ಸುವರ್ಣ ವಾಹಿನಿಯಲ್ಲಿ ಒಂದೇ ರೂಪ ಎರಡು ಗುಣ

By Rajendra

Paarijatha on Suvarna tv
ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರಾದ ಸುವರ್ಣ ವಾಹಿನಿ ಈಗ ಮತ್ತೊಂದು ಭಿನ್ನ ಕಾರ್ಯಕ್ರಮ ಆರಂಭಿಸಿದೆ. ಅವಳಿ ಜವಳಿ ಅಕ್ಕತಂಗಿಯರ ಕಥೆಯನ್ನಿಟ್ಟುಕೊಂಡು ಸಿದ್ಧವಾಗಿರುವ 'ಪಾರಿಜಾತ' ಧಾರಾವಾಹಿಯನ್ನು ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 6ಕ್ಕೆ ವೀಕ್ಷಿಸಬಹುದು.

ಈ ಕಾರ್ಯಕ್ರಮ ಈಗಾಗಲೆ ಮಲಯಾಳಂ ಏಷ್ಯಾನೆಟ್ ವಾಹಿನಿಯಲ್ಲಿ 'ಪಾರಿಜಾತಂ' ಎಂಬ ಹೆಸರಲ್ಲಿ ಪ್ರಸಾರವಾಗಿತ್ತು. ಅಕ್ಟೋಬರ್ 2008ರಲ್ಲಿ ಆರಂಭವಾದ ಈ ಕಾರ್ಯಕ್ರಮ 500 ಕಂತುಗಳನ್ನು ನಿರಾಯಾಸವಾಗಿ ಪೂರೈಸಿತ್ತು. ಈಗ ಅದೇ ಧಾರಾವಾಹಿ ಕನ್ನಡದಲ್ಲಿ ರೀಮೇಕ್ ಆಗಿದೆ.

ಹಿಂದಿಯಲ್ಲಿ ಹೇಮಮಾಲಿನಿ ಅಭಿನಯದ ಸೀತಾ ಔರ್ ಗೀತಾ, ಶ್ರೀದೇವಿ ನಟಿಸಿರುವ ಚಾಲ್‌ಬಾಜ್, ಕನ್ನಡದಲ್ಲಿ ಕನಸಿನ ರಾಣಿ ಮಾಲಾಶ್ರೀ ಅಭಿನಯದ ರಾಣಿ ಮಹಾರಾಣಿ , ಇವೆಲ್ಲಾ ಅವಳಿ ಅಕ್ಕ ತಂಗಿಯರ ಕಥೆ ಇದ್ದ ಭರ್ಜರಿ ಸಿನೆಮಾಗಳು, ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಿದ ಕಥೆಗಳು. ಈಗ ಅಂಥಾದ್ದೇ ರೋಚಕ ಕಥೆಯೇ ಪಾರಿಜಾತ.

ಆರತಿ ಮತ್ತು ಅರುಂಧತಿ ಅವರದು ರೂಪ ಒಂದೇ ಆದರೂ ಎರಡು ಗುಣ. ಆರತಿ ಸರಳ, ಮೃದುಧೋರಣೆಯ ಹುಡುಗಿ. ಆದರೆ ಅರುಂಧತಿ ಮಾತ್ರ ಇದಕ್ಕೆ ತದ್ವಿರುದ್ಧ. ಅರುಂಧತಿಗೆ ಸರಳವಾಗಿ ಮದುವೆಯಾಗಲು ಇಷ್ಟ. ಆದರೆ ಆರತಿಗೆ ಸಿರಿವಂತ ಹುಡುಗನೇ ಬೇಕು. ಐಶಾರಾಮಿ ಜೀವನ ನಡೆಸಬೇಕು ಎಂಬ ಕನಸು. ಪಾರಿಜಾತ ನೋಡಿ ಆನಂದಿಸಿ. (ಒನ್‌ಇಂಡಿಯಾ ಕನ್ನಡ)

More from Filmibeat

English summary
After a series of fresh ideas for reality shows and fictions, Suvarna announces the launch of a new serial. Paarijatha, a one of its kind serial based on the story of twin sisters. Commencing on November 7th, Paarijatha will be aired Monday to Friday at 6 pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X