಯ...' ಎಂದು ಟಿವಿ ನಟಿ ಶಿಕಾ ಜೋಷಿ ಪಿಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
'ಶಸ್ತ್ರಚಿಕಿತ್ಸೆಯಾದ 5 ವರ್ಷಗಳ ಬಳಿಕ ನನ್ನ ಸ್ತನದಲ್ಲಿ ಗಡ್ಡೆಯೊಂದು ಬೃಹದಾಕಾರವಾಗಿ ಬೆಳೆದು ನಿಂತಿತ್ತು. ಅದರ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು. ಆಗ ಸದರಿ ವೈದ್ಯರು ನನ್ನೊಂದಿಗೆ ಅಸ್ಯಭ್ಯವಾಗಿ ವರ್ತಿಸಿ, ಮಾನಭಂಗ ಮಾಡಿದರು' ಎಂದಿ ಶಿಕಾ ದೂರಿದ್ದಾಳೆ.
ಆದರೆ ಶಿಕಾ ದೂರಿನಲ್ಲಿ ಸತ್ಯಾಂಶವಿಲ್ಲ. ಮರುಪರೀಕ್ಷೆಯ ಬಳಿಕ ಆಕೆ ಹಣ ಪಾವತಿಸಿಲ್ಲ. ಬಿಲ್ ಚುಕ್ತಾ ಮಾಡುವಂತೆ ಕೇಳಿದಾಗ ಹೀಗೆಲ್ಲ ಸುಳ್ಳು ಆರೋಪ ಹೊರಿಸಿದ್ದಾಳೆ ಎಂದು ಇದೇ ಕ್ಲಿನಿಕ್ ನ ಮಹಿಳಾ ವೈದ್ಯರೊಬ್ಬರು ವಿವರಿಸಿದ್ದಾರೆ. ಸಾಮಾನ್ಯವಾಗಿ ಮಹಿಳೆಯರನ್ನು ಪರೀಕ್ಷಿಸುವಾಗ ಇಬ್ಬರು ಅಟೆಂಡರ್ ಇರುತ್ತಾರೆ. ಆದ್ದರಿಂದ ಶಿಕಾ ಹೇಳುವಂತಹ ಘಟನೆ ನಡೆದಿರಲು ಸಾಧ್ಯವಿಲ್ಲ ಎಂದು ಮಹಿಳಾ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಮಧ್ಯೆ, ವೈದ್ಯರು ನಟಿ ಶಿಕಾ ಹೇಳಿಕೆಯ ಸತ್ಯಾಸತ್ಯತೆಯನ್ನು ಮನವರಿಕೆ ಮಾಡಿಕೊಂಡ ಬಳಿಕ ದೂರು ದಾಖಲಿಸಿಕೊಳ್ಳುವುದಾಗಿ ಖಾರ್ ಪೊಲೀಸರು ಹೇಳಿದ್ದಾರೆ.


Click it and Unblock the Notifications











