For Quick Alerts
  ALLOW NOTIFICATIONS  
  For Daily Alerts

  ಅನಿಲ್ ಲಾಡ್ ಗೆ ಸಮಯ ವಾಹಿನಿಯ ನೇರ ಹೊಡೆತ

  |
  <ul id="pagination-digg"><li class="next"><a href="/tv/12-i-dont-know-who-is-radhika-anil-lad-aid0189.html">Next »</a></li></ul>

  ಸಮಯ ಟಿವಿಯ Straight Fight ( ಇದು ನೇರ ಹೊಡೆತ) ಕಾರ್ಯಕ್ರಮದಲ್ಲಿ ಭಾನುವಾರ ( ಡಿ 11) ಬಳ್ಳಾರಿಯ ವರ್ಣರಂಜಿತ, ಆಗರ್ಭ ಶ್ರೀಮಂತ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಅವರ ಸಂದರ್ಶನ ನಡೆಯಿತು. ಸಂದರ್ಶನ ನಡೆಸಿದವರು ವಾಹಿನಿಯ ರಾಜಕೀಯ ಬಾತ್ಮಿದಾರ ಚಿದಾನಂದ ಪಟೇಲ್. ಸಂದರ್ಶನ ಆಯ್ದ ಭಾಗ ಯಥಾವತ್ ನಿಮ್ಮ ಮುಂದೆ ಇಡುತ್ತಿದ್ದೇವೆ.

  ಪ್ರ: ರೆಡ್ಡಿಗಳ ಮೇಲೆ ನಿಮಗೆ ಭಯವೇಕೆ?
  ಲಾಡ್: ನಾನು ದೇವರನ್ನು ನಂಬಿದವನು. ನಾನು ಯಾವುದೇ ತಪ್ಪು ಮಾಡಿಲ್ಲ, ಅಕ್ರಮವಾಗಿ ಗಣಿ ಅಥವಾ ಯಾವುದೇ ರೀತಿಯಲ್ಲಿ ದುಡ್ಡು ಸಂಪಾದಿಸಿಲ್ಲ. ಜನಾರ್ಧನ ರೆಡ್ಡಿ ಮಾಡಿದ ತಪ್ಪಿಗೆ ಈಗ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ನನ್ನ ಮೇಲೆ ರೆಡ್ದಿಗಳಿಗೆ ಟಾರ್ಗೆಟ್ ಇದ್ದಿದ್ದು ಒಪ್ಪಿಕೊಳ್ಳುತ್ತೇನೆ. ನನ್ನ ಕಾರಿಗೆ ಬೆಂಕಿ ಇಟ್ಟಿದ್ದು ನಾಡಿನ ಜನತೆಗೆ ತಿಳಿದ ವಿಚಾರ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ.

  ಪ್ರ: ರೆಡ್ದಿಗಳಿಗೆ ನಿಮ್ಮ ಒಡೆತನದ VSL ಸಂಸ್ಥೆಯಿಂದ ಕಪ್ಪ ಸಲ್ಲುತಿತ್ತೆ?
  ಲಾಡ್: ನಾನು ಯಾರಿಗೂ ಕಪ್ಪ ಕೊಡುವ ಅವಶ್ಯಕತೆಯಿಲ್ಲ. ಕಳ್ಳತನ ಮಾಡುತ್ತಿಲ್ಲ, ಗಣಿಗಾರಿಕೆ ಪರವಾನಿಗೆ ತೆಗೆದು ಕೊಂಡು ಮಾಡುತ್ತಿದ್ದೇನೆ. ನನ್ನ ಗಣಿಗಾರಿಕೆ ಒಂದು ವರ್ಷ ಸ್ಥಗಿತ ಗೊಂಡಿತ್ತು. ರೆಡ್ದಿಗಳಿಗೆ ಕಪ್ಪ ಕೊಡುತ್ತಿದ್ದರೆ ನಾನೇಕೆ ಒಂದು ವರ್ಷ ಯಾಕೆ ಗಣಿ ಕೆಲಸ ಬಂದ್ ಮಾಡುತ್ತಿದ್ದೆ.

  ಪ್ರ: ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಮಗೆ ಜವಾಬ್ದಾರಿ ವಹಿಸಿ ತಪ್ಪು ಮಾಡಿತೆ?
  ಲಾಡ್: ನಾನು ಕ್ಷೇತ್ರದ ಸುಮಾರು ಒಂದು ಲಕ್ಷ ಹತ್ತು ಸಾವಿರ ಮತದಾರರನ್ನು ಭೇಟಿ ಮಾಡಿದ್ದೆ. ಅಲ್ಲಿ ನಮಗೆ ಕಾರ್ಯಕರ್ತರೇ ಇಲ್ಲ. ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 80 ಹಳ್ಳಿಗಳಿವೆ, ನನಗೆ ಸಮಯಾವಕಾಶದ ಕೊರತೆಯಿತ್ತು. ನೀತಿ ಸಂಹಿತೆ ಇರೋದನ್ನು ಶ್ರೀರಾಮುಲು ಸರಿಯಾಗಿ ಬಳಸಿಕೊಂಡರು

  ನಟಿ ರಾಧಿಕಾ ಬಗ್ಗೆ ಅನಿಲ್ ಲಾಡ್ ಹೇಳಿದ ಮಾತೇನು..ಮುಂದೆ ಓದಿ..

  <ul id="pagination-digg"><li class="next"><a href="/tv/12-i-dont-know-who-is-radhika-anil-lad-aid0189.html">Next »</a></li></ul>
  English summary
  Excerpts from Samaya Channel interview; 'Straight Hit'. Interview by Political correspondent Chidanand ಪಟೇಲ್ with Congress MP Anil Lad. This programme telecasted on December 11 at 7PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X