ಲೋಕಸಭಾದಲ್ಲಿ ಕನ್ನಡ 'ಪುಟಾಣಿ ಪಾರ್ಟಿ' ಪ್ರದರ್ಶನ

By Rajendra

ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾದ ಕನ್ನಡದ 'ಪುಟಾಣಿ ಪಾರ್ಟಿ' ಚಿತ್ರ ಲೋಕಸಭಾ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಲೋಕಸಭೆಯ ಆಗುಹೋಗುಗಳಿಗೆ ಮೀಸಲಾದ ವಾಹಿನಿ ಇದಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ನವೆಂಬರ್ 13ರಂದು ರಾತ್ರಿ 9 ಗಂಟೆಗೆ ಚಿತ್ರ ಪ್ರಸಾರವಾಗಲಿದೆ.

ಇದೇ ಚಿತ್ರ ಭಾನುವಾರ (ನ.14) ಮಧ್ಯಾಹ್ನ 2 ಗಂಟೆಗೆ ಮರುಪ್ರಸಾರವಾಗಲಿದೆ. ಉಡುಪಿ ಮೂಲದ ಪಿ ಎನ್ ರಾಮಚಂದ್ರ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಕ್ಕಳ ಹಕ್ಕುಗಳ ಕುರಿತಂತೆ ಮಕ್ಕಳು ಸಂಘಟಿತರಾಗುವ ಸೂಕ್ಷ್ಮ ಕಥಾವಸ್ತುವನ್ನೊಳಗೊಂಡಿದೆ.

ಧಾರವಾಡ ಜಿಲ್ಲೆಯ ಹೊನ್ನಾಪುರ ಎಂಬ ಗ್ರಾಮದಲ್ಲಿ 'ಪುಟಾಣಿ ಪಾರ್ಟಿ' ಚಿತ್ರವನ್ನು ಸಂಪೂರ್ಣವಾಗಿಚಿತ್ರಿಸಲಾಗಿದೆ. ಸ್ಥಳೀಯ ಕಲಾವಿದರು ಹಾಗೂ ಹೊಸಬರು ಚಿತ್ರದ ಪಾತ್ರಧಾರಿಗಳು. ಚಿತ್ರದಲ್ಲಿ ಮಕ್ಕಳ ಆಸರೆಗೆ ಸಹಾನುಭೂತಿಯುಳ್ಳ ಶಾಲಾ ಶಿಕ್ಷಕರೊಬ್ಬರು ನೆರವಾಗುತ್ತಾರೆ. ಚಿತ್ರದಲ್ಲಿನ ಆಡುಭಾಷೆಯ ಕೂಡ ಸೊಗಸಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X