ಜೀ ಕನ್ನಡದಲ್ಲಿ ಯಾರಿಗುಂಟು ಯಾರಿಗಿಲ್ಲ ಹೊಸ ಸೀಸನ್

ಡಿಸೆಂಬರ್ 12ರಿಂದ ಯಾರಿಗುಂಟು ಯಾರಿಗಿಲ್ಲ 5ನೇ ಸೀಸನ್ ಆರಂಭವಾಗುತ್ತಿದೆ. ರಾತ್ರಿ 9 ರಿಂದ 10ರವರೆಗೂ ಈ ಗೇಮ್ ಶೋ ಪ್ರಸಾರವಾಗಲಿದೆ. ನಟಿ ಶ್ವೇತಾ ಚೆಂಗಪ್ಪ ಶೋ ನಿರೂಪಕರು. 18 ರಿಂದ 35 ವರ್ಷದೊಳಗಿನ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಈ ಬಾರಿಯ ಶೋನಲ್ಲಿ ಗ್ರಾಮೀಣ ಆಟಗಳನ್ನೂ ಸೇರಿಸಿಕೊಳ್ಳಲಾಗಿದೆ. ಕುಂಟಬಿಲ್ಲೆ, ಲಗೋರಿ ಸೇರಿದಂತೆ ಇನ್ನಿತರೆ ಆಟಗಳಿರುತ್ತವೆ. ಸೋಮವಾರದಿಂದ ಬುಧವಾರದವರೆಗೆ ವಾರಕ್ಕೆ ಮೂರು ದಿನ ಯಾರಿಗುಂಟು ಯಾರಿಗಿಲ್ಲ ಗೇಮ್ ಶೋ ರಂಜಿಸಲಿದೆ. ನೋಡಿ ಆನಂದಿಸಿ ನಮಗೂ ತಿಳಿಸಿ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Zee Kannada's popular game show back again. Yaariguntu Yaarigilla season 5 starts from Monday, December 12 at 9:00 PM on Zee Kannada Channel. This is a popular woman based game show. Participants are between the age group of 18 and 35.


Click it and Unblock the Notifications











