ಮಕ್ಕಳ ದಾರಿತಪ್ಪಿಸುತ್ತಿರುವ ಜಾಹೀರಾತಿಗೆ ಬ್ರೇಕ್ ಹಾಕಿ

By * ವಿಘ್ನೇಶ್, ಮಂಗಳೂರು

Put the breaks on TV ads
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತುಗಳು ಮಕ್ಕಳನ್ನು ತಪ್ಪುದಾರಿಹಿಡಿಸುತ್ತಿವೆ. ಈ ಜಾಹೀರಾತುಗಳನ್ನು ನೋಡಿದ ಮುಗ್ಧ ಮನಸ್ಸಿನ ಮಕ್ಕಳು ದಾರಿತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ. ಉದಾಹರಣೆಗೆ ಹೇಳಬೇಕು ಎಂದರೆ, ಮಕ್ಕಳು ವ್ಯಾಯಾಮ ಮಾಡಿದರೆ ಪ್ರಯೋಜನವಿಲ್ಲ. ಇಂತಹ ಪೇಯ ಕುಡಿದರೆ ಖಂಡಿತ ಬೇಗ ಬೆಳೆಯುತ್ತಾರೆ ಎಂಬ ಜಾಹೀರಾತು.

ನೇತಾಡುರಾಮ (ಲಟಕೆ ರಾಮ್) ಜಾಹೀರಾತು ಟಿವಿಯಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತದೆ. ಈ ಜಾಹೀರಾತಿನ ಪ್ರಕಾರ ಮಕ್ಕಳು ವ್ಯಾಯಾಮ ಮಾಡಬೇಕಾಗಿಲ್ಲವಂತೆ. ಆದರೆ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ವ್ಯಾಯಾಮ ಬೇಕುಬೇಕು. ಆದರೆ ಈ ರೀತಿಯ ಜಾಹೀರಾತುಗಳಿಂದ ಮಕ್ಕಳು ಬಹಳ ಬೇಗ ಮೋಸ ಹೋಗುವ ಸಾಧ್ಯತೆಗಳಿವೆ.

ಹಾಗೆಯೇ ಮತ್ತೊಂದು ಜಾಹೀರಾತಿನಲ್ಲಿ ಮಕ್ಕಳು ಬೇಕೆಂದೆ ಪ್ಯಾಂಟನ್ನು ಜಾರಿಸಿ ಕೆಸರಲ್ಲಿ ಕುಣಿಯುತ್ತಾರೆ. ಟೀಚರ್ ಗದರಿದಾಗ ಫ್ರಾಗ್ ಜಂಪ್ ಪ್ರಾಕ್ಟೀಸ್ ಮಾಡುತ್ತಿರುವುದಾಗಿ ಟೀಚರನ್ನೇ ಯಾಮಾರಿಸುತ್ತಾರೆ. ಈ ರೀತಿಯ ಜಾಹೀರಾತುಗಳು ಮಕ್ಕಳು ಸುಳ್ಳು ಹೇಳುವುದನ್ನು ಪ್ರೇರೇಪಿಸುವುದಿಲ್ಲವೇ?

ಈ ರೀತಿಯ ಜಾಹೀರಾತುಗಳಿಂದ ಮಕ್ಕಳು ಬಲುಬೇಗ ಸುಳ್ಳು ಹೇಳುವುದನ್ನು ಕಲಿತುಕೊಳ್ಳು ಸಾಧ್ಯತೆಗಳಿವೆ. ಹಾಗೆಯೇ ತಪ್ಪು ತಪ್ಪು ಸಂದೇಶಗಳನ್ನು ರವಾನಿಸುತ್ತಿವೆ. ಮಕ್ಕಳ ಮನೋವೈಜ್ಞಾನಿಕ ದೃಷ್ಟಿಯಿಂದ ಇಂತಹ ಜಾಹೀರಾತುಗಳಿವೆ ಕಡಿವಾಣ ಹಾಕಬೇಕಾಗಿದೆ. ಜಾಹೀರಾತುಗಳಿಗೆ ಸೆನ್ಸಾರ್ ಬೇಕಲ್ಲವೆ? ಏನಂತೀರಾ?

More from Filmibeat

English summary
Most kids plug into the world of television long before they enter school. TV Advertising is Bad for Children. Put the break on such tv ads those affects children's mental ability and growth says the one of our Oneindia Kannada reader.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X