twitter
    For Quick Alerts
    ALLOW NOTIFICATIONS  
    For Daily Alerts

    ಸುವರ್ಣ ವಾಹಿನಿ ಸಮೀಪಕ್ಕೆ ಬಂದು ನಿಂತ ಜನಶ್ರೀ

    By Rajendra
    |

    Janasri TV gains popularity in Karnataka
    ಜನಶ್ರೀ ವಾಹಿನಿ ದಿನದಿಂದ ದಿನಕ್ಕೆ ಜನಪ್ರಿಯತೆಯಲ್ಲಿ ಮುನ್ನುಗ್ಗುತ್ತಿದೆ. ಜ್ಯೋತಿಷ್ಯ, ಭವಿಷ್ಯ ಆಧಾರಿತ ಚರ್ಚೆಗಳು, ರೋಚಕತೆ ಬಿಂಬಿಸುವ ಹಸಿಬಿಸಿ ಸುದ್ದಿಗಳಿಂದ ದೂರವಿರುವ ಜನಶ್ರೀ ವಾಹಿನಿಯನ್ನು ಅನಂತ ಚಿನಿವಾರ್ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಟಿಆರ್‌ಪಿಯಲ್ಲೂ ವಾಹಿನಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ.

    ಜನಶ್ರೀ ವಾಹಿನಿಯಲ್ಲಿ ವಿಶೇಷವಾಗಿ ಗಮನಸೆಳೆಯುತ್ತಿರುವ ಕಾರ್ಯಕ್ರಮಗಳೆಂದರೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶವಾಗಿಟ್ಟು ಬಿತ್ತರವಾಗುತ್ತಿರುವ ಕಾರ್ಯಕ್ರಮಗಳು. ಗಣಿಧಣಿಗಳ ರಾಜಕೀಯ ಮುಖವಾಣಿಯಂತೆ ಎಂದೂ ತೋರಿಸಿಕೊಳ್ಳದ ಜನಶ್ರೀಗೆ ಇತ್ತೀಚೆಗೆ ನಡೆದ ಉಪಚುನಾವಣೆಯ 'ಫ್ಯಾನ್' ಗಾಳಿ ಮಾತ್ರ ತಕ್ಕಮಟ್ಟಿಗೆ ಪ್ರಭಾವ ಬೀರಿತ್ತು.

    ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ ಸುವರ್ಣ ಮತ್ತು ಜನಶ್ರೀ ನಡುವೆ ತೀವ್ರ ಪೈಪೋಟಿ ನಡೆದಿದೆ. ಬೆಂಗಳೂರೇತರ ಕರ್ನಾಟಕದಲ್ಲೂ ಜನಶ್ರೀ ಮುನ್ನುಗ್ಗುತ್ತಿದೆ. ಆದರೆ ಟಿವಿ 9 ಕನ್ನಡ ಸುದ್ದಿ ವಾಹಿನಿ ಮುಂದೆ ಉಳಿದೆಲ್ಲಾ ಕನ್ನಡ ಸುದ್ದಿ ವಾಹಿನಿಗಳು ಹಿಂದೆ ಹಿಂದೆ. ಏತನ್ಮಧ್ಯೆ ರಂಗನಾಥ್ ಅವರ ಹೊಸ ಚಾನಲ್ ಹಾಗೂ ಕಸ್ತೂರಿ ನ್ಯೂಸ್ 24 ಹೊಸ ಚಾನಲ್‌ಗಳು ವಾಹಿನಿಗಳ ನಡುವಿನ ತೀವ್ರ ಸ್ಪರ್ಧೆಗೆ ಕಾರಣವಾಗಲಿವೆ. (ಏಜೆನ್ಸೀಸ್)

    English summary
    Day by day Kannada news channel Janasri TV is gaining popularity and the channel TRP rating is also increasing. Instead of telecasting astrology in morning slot the channel is broadcasting employment opportunities for youth. Janashree is marching forward in ROK category ahead of its immediate rival Suvarna news 24/7 is the high light of the week 48.
    Monday, December 12, 2011, 18:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X