»   » ಚುಕ್ಕಿಗೆ ಅಮ್ಮಾ ಸಿಗುತ್ತಾಳಾ? ಸುವರ್ಣ ಟಿವಿ ನೋಡಿ

ಚುಕ್ಕಿಗೆ ಅಮ್ಮಾ ಸಿಗುತ್ತಾಳಾ? ಸುವರ್ಣ ಟಿವಿ ನೋಡಿ

Posted By:
Subscribe to Filmibeat Kannada
Asianet Suvarna TV
ವೈವಿಧ್ಯಭರಿತ ಕಾರ್ಯಕ್ರಮಗಳಿಗೆ ಹೆಸರಾಗಿರುವ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಚುಕ್ಕಿ' ಏಪ್ರಿಲ್ 16ರಿಂದ ಆರಂಭವಾಗಲಿದೆ. ತನ್ನ ಕುಟುಂಬದಿಂದ ದೂರವಾದ ಮಗುವೊಂದು ಅಮ್ಮನನ್ನು ಹುಡುಕುವ ಪ್ರಯತ್ನವೇ ಧಾರಾವಾಹಿಯ ಕಥಾವಸ್ತು. ಈ ಧಾರಾವಾಹಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ರಾತ್ರಿ 10ಕ್ಕೆ ಕಣ್ತುಂಬಿಕೊಳ್ಳಬಹುದು.

ಈ ಬಗ್ಗೆ ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರ್ ಮಾತನಾಡುತ್ತಾ, "ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರಾದ ಸುವರ್ಣ ವಾಹಿನಿಯ ಮತ್ತೊಂದು ಭಿನ್ನ ಪ್ರಯತ್ನವಿದು. ತಾಂತ್ರಿಕ ಹಾಗೂ ಹೊಸತನದೊಂದಿಗೆ 'ಚುಕ್ಕಿ' ಮೂಡಿಬರಲಿದೆ. ವೀಕ್ಷಕರಿಗೆ ಖಂಡಿತ ಈ ಧಾರಾವಾಹಿ ಇಷ್ಟವಾಗುತ್ತದೆ" ಎಂದಿದ್ದಾರೆ. ಈ ಧಾರಾವಾಹಿಯ ಅಡಿಬರಹ "ಅಮ್ಮಾ ಎಂದರೆ ಏನೋ ಹರುಷವು..."

ಸದಾ ಹೊಸ ಹೊಸ ಆಲೋಚನೆಗಳ ಮೂಲಕ ವೀಕ್ಷಕರ ಮುಂದೆ ಬರುತ್ತಿರುವ ಸುವರ್ಣ ವಾಹಿನಿ, ಈ ಬಾರಿ ತಾಯಿ ಮಗಳ ಸಂಬಂಧಗಳ ಹೊಸ ಹೂರಣವನ್ನು ನೀಡಲಿದೆ. ಈಗಾಗಲೆ ಈ ಧಾರಾವಾಹಿಯ ಪ್ರೋಮೋಗಳಿಗೆ ಸಿಕ್ಕಾಪಟ್ಟೆ ಪಾಸಿಟೀವ್ ರೆಸ್ಪಾನ್ಸ್ ಸಿಕ್ಕಿದೆ ಎನ್ನುತ್ತಾರೆ ಅನುಪ್ ಚಂದ್ರಶೇಖರ್. ಈ ಹಿಂದೆ ಲಕುಮಿ ಧಾರಾವಾಹಿಯನ್ನು ನಿರ್ಮಿಸಿದ್ದ ಮಿಲನ ಪ್ರಕಾಶ್ ಅವರು ಜೈಮಾತಾ ಕಂಬೈನ್ಸ್ ಲಾಂಛನದಲ್ಲಿ 'ಚುಕ್ಕಿ' ನಿರ್ಮಿಸಿದ್ದಾರೆ. (ಒನ್‍ಇಂಡಿಯಾ ಕನ್ನಡ)

English summary
Asianet Suvarna TV announces the launch of their new fiction show 'Chukki'. The show will go on air from Monday to Friday 10.00pm, Starting from 16th April. The story revolves around a little girl who struggles to meet her mother as she was deserted by her own family members.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada