»   » ಕರಿಬಸವಯ್ಯ 'ದೇವಲಿಂಗಯ್ಯ' ಪಾತ್ರಕ್ಕೆ ಗೌತಮ್

ಕರಿಬಸವಯ್ಯ 'ದೇವಲಿಂಗಯ್ಯ' ಪಾತ್ರಕ್ಕೆ ಗೌತಮ್

Posted By:
Subscribe to Filmibeat Kannada
Kannada Actor Karibasavaiah
ಚಲನಚಿತ್ರ ನಟ ಕರಿಬಸವಯ್ಯ ಅವರ ದಿಢೀರ್ ಅಗಲಿಕೆ ಕನ್ನಡ ಚಿತ್ರೋದ್ಯಮಕ್ಕೆ ತೀವ್ರ ಆಘಾತ ತಂದಿತ್ತು. ಅವರು 'ಲಕುಮಿ' ಧಾರಾವಾಹಿಯಲ್ಲಿ ಪೋಷಿಸುತ್ತಿದ್ದ 'ವಿದ್ಯಾ ಮಂತ್ರಿ ದೇವಲಿಂಗಯ್ಯ' ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಅವರ ದಿಢೀರ್ ಅಗಲಿಕೆಯಿಂದ 'ದೇವಲಿಂಗಯ್ಯ' ಪಾತ್ರ ಕತೆ ಏನು ಎಂಬ ಪ್ರಶ್ನೆ ಉದ್ಭವಿಸಿತ್ತು. ಈಗ ಅದಕ್ಕೆ ಉತ್ತರವೂ ಸಿಕ್ಕಿದೆ.

ತಮ್ಮ ನಟನಾ ಕೌಶಲ್ಯದಿಂದ ಕರಿಬಸವಯ್ಯನವರು ಎಲ್ಲರ ಮೆಚ್ಚುಗೆ ಗಳಿಸಿದ್ದರು. 'ದೇವಲಿಂಗಯ್ಯ'ನಾಗಿ ಪರಕಾಯ ಪ್ರವೇಶ ಮಾಡಿದ್ದರು. ಆದರೆ ಅವರ ಕಣ್ಮರೆಯೊಂದಿಗೆ ಈ ಪಾತ್ರವೂ ಎಲ್ಲಿ ಕಾಣೆಯಾಗುತ್ತದೋ ಎಂದು ಸುವರ್ಣ ವಾಹಿನಿ ವೀಕ್ಷಕರು ಆತಂಕಕ್ಕೀಡಾಗಿದ್ದರು. ಆದರೆ ಚಿತ್ರದ ನಿರ್ಮಾಪಕ ಮಿಲನ ಪ್ರಕಾಶ್ ಆ ಪಾತ್ರಕ್ಕೆ ಮರುಜೀವ ಕೊಟ್ಟಿದ್ದಾರೆ.

ದೇವಲಿಂಗಯ್ಯ ಪಾತ್ರಕ್ಕೆ ರಂಗಭೂಮಿ ಕಲಾವಿದ ಗೌತಮ್ ಅವರನ್ನು ಕರೆತಂದಿದ್ದಾರೆ. ಇನ್ನು ಮುಂದೆಯೂ ದೇವಲಿಂಗಯ್ಯ ಪಾತ್ರ ಮುಂದುವರಿಯಲಿದೆ. 'ಲಕುಮಿ' ಧಾರಾವಾಹಿ ಈಗಾಗಲೆ 454 ಸಂಚಿಕೆಗಳನ್ನು ಪೂರೈಸಿದೆ. ಶುಕ್ರವಾರ (ಫೆ.10) ರಾತ್ರಿ 9.30ಕ್ಕೆ ಸುವರ್ಣ ವಾಹಿನಿಯಲ್ಲಿ ಧಾರಾವಾಹಿಯನ್ನು ಕಣ್ತುಂಬಿಕೊಳ್ಳಬಹುದು. (ಒನ್‌ಇಂಡಿಯಾ ಕನ್ನಡ)

English summary
Kannada actor Karibasavaiah's Devalingaiah role in Suvarna tv mega soap Lakumi is very much appreciated. After his sad demise the role replaced by Gowtham. In that serial he was re-enacting the role of scam ridden politicians of present very effectively.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada