twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀಘ್ರದಲ್ಲೆ ಎಚ್ಡಿಕೆ ಕಸ್ತೂರಿ ನ್ಯೂಸ್ 24 ಕಾರ್ಯಾರಂಭ

    By Rajendra
    |

    Anitha Kumaraswamy
    ನಾಗಾಲೋಟದಲ್ಲಿ ಓಡುತ್ತಿರುವ ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಮತ್ತೊಂದು 24/7 ಸುದ್ದಿ ವಾಹಿನಿಯೊಂದು ಶೀಘ್ರದಲ್ಲೆ ಅಡಿಯಿಡಲಿದೆ. ಕನ್ನಡದಲ್ಲಿ ಈಗಾಗಲೆ ಟಿವಿ9 ಕನ್ನಡ, ಸಮಯ 24/7, ಜನಶ್ರೀ 24/7, ಸುವರ್ಣ ನ್ಯೂಸ್ 24/7, ಉದಯ ನ್ಯೂಸ್ ವಾಹಿನಿಗಳು ದೇಶದ ಮೂಲೆ ಮೂಲೆಗಳಿಂದ ಸುದ್ದಿಗಳನ್ನು ಹೆಕ್ಕಿ ನಾಡಿನ ಜನತೆ ಸಮರ್ಪಿಸುತ್ತಿವೆ.

    ಈಗ ಹೊಸದಾಗಿ ಈ ಪಟ್ಟಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸ್ವಾಮ್ಯದ ಕಸ್ತೂರಿ ನ್ಯೂಸ್ (Kasturi Newz 24) ಶೀಘ್ರದಲ್ಲೆ ಸೇರ್ಪಡೆಯಾಗಲಿದೆ. ಈ ವಾಹಿನಿ ಈಗಾಗಲೆ ಟೆಸ್ಟ್ ಸಿಗ್ನಲ್‌ನಲ್ಲಿ ಪ್ರಸಾರವಾಗುತ್ತಿದೆ. ಉಳಿದ ವಾಹಿನಿಗಳಿಗಿಂತ ಕಾರ್ಯಕ್ರಮಗಳಲ್ಲಿ ಕೊಂಚ ಭಿನ್ನವಾಗಿದೆ ಅನ್ನಿಸುತ್ತದೆ.

    ಕಸ್ತೂರಿ ನ್ಯೂಸ್ 24 ಟೆಸ್ಟ್ ಸಿಗ್ನಲ್‌ನಲ್ಲಿ ಸಿನಿಮಾ ಸುದ್ದಿಗಳಿಗೆ ಮೀಸಲಾದ ಗಾಂಧಿಕ್ಲಾಸ್, ಬೆಂಗಳೂರು ಸುದ್ದಿಗಳು ಸೇರಿದಂತೆ ಕ್ಷಣದ ಕ್ಷಣದ ಆಗುಹೋಗುಗಳನ್ನು ಬಿತ್ತರಿಸಲಿದೆ. "ಮುಕ್ತ ನಿರ್ಭೀತ ನ್ಯಾಯಸಮ್ಮತ" ಎಂಬುದು ಕಸ್ತೂರಿ ನ್ಯೂಸ್ 24 ವಾಹಿನಿಯ ಧ್ಯೇಯವಾಕ್ಯ. ಉಳಿದ ಸುದ್ದಿ ವಾಹಿನಿಗಳಿಗಿಂತ ಕಸ್ತೂರಿ ಎಷ್ಟರ ಮಟ್ಟಿಗೆ ಕನ್ನಡಿಗರ ಮನಗೆಲ್ಲುತ್ತದೆ ಎಂಬುದನ್ನು ಕಾದುನೋಡಬೇಕು. ಈಗಾಗಲೆ ವಾಹಿನಿಗೆ ನಾಡಿನ ಗಣ್ಯರು ಶುಭ ಹಾರೈಸಿ ಬೆನ್ನುತಟ್ಟುತಿದ್ದಾರೆ. (ಒನ್‌ಇಂಡಿಯಾ ಕನ್ನಡ)

    English summary
    Karnataka will soon have another 24 x7 Kannada news and current affairs channel, called Kasthuri Newz 24 - Kannada news channel from Kasthuri Medias owned by Anitha Kumaraswamy. The channel will operate in a space that already has players like Udaya Varthegalu, Suvarna News 24x7, Samaya 24/7, Janashree 24/7 and TV9 Kannada.
    Wednesday, October 12, 2011, 12:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X