ಕನ್ನಡ ಕಿರುತೆರೆಗೆ ನಿಮ್ಮ ಪ್ರೀತಿಯ ಸಾಯಿಕುಮಾರ್
ಸಾಯಿಕುಮಾರ್ ಅಂದರೆ ಆಕ್ಷನ್ ಪ್ರಧಾನ ಚಿತ್ರಗಳು ನೆನಪಾಗುತ್ತವೆ. ಅದರಲ್ಲೂ ಮುಖ್ಯವಾಗಿ ಅವರ ಪೊಲೀಸ್ ಚಿತ್ರಗಳು ಕಣ್ಣಮುಂದೆ ಸಾಲುಸಾಲಿಗೆ ನಿಲ್ಲುತ್ತವೆ. ಇದೀಗ ಅದೇ ಸಾಯಿಕುಮಾರ್ ಕನ್ನಡ ಕಿರುತೆರೆಗೆ ಲಗ್ಗ್ಗೆ ಇಟ್ಟರೆ ಹೇಗಿರುತ್ತೆ? ಪ್ರೇಕ್ಷಕರಿಗೆ ಮಸ್ತ್ ಮಜಾ ಅಲ್ಲವೆ?
ಕನ್ನಡ ಕಿರುತೆರೆಯಲ್ಲಿ ಈಗ ರಿಯಾಲಿಟಿ ಶೋಗಳದ್ದೆ ಹವಾ. ಈ ಟಿವಿ ಕನ್ನಡ ವಾಹಿನಿ ಸಹ ಹೊಸ ಗೇಮ್ ಶೋ ಆರಂಭಿಸಲಿದೆ. ಗೇಮ್ ಶೋಗೆ 'ವಾವ್' ಎಂದು ಹೆಸರಿಡಲಾಗಿದೆ. ಆಗಸ್ಟ್ 14ರಿಂದ ಪ್ರತಿ ಶನಿವಾರ ರಾತ್ರಿ 9.30ಕ್ಕೆ ಈಟಿವಿ ಕನ್ನಡ ಚಾಲೂ ಮಾಡಿದರೆ ನಿಮ್ಮ ಮನೆಯಲ್ಲಿ ಸಾಯಿಕುಮಾರ್ ಪ್ರತ್ಯಕ್ಷವಾಗಲಿದ್ದಾರೆ.
ಮನರಂಜನೆ, ಮೋಜು, ಮಸ್ತಿಯಿರುವ ವಾವ್ ಗೇಮ್ ಶೋನಲ್ಲಿ ಕನ್ನಡ ಚಿತ್ರತಾರೆಯರು ಭಾಗವಹಿಸಲಿದ್ದಾರೆ. ಈಗಾಗಲೆ ಸಾಯಿಕುಮಾರ್ ಈ ಟಿವಿ ತೆಲುಗಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಾರ್ಯಕ್ರಮ ಅಲ್ಲಿ ಸಾಕಷ್ಟು ಜನಪ್ರಿಯವೂ ಆಗಿದೆ. ಈಗ ಕನ್ನಡದಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ.
ಕಟ್ ಮಾಡಿದ್ರೆ, ಹೌಲ ಹೌಲ, ಝಣ ಝಣ ಕಾಂಚಾಣ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಮೊದಲಾದ ಥ್ರಿಲ್ಲಿಂಗ್ ಸುತ್ತುಗಳು ವಾವ್ ಗೇಮ್ ಶೋನಲ್ಲಿರುತ್ತವೆ. ಚಾಣಾಕ್ಷತೆಯಿಂದ ಈ ಸುತ್ತುಗಳನ್ನು ಪೂರೈಸಿ ಅತ್ಯುತ್ತಮ ಪ್ರದರ್ಶನ ನೀಡಿದವರನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಗೆದ್ದವರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ.


Click it and Unblock the Notifications











