ಸ್ವಯಂವರ ರಾಹುಲ್ ಮಹಾಜನ್ ಆಸ್ಪತ್ರೆಗೆ ದಾಖಲು
ಸ್ವಯಂವರ ಕಾರ್ಯಕ್ರಮದ ಮೂಲಕ ಇಡೀ ಮಾಧ್ಯಮಗಳ ಗಮನ ಸೆಳೆದ ರಾಹುಲ್ ಮಹಾಜನ್ ತೀವ್ರ ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಾಜಿ ಮಾದಕ ವ್ಯಸನಿಯಾದ ಈತ ಶುಕ್ರವಾರ ಮಧ್ಯಾಹ್ನ ಮುಂಬೈನ ಸೈಫೀ ಆಸ್ಪತ್ರೆ ಸೇರಿದ್ದಾನೆ.
ದಿಢೀರ್ ಅಂತ ಆತನ ರಕ್ತದ ಒತ್ತಡ ಕುಸಿದ ಕಾರಣ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಸೈಫೀ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಮನಶ್ಯಾಂತಿ ಇಲ್ಲದೆ ಆತ ಖಿನ್ನತೆಯಿಂದ ಬಳಲುತ್ತಿದ್ದ. ರಕ್ತ ಒತ್ತಡ ಕುಸಿತಕ್ಕೆ ಇದೇ ಕಾರಣ ಎಂದು ವೈದ್ಯರು ವಿವರಿಸಿದ್ದಾರೆ. ರಿಯಾಲಿಟಿ ಶೋ ಮೂಲಕ ಮದುವೆಯಾಗಿದ್ದ ಆತ ಬಳಿಕ ದಾಂಪತ್ಯ ಕಲಹಗಳಿಂದ ಹೈರಾಣಾಗಿದ್ದ.
ಈ ಮಾಜಿ ಮಾದಕ ವ್ಯಸನಿಯನ್ನು 'Rahul Dulhaniya Le Jayega' ಎಂಬ ರಿಯಾಲಿಟಿ ಷೋ ಮೂಲಕ ಕೈ ಹಿಡಿದಿದ್ದ ಕೋಲ್ಕತ್ತಾ ಮೂಲದ ರೂಪದರ್ಶಿ ಡಿಂಪಿ ಗಂಗೂಲಿ ನಾಲ್ಕು ತಿಂಗಳು ಸಂಸಾರ ನಡೆಸಿ ಕಡೆಗೆ ವಿಚ್ಛೇದನ ನೀಡಿದ್ದರು. ರಾಹುಲ್ ಮಹಾಜನ್ ಬುದ್ಧಿ ಕಲಿಯದೆ ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿ ಪತ್ನಿ ಡಿಂಪಿ ಮೇಲೆ ದೈಹಿಕ ಹಲ್ಲೆ ಮಾಡಿದ್ದ.


Click it and Unblock the Notifications











