ಟಿವಿ 9 ವಾಹಿನಿ ಮಾರಾಟಕ್ಕೆ ಸಜ್ಜಾಗಿದೆ?

ಸುಮಾರು 500 ಕೋಟಿ ರೂ ಡೀಲ್ ಮಾಡಲು ಹೂಡಿಕೆದಾರ ಶ್ರೀನಿ ರಾಜು ತಯಾರಿ ನಡೆಸಿದ್ದಾರೆ.
ಶ್ರೀನಿ ರಾಜು ಅವರ ಐಲ್ಯಾಬ್ಸ್ ಹಾಗೂ ಸೈಫ್ ನೆಟ್ವರ್ಕ್ ಕೈಯಿಂದ ಎಬಿಸಿಎಲ್ ನ ಟಿವಿ 9 ಬೇರೊಬ್ಬರ ಕೈ ಸೇರುವ ಕಾಲ ಹತ್ತಿರದಲ್ಲಿದೆ. ಎಬಿಸಿಎಲ್ ನಲ್ಲಿ ಶ್ರೀನಿ ರಾಜು ಐಲ್ಯಾಬ್ಸ್ ಶೇ 65ಕ್ಕೂ ಅಧಿಕ ಷೇರುಗಳನ್ನು ಹೊಂದಿದ್ದಾರೆ.
2004ರಲ್ಲಿ ಟಿವಿ 9 ಪ್ರಾದೇಶಿಕ ಸುದ್ದಿ ವಾಹಿನಿಗಳ ಮೇಲೆ ಶ್ರೀನಿ ರಾಜು ಸುಮಾರು 80 ಕೋಟಿ ರು ಬಂಡವಾಳ ಹೂಡಿದ್ದರು. ಸೈಫ್ ಪಾರ್ಟ್ನರ್ ಸಂಸ್ಥೆ ಸುಮಾರು ಶೇ. 15 ರಷ್ಟು ಬಂಡವಾಳ ಹೂಡಿತ್ತು.
ಯಾರದು ಶ್ರೀನಿ ರಾಜು?: ಬಹುಕೋಟಿ ವಂಚನೆಗೆ ತುತ್ತಾದ ಸತ್ಯ ಕಂಪ್ಯೂಟರ್ ನ ಮಾಜಿ ಸಿಒಒ ಆಗಿದ್ದ ಶ್ರೀನಿ ರಾಜು ನಂತರ ಐಲ್ಯಾಬ್ಸ್ ಅನ್ನು 2000ದಲ್ಲಿ ಸ್ಥಾಪಿಸಿದರು.
ಕಾಂಗ್ನಿಜೆಂಟ್ ಟೆಕ್ನೋಲಜೀಸ್ ಸಲ್ಯೂಷನ್ ನ ಸ್ಥಾಪಕ ಸಿಇಒ ಕೂಡಾ ಆಗಿರುವ ಶ್ರೀನಿರಾಜು ಐಲ್ಯಾಬ್ಸ್ ಅನ್ನು ಪೀಪುಲ್ ಕ್ಯಾಪಿಟಲ್ ಎಂದು ಮರು ನಾಮಕರಣ ಮಾಡಿದರು. ಸುಮಾರು 700 ಮಿಲಿಯನ್ ಡಾಲರ್ ತೂಗುವ ಕಂಪನಿ ಎಬಿಸಿಲ್ ನಲ್ಲಿ ಮಾತ್ರ ತನ್ನ ಷೇರುಗಳನ್ನು ಉಳಿಸಿಕೊಂಡಿದೆ.
ಟಿವಿ 9 ಸಂಸ್ಥೆ ಕನ್ನಡ, ತೆಲುಗು, ಗುಜರಾತಿ, ಬೆಂಗಾಳಿ, ಮರಾಠಿ, ಮಲೆಯಾಳಂ ಹಾಗೂ ಒಂದು ಇಂಗ್ಲೀಷ್ ಸುದ್ದಿ ವಾಹಿನಿಯನ್ನು ಹೊಂದಿದೆ. ಟಿಆರ್ ಪಿ ರೇಟಿಂಗ್ ನಲ್ಲಿ ಟಿವಿ 9 ತನ್ನ ಪ್ರತಿಸ್ಪರ್ಧಿಗಳಿಗಿಂತ ಮುಂದಿರುವುದು ಗಮನಾರ್ಹ.


Click it and Unblock the Notifications











