ಬಿಗ್ ಬಾಸ್‌ಗೆ ಬಿಗ್ ಶಾಕ್ ; ಮನೆಯಿಂದ ದಿಢೀರ್ ಅಂತ ಹೊರ ಬಂದ ವೈಲ್ಡ್ ಕಾರ್ಡ್‌ ಸ್ಫರ್ಧಿ- ಅಂತದ್ದೇನಾಯ್ತು?

ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿ ಹಲವಾರು ಜನ ''ಬಿಗ್ ಬಾಸ್‌''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಕೂಡ ಮನೆಯಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ.. ''ಬಿಗ್ ಬಾಸ್'' ಕೇವಲ ಮಾನಸಿಕ ಸ್ಫರ್ಧೆ ಅಲ್ಲ. ದೈಹಿಕ ಸ್ಫರ್ಧೆ ಕೂಡ ಹೌದು. ಮಾನಸಿಕವಾಗಿ ಬಲಿಷ್ಠವಾಗಿದ್ದು ದೈಹಿಕವಾಗಿ ಬಲಹೀನರಾಗಿದ್ದರೆ..

ಅಥವಾ ದೈಹಿಕವಾಗಿ ಬಲಶಾಲಿಯಾಗಿ ಮಾನಸಿಕವಾಗಿ ದೌರ್ಬಲ್ಯವನ್ನು ಹೊಂದಿದ್ದರೆ ಈ ಮನೆಯಲ್ಲಿ ಉಳಿಯುವುದು, ಫಿನಾಲೆ ಹಂತದವರೆಗೆ ತಲುಪುವುದು ಅಸಾಧ್ಯ. ಹೀಗಾಗಿಯೇ ವ್ಯಕ್ತಿ ಮತ್ತು ವ್ಯಕ್ತಿತ್ವಗಳ ನಡುವೆ ನಡೆಯುವ ಈ ಸಂಘರ್ಷದಲ್ಲಿ ಭಾಗವಹಿಸಿದ್ದಕ್ಕೆ ಹಲವರು ಹಿಂದೆ ಪಶ್ಚಾತಾಪ ಪಟ್ಟಿದ್ದಾರೆ. ''ಬಿಗ್ ಬಾಸ್'' ಮನೆಯಲ್ಲಿನ ರಂಪ ರಾಮಾಯಣದಿಂದ ಬಳಲಿದ್ದಾರೆ. ಬಳಲುತ್ತಿದ್ದಾರೆ.

10-Day SHOCKER Ayesha Zeenath WALKS OUT of Bigg Boss Telugu 9

ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿ ಆಯೇಷಾ ಜೀನತ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಸದ್ಯ ಚಾಲ್ತಿಯಲ್ಲಿದೆ.

ಹೌದು, ಆಯೇಷಾ ಜೀನತ್.. ಕೇರಳದ ಕಿನ್ನರಿ. ಕಾಲೇಜ್ ಕ್ಯಾಂಪಸ್‌ನಲ್ಲಿ ಇವರ ಗೆಳೆಯ ಗೆಳತಿಯರು ಮೋಜು-ಮಸ್ತಿ ಮಾಡುತ್ತಿದ್ದ ಸಮಯದಲ್ಲಿಯೇ ವಿಜಯ್ ಟಿವಿಯ ''ರೆಡಿ ಸ್ಟೆಡಿ ಗೋ'' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದವರು ಇವರು.

ಆ ನಂತರ ''ಮಾಯ'' ಧಾರಾವಾಹಿಯಲ್ಲಿ ಕಾಣಿಸಿಕೊಂಡ ಆಯೇಷಾ ''ಪೊನ್ಮಗಳ್ ವಂದಾಳ್'' ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡರು. ''ಸತ್ಯ'' ಇವರಿಗೆ ಅಪಾರವಾದ ಜನಪ್ರಿಯತೆ ನೀಡಿದ ಧಾರಾವಾಹಿ. 'ರಾಜಮಗಳ್', ''ಸೆಂಬರುತ್ತಿ'', ''ಸತ್ಯ ಸೀಸನ್ 2'' ಇವರು ಅಭಿನಯಿಸಿರುವ ಕೆಲ ಪ್ರಮುಖ ಧಾರಾವಾಹಿಗಳು.

ಇನ್ನು ''ಉಪ್ಪು ಹುಳಿ ಖಾರಂ'' ವೆಬ್ ಸರಣಿಯಲ್ಲಿ ಕೂಡ ಅಭಿನಯಿಸಿರುವ ಆಯೇಷಾ ಕಮಲ್ ಹಾಸನ್ ಸಾರಥ್ಯದಲ್ಲಿ ಮೂಡಿ ಬಂದಿದ್ದ ತಮಿಳಿನ ''ಬಿಗ್ ಬಾಸ್ ಸೀಸನ್ 6''ರಲ್ಲಿ ಕೂಡ ಭಾಗವಹಿಸಿದ್ದರು. ಮನೆಯಲ್ಲಿ ಹೆಚ್ಚು ಕಡಿಮೆ 63 ದಿನ ಉಳಿದುಕೊಂಡಿದ್ದರು.

10-Day SHOCKER Ayesha Zeenath WALKS OUT of Bigg Boss Telugu 9

ಇಂಥಾ ಆಯೇಷಾ ಜೀನತ್ ಅವರನ್ನು ಈ ಬಾರಿ ತೆಲುಗು ''ಬಿಗ್ ಬಾಸ್‌'' ಸೀಸನ್ 9ಕ್ಕೆ ಆಯ್ಕೆ ಮಾಡಲಾಗಿತ್ತು. ಕೈಗೆ ವೈರ್ಲ್ಡ್ ಕಾರ್ಡ್ ನೀಡಿ 10 ದಿನದ ಹಿಂದೆ ಮನೆಯೊಳಗೆ ಕಳುಹಿಸಲಾಗಿತ್ತು. ಆದರೆ ಈಗ ಆಯೇಷಾ ಜೀನತ್ ಸ್ವಇಚ್ಛೆಯಿಂದ ಮನೆಯಿಂದ ಹೊರ ಬರಲು ನಿರ್ಧಾರ ಮಾಡಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮನೆಯಿಂದ ತಮ್ಮನ್ನು ಹೊರಗಡೆ ಕಳುಹಿಸಿವಂತೆ ಆಯೇಷಾ ''ಬಿಗ್ ಬಾಸ್‌'' ಬಳಿ ಮನವಿಯನ್ನು ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿವೆ.

ಆಯೇಷಾ ಜೀನತ್ ಮನೆಯಿಂದ ಹೊರಗಡೆ ಹೋಗ್ತಾರಾ..? ಅಥವಾ ಮನೆಯಲ್ಲಿಯೇ ಉಳಿದುಕೊಳ್ತಾರಾ..? ಎಂಬ ಪ್ರಶ್ನೆಗೆ ''ಬಿಗ್ ಬಾಸ್‌'' ಇನ್ನೂ ಅಧಿಕೃತ ಉತ್ತರ ನೀಡಿಲ್ಲವಾದರೂ ಒಂದು ವೇಳೆ ಆಯೇಷಾ ಮನೆಯಿಂದ ಹೊರ ಹೋದರೆ ಈ ಬಾರಿಯ ವಾರಾಂತ್ಯದಲ್ಲಿ ಬೇರೆಯವರನ್ನು ಎಲಿಮಿನೇಟ್ ಮಾಡಲಾಗುತ್ತಾ..? ಇಲ್ವಾ..? ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ. ಆಯೇಷಾ ಅವರನ್ನು ಮನೆಯ ಹೊರಗಡೆ ಕಳುಹಿಸಿ ವೈಲ್ಡ್ ಕಾರ್ಡ್ ಮೂಲಕ ಕಳೆದ ವಾರ ಮನೆಯಿಂದ ಹೊರಗಡೆ ಹೋದ ಭರಣಿ ಅವರನ್ನು ಮರಳಿ ಕರೆದುಕೊಂಡು ಬನ್ನಿ ಎಂದು ಮತ್ತೊಂದು ವರ್ಗ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವನ್ನು ಮಾಡುತ್ತಿದೆ.

ಇನ್ನುಳಿದಂತೆ ತನುಜಾ ಪುಟ್ಟಸ್ವಾಮಿ, ರಾಮು ರಾಥೋಡ್, ಸಂಜನಾ ಗಲ್ರಾನಿ, ಕಲ್ಯಾಣ್ ಪಡಾಲ, ರಿತು ಚೌಧರಿ, ಶ್ರೀನಿವಾಸ ಸಾಯೀ, ದಿವ್ಯಾ ವೆಲಾಮುರಿ, ಮತ್ತು ರಮ್ಯಾ ಮೋಕ್ಷಾ ಈ ವಾರ ಡೇಂಜರ್ ಝೋನ್‌ನಲ್ಲಿದ್ದಾರೆ. ಇವರಲ್ಲಿ ಮನೆಯ ಹೊರಗಡೆ ಹೋಗೋದು ಯಾರು..? ಆಯೇಷಾ ಜೀನತ್ ಕಥೆ ಏನು..? ಎಂಬ ಪ್ರಶ್ನೆಗಳಿಗೆ ಈ ಶನಿವಾರ ( ಅಕ್ಟೋಬರ್ 25 ) ಉತ್ತರ ಸಿಗುವ ಸಾಧ್ಯತೆ ಇದೆ.

More from Filmibeat

English summary
Did Ayesha Zeenath quit Bigg Boss Telugu 9 due to a medical emergency? Get the latest confirmed updates on the wild card contestant's abrupt exit.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X