ಬದುಕು ಜಟಕಾ ಬಂಡಿಯಿಂದ ಮಾಳವಿಕಾ ವಾಕ್‌ಔಟ್

By Rajendra

Malavika Avinash
ಇವರ ಹೆಸರು ಮಾಳವಿಕಾ ಅವಿನಾಶ್. ತಮಿಳು-ಕನ್ನಡ ಸಿನಿಮಾ-ಕಿರುತೆರೆಗಳಲ್ಲಿ ಕಲಾವಿದರಾಗಿ ಕೆಲಸ ಮಾಡುವವರು. ಕರ್ನಾಟಕದ ಟಿವಿ ನೋಡುವ ಸಾಕಷ್ಟು ಹೆಣ್ಣುಮಕ್ಕಳು ಅವರನ್ನು ಇಷ್ಟಪಡುತ್ತಾರೆ. ವಿಶೇಷವಾಗಿ ಮಾಯಾಮೃಗ ಎಂಬ ಸೀರಿಯಲ್ಲು ಅವರಿಗೆ ತುಂಬಾ ಹೆಸರು ಕೊಟ್ಟಿತ್ತು. ಬದುಕು ಜಟಕಾ ಬಂಡಿ ಅವರು ಜೀ ಕನ್ನಡದಲ್ಲಿ ನಡೆಸಿಕೊಡುವ ಕಾರ್ಯಕ್ರಮ. ಮೇಡಂ ಬಗ್ಗೆ ಇನ್ನಷ್ಟು ಹೇಳುವುದಾದರೆ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ. ಅಧ್ಯಾತ್ಮದ ಮೂಲಕ ನಿತ್ಯಾನಂದ ಪಡೆಯಬಹುದೇ? ಇದು ಅವರ ಹುಡುಕಾಟವಿರಬಹುದು.

ಜಟಕಾ ಬಂಡಿ ಒಂಥರಾ ಕೌಟುಂಬಿಕ ಕೋರ್ಟು ಇದ್ದಂತೆ. ಅದೂ ಕೂಡಾ ಫಾಸ್ಟ್ ಟ್ರಾಕ್! ಬೇಗ ಬೇಗ ಡ್ರಾ ಬೇಗ ಬೇಗ ಬಹುಮಾನ. ಮಾಳವಿಕಾ ಮೇಡಂ ಒಂದು ಘಂಟೆಯಲ್ಲಿ ಎಂಥೆಂಥದೊ ಫ್ಯಾಮಿಲಿ ಡಿಸ್ಪ್ಯೂಟ್ ಗಳನ್ನು ನಿವಾರಿಸಿ, ನೀವಳಿಸಿ ಎಸೆದಿದ್ದಾರೆ. ಎಲ್ಲವೂ ಖುಲ್ಲಂ ಖುಲ್ಲಾ. ಕ್ಯಾಮೆರಾ ಎದುರೇ ಪಂಚಾಯ್ತಿ. ಬದುಕು ಜಟಕಾ ಬಂಡಿಯಲ್ಲಿ ನಿನ್ನೆ ಒಂದು ಕೇಸು. ಕೇಸು ಜಡಿದಾಕೆ ಒಬ್ಬ ಹೆಣ್ಣುಮಗಳು. ಆಕೆಗೂ ಆತನ ಗಂಡನಿಗೂ ಮನಸ್ತಾಪ. ಇಬ್ಬರು ಗಂಡುಮಕ್ಕಳಿದ್ದಾರೆ. ಮಕ್ಕಳಿಬ್ಬರೂ ತಂದೆಯ ಜತೆ ಇದ್ದಾರೆ. ಬೇರೆಬೇರೆಯಾಗಿರುವ ನಮ್ಮನ್ನು ಮತ್ತೆ ಸೇರಿಸಿ ಅಂತ ಆಕೆ ಬಂದಿದ್ದಳೆನಿಸುತ್ತದೆ.

ಮಾಳವಿಕಾ ಮೇಡಂ ಇಬ್ಬರನ್ನೂ ಮಾತಾಡಿಸತೊಡಗಿದರು. ಮೇಡಂ ಒಂಥರಾ ಅವರೇ ಲಾಯರ್, ಅವರೇ ಜಡ್ಜ್, ಅವರೇ ಲೀಗಲ್ ಎಕ್ಸ್‌ಪರ್ಟ್ ಇದ್ದಂತೆ. ಅವರು ಪಕ್ಕಾ ಹಳ್ಳಿ ಪಂಚಾಯ್ತಿದಾರರಂತೆ ಕಾಣಿಸುತ್ತಾರೆ. ಒಂದೊಂದು ಸರ್ತಿ ಅವರು ದಾರ್ಶನಿಕರ ಶೈಲಿಯಲ್ಲಿ, ತತ್ತ್ವಜ್ಞಾನಿಗಳ ಶೈಲಿಯಲ್ಲಿ ಮಾತಾಡೋದು ಉಂಟು. ಹೀಗಾಗಿ ಅವರ ಬಳಿ ಸಮಸ್ಯೆ ತೆಗೆದುಕೊಂಡು ಬರುವವರಿಗೆ ಅವರು ಸಾಕ್ಷಾತ್ ಜಗನ್ಮಾತೆಯ ಹಾಗೆ ಕಾಣಿಸಿದರೂ ಆಶ್ಚರ್ಯವಿಲ್ಲ. ಕಥೆ ಇನ್ನೂ ವಿಸ್ತಾರವಾಗಿದೆ ನಿಧಾನವಾಗಿ ಓದಿ. ಕಿರುತೆರೆ ಕಾರ್ಯಕ್ರಮಗಳ ಬಗ್ಗೆ ನೀವೂ ನಮಗೆ ಬರೆದು ಕಳುಹಿಸಬಹುದು. (ಕೃಪೆ: ಸಂಪಾದಕೀಯ)

More from Filmibeat

English summary
The much admired actress Malavika Avinash walks out from Zee Kannada's reality show Baduku Jataka Bandi on recently. The show, which is all about real people, real events, real emotions and real judgments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X