1 ಕೋಟಿ ರೂಪಾಯಿಯ ಪ್ರಶ್ನೆ ಎದುರಿಸಿದ ಸುಜಾತ.!
Recommended Video

'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ಇದುವರೆಗೂ 25 ಲಕ್ಷದ ಪ್ರಶ್ನೆ ನೋಡಿದ್ದೀರಾ. ಇದೇ ಮೊದಲ ಸಲ ಒಂದು ಕೋಟಿಯ ಪ್ರಶ್ನೆ ನೋಡುವ ಅವಕಾಶ ಸಿಗಲಿದೆ.
ಹೌದು, 'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ಮೊದಲ ಸ್ಪರ್ಧಿ 50 ಲಕ್ಷ ಪ್ರಶ್ನೆಗೆ ಉತ್ತರ ಕೊಟ್ಟಿರುವ ಸುಳಿವು ಸಿಕ್ಕಿದೆ. ಮತ್ತು 1 ಕೋಟಿ ಪ್ರಶ್ನೆಯನ್ನ ಎದುರಿಸಿದ್ದಾರೆ ಎಂಬ ಪ್ರೋಮೋ ಈಗ ಬಿಡುಗಡೆಯಾಗಿದೆ.
ಬೆಳಗಾವಿ ಮೂಲದ ಸುಜಾತ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಹದಿನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡಿ, ಹದಿನೈದನೇ ಪ್ರಶ್ನೆಯನ್ನ ಎದುರಿಸಿದ್ದಾರೆ.

ಅಂದ್ಹಾಗೆ, ಸುಜಾತ ಅವರಿಗೆ ವಿವಾಹವಾಗಿದ್ದು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿದ್ದಾರೆ. ಇವರ ಬಗ್ಗೆ ಮತ್ತು ಇವರ ಆಟದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು ಅಂದ್ರೆ, ಈ ವಾರದ ಕನ್ನಡದ ಕೋಟ್ಯಧಿಪತಿ ಎಪಿಸೋಡ್ ನೋಡಬೇಕಿದೆ.
ಇದುವರೆಗೂ ಮಂಜುಳಾ ಎಂಬ ಸ್ಪರ್ಧಿ 12.5 ಲಕ್ಷ ಗೆದ್ದಿರುವುದೇ ದಾಖಲೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ 12.5 ಲಕ್ಷ ಗೆಲ್ಲುವ ಮೂಲಕ ಈ ಆವೃತ್ತಿಯಲ್ಲಿ ಗಮನ ಸೆಳೆದಿದ್ದಾರೆ.


Click it and Unblock the Notifications











