ಶ್ರೀಘ್ರದಲ್ಲೆ ಎಚ್ಡಿಕೆ ಕಸ್ತೂರಿ ನ್ಯೂಸ್ 24 ಕಾರ್ಯಾರಂಭ

ಈಗ ಹೊಸದಾಗಿ ಈ ಪಟ್ಟಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸ್ವಾಮ್ಯದ ಕಸ್ತೂರಿ ನ್ಯೂಸ್ (Kasturi Newz 24) ಶೀಘ್ರದಲ್ಲೆ ಸೇರ್ಪಡೆಯಾಗಲಿದೆ. ಈ ವಾಹಿನಿ ಈಗಾಗಲೆ ಟೆಸ್ಟ್ ಸಿಗ್ನಲ್‌ನಲ್ಲಿ ಪ್ರಸಾರವಾಗುತ್ತಿದೆ. ಉಳಿದ ವಾಹಿನಿಗಳಿಗಿಂತ ಕಾರ್ಯಕ್ರಮಗಳಲ್ಲಿ ಕೊಂಚ ಭಿನ್ನವಾಗಿದೆ ಅನ್ನಿಸುತ್ತದೆ.
ಕಸ್ತೂರಿ ನ್ಯೂಸ್ 24 ಟೆಸ್ಟ್ ಸಿಗ್ನಲ್‌ನಲ್ಲಿ ಸಿನಿಮಾ ಸುದ್ದಿಗಳಿಗೆ ಮೀಸಲಾದ ಗಾಂಧಿಕ್ಲಾಸ್, ಬೆಂಗಳೂರು ಸುದ್ದಿಗಳು ಸೇರಿದಂತೆ ಕ್ಷಣದ ಕ್ಷಣದ ಆಗುಹೋಗುಗಳನ್ನು ಬಿತ್ತರಿಸಲಿದೆ. "ಮುಕ್ತ ನಿರ್ಭೀತ ನ್ಯಾಯಸಮ್ಮತ" ಎಂಬುದು ಕಸ್ತೂರಿ ನ್ಯೂಸ್ 24 ವಾಹಿನಿಯ ಧ್ಯೇಯವಾಕ್ಯ. ಉಳಿದ ಸುದ್ದಿ ವಾಹಿನಿಗಳಿಗಿಂತ ಕಸ್ತೂರಿ ಎಷ್ಟರ ಮಟ್ಟಿಗೆ ಕನ್ನಡಿಗರ ಮನಗೆಲ್ಲುತ್ತದೆ ಎಂಬುದನ್ನು ಕಾದುನೋಡಬೇಕು. ಈಗಾಗಲೆ ವಾಹಿನಿಗೆ ನಾಡಿನ ಗಣ್ಯರು ಶುಭ ಹಾರೈಸಿ ಬೆನ್ನುತಟ್ಟುತಿದ್ದಾರೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Karnataka will soon have another 24 x7 Kannada news and current affairs channel, called Kasthuri Newz 24 - Kannada news channel from Kasthuri Medias owned by Anitha Kumaraswamy. The channel will operate in a space that already has players like Udaya Varthegalu, Suvarna News 24x7, Samaya 24/7, Janashree 24/7 and TV9 Kannada.
ಕಿರುತೆರೆ ಸಮಯ ಟಿವಿ ಕಸ್ತೂರಿ ಟಿವಿ9 ಕನ್ನಡ ಸುವರ್ಣ ವಾಹಿನಿ ಉದಯ ಟಿವಿ ಜನಶ್ರೀ ಅನಿತಾ ಕುಮಾರಸ್ವಾಮಿ small screen samaya tv tv9 kannada udaya tv janasri tv anitha kumaraswamy


Click it and Unblock the Notifications











