For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಲೈಫು ಇಷ್ಟೇನೆ'

  |
  <ul id="pagination-digg"><li class="next"><a href="/tv/10-zee-kannada-channel-sankranti-special-aid0172.html">Next »</a></li></ul>

  ಜೀ ಕನ್ನಡ ವಾಹಿನಿ ಈ 'ಸಂಕ್ರಾಂತಿ'ಗೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.

  ದಿನಾಂಕ: 14/1/2012 ಶನಿವಾರ, ಬೆಳಗ್ಗೆ 9 ಗಂಟೆಗೆ
  ಬೃಹತ್ ಬ್ರಹ್ಮಾಂಡ ಸಂಕ್ರಾಂತಿ ವಿಶೇಷ. ಶ್ರೀ ನರೇಂದ್ರಬಾಬು ಶರ್ಮಾ ಅವರಿಂದ ಸಂಕ್ರಾಂತಿಯ ಮಹತ್ವ, ಆಚರಣೆ, ವ್ರತ, ಪುರಾಣ, ಇತಿಹಾಸಗಳ ಸವಿವರ.

  ಬೆಳಗ್ಗೆ 10 ಗಂಟೆಗೆ
  ಚಿ|ಸೌ|ಸಾವಿತ್ರಿ ಸಂಕ್ರಾಂತಿ ವಿಶೇಷ. ಧಾರಾವಾಹಿಯ ಕಲಾವಿದರ ಜೊತೆಗೆ ಚಲನಚಿತ್ರರಂಗದ ಹಿರಿಯ ಕಲಾವಿದರಾದ ರಾಮಕೃಷ್ಣ, ಜಯಂತಿ, ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಮುಂತಾದವರು ಸಾವಿತ್ರಿ ಸಂಕ್ರಾಂತಿಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಮುಖ ಪಾತ್ರಧಾರಿ ಹಿರಿಯ ನಟಿ ಬಿ.ವಿ.ರಾಧಾ ಮತ್ತು ಪತಿ ಚಿತ್ರ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ದಂಪತಿಗೆ ಅಭಿನಂದನೆ, ಸನ್ಮಾನ. ಹಾಡು, ಮನರಂಜನೆ.

  ಮಧ್ಯಾಹ್ನ 1:00 ಗಂಟೆಗೆ
  ಒಗ್ಗರಣೆ ಡಬ್ಬಿಯಲ್ಲಿ ಸಂಕ್ರಾಂತಿ ವಿಶೇಷ ತಿನಿಸುಗಳ ಪರಿಚಯ. ಚಿತ್ರನಟಿ ಶುಭಾ ಪೂಂಜಾ ವಿಶೇಷ ಅತಿಥಿ.

  ಮಧ್ಯಾಹ್ನ 2:00 ಗಂಟೆಗೆ
  ಲೈಫು ಇಷ್ಟೇನೆ ವಿಶೇಷ ಸಂಚಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ 'ದರ್ಶನ್' ಜೀವನದ ಒಳನೋಟ. ಅವರ ಬಾಲ್ಯ, ಶಾಲಾ ಕಾಲೇಜು ದಿನಗಳು, ಚಿತ್ರರಂಗದೊಂದಿಗಿನ ಹಳೆಯ ನಂಟು, ಧಾರಾವಾಹಿಗಳು, ಚಲನಚಿತ್ರ ಜೀವನ, ಏಳು ಬೀಳುಗಳು, ಇವತ್ತಿನ ಉತ್ತುಂಗ ಸ್ಥಿತಿಯ ವರೆಗಿನ ಸಂತಸ-ಸಂಕಟಗಳನ್ನು ದರ್ಶನ್ ಅವರೇ ಸ್ವತಃ ವಿವರಿಸಿರುವ ಅಪರೂಪದ ಸಂಚಿಕೆ.

  ಮಧ್ಯಾಹ್ನ 3:00 ಗಂಟೆಗೆ
  ಕಾಮಿಡಿ ಎಕ್ಸ್ಪ್ರೆಸ್ ಸಂಕ್ರಾಂತಿ ವಿಶೇಷ ಹಾಸ್ಯ ಕಾರ್ಯಕ್ರಮ. ಕುರಿಗಳು ಪ್ರತಾಪ್ ತಂಡ ಮತ್ತು ನಾಗರಾಜ್ ಕೋಟೆ ತಂಡದವರಿಂದ ಹಾಸ್ಯ ವೈವಿಧ್ಯ.

  ಸಂಜೆ 5:30 ಗಂಟೆಗೆ
  ಶಿವರಾಜ್ ಕುಮಾರ್ ಅಭಿನಯದ 'ತವರಿನ ಸಿರಿ' ಚಲನಚಿತ್ರ

  ರಾತ್ರಿ 10:00 ಗಂಟೆಗೆ
  ಬೆಂಕಿಯಲ್ಲಿ ಅರಳಿದ ಹೂವು ಸಂಕ್ರಾಂತಿ ವಿಶೇಷ ಸಂಚಿಕೆಗಳು. ಸಂಪೂರ್ಣ ಜನಪದ ಹಾಡುಗಳನ್ನು ಬಳಸಿಕೊಂಡು ಹಳ್ಳಿ ಅವಿಭಕ್ತ ಕುಟುಂಬವೊಂದರಲ್ಲಿ ಹಿಂದೆ ಆಚರಿಸುತ್ತಿದ್ದ ಸುಗ್ಗಿ-ಹುಗ್ಗಿ ಸಡಗರ ಚಿತ್ರಣ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/tv/10-zee-kannada-channel-sankranti-special-aid0172.html">Next »</a></li></ul>
  English summary
  Zee Kannada Channel telecasts special programmes on the occasion of Makar Sankranti. Here is the list.&#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X