»   » ಕನ್ನಡದ ಕೋಟ್ಯಾಧಿಪತಿ ಶೋಗೆ ಭರ್ಜರಿ ರೆಸ್ಪಾನ್ಸ್

ಕನ್ನಡದ ಕೋಟ್ಯಾಧಿಪತಿ ಶೋಗೆ ಭರ್ಜರಿ ರೆಸ್ಪಾನ್ಸ್

Posted By:
Subscribe to Filmibeat Kannada
Kannadada Kotyadhipati
ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಹೊಸ ದಾಖಲೆಗೆ ಕಾರಣವಾಗಿರುವ ಗೇಮ್ ಶೋ 'ಕನ್ನಡದ ಕೋಟ್ಯಾಧಿಪತಿ'ಗೆ ಮೊದಲ ದಿನವೇ ಅದ್ಭುತ ಪ್ರತಿಕ್ರಿಕೆ ವ್ಯಕ್ತವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ ಈ ಗೇಮ್ ಶೋಗೆ ಸೋಮವಾರದಿಂದ (ಮಾ.12) ಚಾಲನೆ ಪಡೆದುಕೊಂಡಿದೆ.

ಸೋಮವಾರ ಪ್ರಸಾರವಾದ ಮೊದಲ ಕಂತಿಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾರ್ಯಕ್ರಮ ಮತ್ತಷ್ಟು ಕುತೂಹಲ ಹುಟ್ಟಿಸಿದೆ. ಮುಂಬರುವ ದಿನಗಳಲ್ಲಿ ಸುವರ್ಣ ವಾಹಿನಿ ಮೆಚ್ಚಿನ ಕಾರ್ಯಕ್ರಮವಾಗಿ 'ಕನ್ನಡದ ಕೋಟ್ಯಾಧಿಪತಿ' ಪ್ರೇಕ್ಷಕರ ಮೆಚ್ಚಿನ ಪಡೆಯಲಿದೆ ಎಂಬ ಅಭಿಪ್ರಾಯವನ್ನು ವಾಹಿನಿ ವ್ಯಕ್ತಪಡಿಸಿದೆ.

'ಕನ್ನಡದ ಕೋಟ್ಯಾಧಿಪತಿ'ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವೇ ಸ್ಫೂರ್ತಿಯಾಗಿದೆ. ಸೋಮವಾರದಿಂದ ಗುರುವಾರದ ತನಕ ರಾತ್ರಿ 8ರಿಂದ 9.30ರವರೆಗೆ ನಡೆಯುವ ಈ ಗೇಮ್ ಶೋನಲ್ಲಿ ಬುದ್ಧಿವಂತಿಕೆಯಿಂದ ಪ್ರೇಕ್ಷಕರು ಕೋಟಿ ಕೋಟಿ ರುಪಾಯಿಗಳನ್ನು ಗೆಲ್ಲುವ ಅವಕಾಶಗಳಿವೆ. (ಏಜೆನ್ಸೀಸ್)

English summary
Kannadada Kotyadhipati, this is most thrilling show by Suvarna TV.... yaar aagthare kotyadipathi first show gets good response. Kannadada Kotyadhipati is a Kannada primetime quiz and human drama show hosted by matinee idol Puneet Rajkumaron Suvarna TV.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X