ಗಂಡನಿಂದ ದೂರವಾಗಿ 10 ವರ್ಷ ; ಒಂಟಿ ಜೀವನ - 2ನೇ ಮದುವೆ ಬಗ್ಗೆ ಮೌನ ಮುರಿದ ಬಿಗ್ ಬಾಸ್ ಸ್ಫರ್ಧಿ

ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಆದರೆ ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿ ಕೈಮೀರಿ ಹೋಗಿರುತ್ತವೆ. ಆಗ ವಿಚ್ಛೇದನ ಪಡೆಯದೇ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ಬರುತ್ತೆ. ನಿರೀಕ್ಷೆಯಂತೆ ಸಂಬಂಧ ಕೂಡ ಮುರಿದು ಬೀಳುತ್ತೆ.

ಹೀಗೆ ದಾಂಪತ್ಯ ಅಂತ್ಯವಾದಾಗ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವರು ಅಳೆದು ತೂಗಿ ಹೊಸ ಭರವಸೆಯ ಜೊತೆ ಹೊಸ ಬದುಕಿಗೆ ಇನ್ನೊಮ್ಮೆ ಮುನ್ನುಡಿ ಬರೆಯಲು ಅಣಿಯಾಗುತ್ತಾರೆ. ಇನ್ನು ಕೆಲವರು ಪ್ರೀತಿಯಲ್ಲಿ ನಂಬಿಕೆ ಕಳೆದುಕೊಳ್ಳದೇ ತಮ್ಮೆಲ್ಲ ನೋವನ್ನು ಮರೆತು ಎರಡನೇ ಮದುವೆಯಾಗುವ ಕುರಿತು ಆಲೋಚನೆ ಮಾಡುತ್ತಾರೆ. ಉದಾಹರಣೆಗೆ ರಶ್ಮಿ ದೇಸಾಯಿ.

10 Years After Divorce Rashami Desai is Ready to Believe in Love Again I Am Open to Marriage

ಹೌದು, ರಶ್ಮಿ ದೇಸಾಯಿ.. ಹಿಂದಿ ಕಿರುತೆರೆಯ ಸುರಸುಂದರಿ. ''ರಾವಣ್''.. ''ಪರಿ ಹು ಮೇ''.. ''ದಿಲ್ ಸೇ ದಿಲ್ ತಕ್''.. ಖ್ಯಾತಿಯ ಚೆಲುವೆ. ''ಉತ್ತರನ್'' ಧಾರಾವಾಹಿ ಮೂಲಕ ಜನಮನ ಗೆದ್ದವರು ಇವರು. ಆದರೆ.. ಇದೇ ''ಉತ್ತರನ್'' ಧಾರಾವಾಹಿಯ ಸಮಯದಲ್ಲಿ ರಶ್ಮಿ ದೇಸಾಯಿ ಧಾರಾವಾಹಿಯಲ್ಲಿ ಆಕ್ಟ್ ಮಾಡುತ್ತಿದ್ದ ನಂದೀಶ್ ಸಂಧು ಅವರಿಗೆ ಮನ ಸೋತಿದ್ದರು. ಆ ನಂತರ 2012ರಲ್ಲಿ ಮದುವೆ ಕೂಡ ಆದರು.

ಆದರೆ ದುರಾದೃಷ್ಟ. ಈ ಸಂಬಂಧ ಕೇವಲ ನಾಲ್ಕು ವರ್ಷಕ್ಕೆ ಅಂದರೆ 2016ರಲ್ಲಿ ಮುರಿದು ಬಿತ್ತು. ವಿಚ್ಛೇದನದ ಬಳಿಕ ''ಬಿಗ್ ಬಾಸ್-13''ನೇ ಸೀಸನ್‌ನಲ್ಲಿ ರಶ್ಮಿ ಭಾಗವಹಿಸಿದ್ದರು. ಮೂರನೇ ರನ್ನರ್ ಅಪ್ ಕೂಡ ಆಗಿ ಹೊರ ಹೊಮ್ಮಿದ್ದರು. ಇಷ್ಟೇ ಅಲ್ಲ 2015ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಮತ್ತೊಮ್ಮೆ ''ಬಿಗ್ ಬಾಸ್'' ಮನೆ ಪ್ರವೇಶ ಮಾಡಿದ ರಶ್ಮಿ ಈ ಬಾರಿ 5ನೇ ರನ್ನರ್ ಅಪ್ ಆದರು.

ಆ ನಂತರ ಗಂಡನಿಂದ ದೂರವಾದ ದಿನ ಮನೆಯಿಲ್ಲದೆ ಬೀದಿ ಬದಿ ತನ್ನ ಕಾರನ್ನು ನಿಲ್ಲಿಸಿ ಅದರಲ್ಲೇ ಮಲಗಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಮುಂದುವರೆದು ವಿಚ್ಚೇದನದ ಸಮಯದಲ್ಲಿ 3 ರಿಂದ 3.5 ಕೋಟಿ ರೂಪಾಯಿ ಸಾಲದಲ್ಲಿ ಸಿಕ್ಕಿಕೊಂಡಿದ್ದೆ ಎಂದು ಹೇಳಿದ್ದ ರಶ್ಮಿ ದೇಸಾಯಿ ಆಗ ನನ್ನ ಕೈಯಲ್ಲಿ ಕೆಲಸವಿರಲಿಲ್ಲ, ತಿನ್ನೋಕೆ ಊಟ ಇರಲಿಲ್ಲ ಎಂದು ಹೇಳಿದ್ದರು. ನಾಲ್ಕು ದಿನ ನನ್ನ ಔಡಿ 6 ಕಾರಿನಲ್ಲಿ ಮಲಗಿದ್ದೆ ಎಂದು ಹೇಳಿದ್ದರು. ಈ ಮೂಲಕ ಟ್ರೋಲಿಗರಿಗೆ ಆಹಾರವೂ ಆಗಿದ್ದರು.

ಹೀಗೆ ವಿಚ್ಚೇದನದ ನಂತರ ಬೇರೆ ಬೇರೆ ದಾರಿಯಲ್ಲಿ ರಶ್ಮಿ ದೇಸಾಯಿ ಮತ್ತು ನಂದೀಶ್ ಸಂಧು ನಡೆಯತೊಡಗಿದರು. ಆದರೆ ಈಗ ವಿಚ್ಚೇದನದ ಹತ್ತು ವರ್ಷಗಳ ನಂತರ ರಶ್ಮಿ ದೇಸಾಯಿ ಅವರಲ್ಲಿ ಸಿಂಗಲ್ ಲೈಫ್ ಸಾಕು ಎಂಬ ಭಾವನೆ ಬಂದಂತೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ರಶ್ಮಿ ದೇಸಾಯಿ ಎರಡನೇ ಮದುವೆ ಕುರಿತು ಮಾತನಾಡಿದ್ದಾರೆ.

10 Years After Divorce Rashami Desai is Ready to Believe in Love Again I Am Open to Marriage

ಈ ಕುರಿತು ''ಐಎಎನ್‌ಎಸ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿ ದೇಸಾಯಿ ಮನೆಯಲ್ಲಿ ನನಗೋಸ್ಕರ ನನ್ನ ಪೋಷಕರು ಹುಡುಗನನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಿಜಾ ಹೇಳಬೇಕು ಅಂದರೆ ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿ ನನ್ನ ಬದುಕಿನಲ್ಲಿ ಖಂಡಿತಾ ಬರುತ್ತಾರೆ ಎನ್ನುವ ದೃಢವಾದ ನಂಬಿಕೆ ನನಗೆ ಇದೆ ಎಂದು ಹೇಳಿರುವ ರಶ್ಮಿ ದೇಸಾಯಿ ನಾನು ತುಂಬಾನೇ ಪ್ರ್ಯಾಕ್ಟಿಕಲ್ ವ್ಯಕ್ತಿ, ನನ್ನನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ.

ನಾನು ಭಾವನಾತ್ಮಕವಾಗಿ ಯಾರ ಜೊತೆಯಾದರೂ ಸಂಬಂಧ ಬೆಳೆಸಿದರೆ ಅವರಿಗೆ ನನ್ನ ಹೃದಯ ಮಾತ್ರ ಅಲ್ಲ ನನ್ನ ಆಸ್ತಿ.. ಮನೆ.. ಹಣ.. ಎಲ್ಲವನ್ನೂ ಧಾರೆ ಎರೆಯುತ್ತೇನೆ ಎಂದು ಹೇಳಿರುವ ರಶ್ಮಿಕಾ ದೇಸಾಯಿ ನನಗೆ ಮನುಷ್ಯ ಮತ್ತು ಮನುಷ್ಯತ್ವ ಮುಖ ಎಂದಿದ್ದಾರೆ. ಒಮ್ಮೆ ಮೋಸ ಹೋದ ನಂತರ ನಾನು ಬೇರೆಯವರಿಗೆ ನನ್ನ ಹತ್ತಿರ ಬರುವ ಅವಕಾಶವನ್ನು ನೀಡಿಲ್ಲ ಎಂದು ಹೇಳಿರುವ ರಶ್ಮಿ ದೇವರು ನನಗೊಂದು ದಾರಿ ತೋರಿಸುತ್ತಾನೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಅಂದ್ಹಾಗೇ ರಶ್ಮಿ ದೇಸಾಯಿ ಅವರಿಂದ ದೂರವಾದ ಮೊದಲ ಪತಿ ನಂದೀಶ್ ಸಂಧು ಕಳೆದ ವರ್ಷಾಂತ್ಯದಲ್ಲಿ ''ಭಾಗ್ಯಲಕ್ಷ್ಮಿ''.. ''ರಿಶ್ತೋ ಕಾ ಮಂಝಾ''.. ''ತೇರಿ ಮೇರಿ ಇಕ್ ಜಿಂದ್ರಿ''.. ''ನಾಗಿನ್ 6''.. ಧಾರಾವಾಹಿಗಳಲ್ಲಿ ಅಭಿನಯಿಸಿರುವ ಖ್ಯಾತ ನಟಿ ಕವಿತಾ ಬ್ಯಾನರ್ಜಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಜಿ ಪತಿ ಮತ್ತೆ ಎಂಗೇಜ್ ಆದ ಬೆನ್ನಲ್ಲೇ ರಶ್ಮಿ ದೇಸಾಯಿ ಎರಡನೇ ಮದುವೆಗೆ ತಾವು ಕೂಡ ಸಿದ್ಧ ಎನ್ನುವ ಮಾತುಗಳನ್ನಾಡಿದ್ದಾರೆ.

More from Filmibeat

English summary
"From healing to hope: Rashami Desai reflects on a decade of being single and why she is finally ready to embrace love once more. Read what the actress has to say about her journey toward a second marriage."
Read more about: biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X