ಐದು ಕೋಟಿಗೆ ಆಸೆ ಪಟ್ಟು ಒಂದು ಕೋಟಿ ಜಸ್ಟ್ ಮಿಸ್!
ಐದು ಕೋಟಿ ರುಪಾಯಿಗೆ ಆಸೆಪಟ್ಟು ಒಂದು ಕೋಟಿ ರುಪಾಯಿ ಕಳೆದುಕೊಂಡವನ ಕತೆಯಿದು. ಮನುಷ್ಯನಿಗೆ ಆಸೆ ಇರಬೇಕು ಆದರೆ ದುರಾಸೆ ಇದ್ದರೆ ಹೀಗೇನೆ ಆಗೋದು ನೋಡಿ ಎನ್ನುತ್ತಿದ್ದಾರೆ ಈತನ ಪಾಡನ್ನು ಕಂಡವರು! ಇದು 'ಕೌನ್ ಬನೇಗಾ ಕರೋಡ್‌ಪತಿ'ಯ ಕಮಾಲ್!
ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ 'ಕೌನ್ ಬನೇಗಾ ಕರೋಡ್‌ಪತಿ' ನಾಲ್ಕನೆ ಆವೃತ್ತಿಯಲ್ಲಿ ಸ್ಪರ್ಧಿಗಳು ರು.5 ಕೋಟಿ ಗೆಲ್ಲಬಹುದು. ಆದರೆ ಬಿಗ್ ಬಿ ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕು ಅಷ್ಟೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಉತ್ತರ ಪ್ರದೇಶದ ಪ್ರಶಾಂತ್ ಬಟರ್ ಎಂಬುವವರು ರು.1 ಕೋಟಿವರೆಗೂ ಬಹುಮಾನದ ಮೊತ್ತವನ್ನು ತನ್ನದಾಗಿಸಿಕೊಂಡಿದ್ದರು.
ಆದರೆ ಐದು ಕೋಟಿ ಗೆಲ್ಲಲೇ ಬೇಕು ಎಂದು ನಿಶ್ಚಯಿಸಿದ್ದ ಅವರು ಕಾರ್ಯಕ್ರಮದ ಮುಂದಿನ ಹಂತದಲ್ಲಿ ಮುಗ್ಗರಿಸಿದ್ದಾರೆ. ಕಡೆಗೆ ಅವರಿಗೆ ಸಿಕ್ಕಿದ್ದು ರು.320,000 ಅಷ್ಟೇ. ಕಾರ್ಯಕ್ರಮದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಾ ರು.50 ಲಕ್ಷದವರೆಗೂ ತಲುಪಿದ್ದರು. ಈ ಹಂತದಲ್ಲಿ ಯಾವುದೇ ಲೈಫ್ ಲೈನ್ ಸಂಖ್ಯೆಯನ್ನು ಬಳಸದೆ ರು.1 ಕೋಟಿಯನ್ನು ಪಡೆಯಲು ಅರ್ಹರಾಗಿದ್ದರು.
ಕಡೆಗೆ ಐದು ಕೋಟಿ ಗೆಲ್ಲಬೇಕೆಂಬ ಬಟರ್ ಆಸೆ ನಿರಾಸೆಯಾಗಿದೆ. ಒಂದು ವೇಳೆ ತಮಗೆ ಐದು ಕೋಟಿ ಬಹುಮಾನ ಬಂದಿದ್ದರೆ, ತಾವು ದೀಪಿಕಾ ಪಡುಕೋಣೆ ಜೊತೆ ಅಂಟಾರ್ಟಿಕಾದಲ್ಲಿ ರೋಮ್ಯಾಂಟಿಕ್ ಹಾಲಿಡೇ ಕಳೆಯುತ್ತಿದ್ದೆ. ತಂದೆ ತಾಯಿಗೆ ಬಿಎಂಡಬ್ಲ್ಯು ಐಶಾರಾಮಿ ಕಾರು ಉಡುಗೊರೆಯಾಗಿ ನೀಡುತ್ತಿದ್ದೆ ಎಂದಿದ್ದಾರೆ. ಆದರೆ ಎಲ್ಲವೂ ಠುಸ್ ಆಗಿದೆ.


Click it and Unblock the Notifications











