ಲಲನೆಯರಿಂದ ಸ್ವಾಮೀಜಿ ಪಾರು ಮಾಡಿದ ಬಿಗ್ ಬಾಸ್

By Mahesh

Swami Agnivesh
ಯಾರೂ ಏನೇ ಹೇಳಲಿ, ಆರ್ಯ ಸಮಾಜ ಬಹಿಷ್ಕಾರ ಹಾಕಲಿ, ಸ್ವಾಮಿ ಅಗ್ನಿವೇಷ್ ಪಾದಸ್ಪರ್ಶದಿಂದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸಂಚಲನ ಉಂಟಾಗಿದ್ದಂತೂ ನಿಜ. ಸದಾ ಹಂದಿ ನಾಯಿಗಳ ರೀತಿ ಕಚ್ಚಾಡುತ್ತಿದ್ದ ಸ್ಪರ್ಧಿಗಳ ಮಧ್ಯೆದಲ್ಲಿ ಕೆಲಕಾಲವಾದರೂ ಶಾಂತಿಬೀಜ ಬಿತ್ತುವಲ್ಲಿ ಅಗ್ನಿವೇಷ್ ಯಶಸ್ವಿಯಾದರು.

ಆದರೆ, ಕೆಲಕಾಲ ಲೋನಾವಾಲದ ಬಿಗ್ ಬಾಸ್ ಮನೆಯಲ್ಲಿ ನೆಲೆಸಿದ್ದ ಕಾವಿಧಾರಿ ಸ್ವಾಮೀಜಿಯನ್ನು ವಾಪಾಸ್ ಕರೆಸಿಕೊಳ್ಳಲಾಯಿತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಅಗ್ನಿವೇಷ್ ಅವರು ರಿಯಾಲಿಟಿ ಶೋವನ್ನು ಹೊಗಳುತ್ತಾ ನ್ಯೂಸ್ ಚಾನೆಲ್ ಚರ್ಚಾಕೂಟಕ್ಕಿಂತ ಬಿಗ್ ಬಾಸ್ ಕಿತ್ತಾಟವೇ ಅರ್ಥಪೂರ್ಣ ಎಂದು ಹೇಳಿದ್ದಾರೆ.

ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಟೀಂನ ಸಕ್ರಿಯ ಸದಸ್ಯರಾಗಿದ್ದ ಅಗ್ನಿವೇಷ್, ಸ್ವಾಮಿ ದ್ರೋಹದ ಆರೋಪ ಹೊತ್ತು ಹೊರಬೀಳಬೇಕಾಗಿತ್ತು. ಈಗ ಮತ್ತೆ ಟೀಂ ಅಣ್ಣಾಗೆ ಎಂಟ್ರಿ ಕೊಡುವ ಮಾತಾಡುತ್ತಿದ್ದಾರೆ. ಅಣ್ಣಾ ಹಜಾರೆ ಕೂಡಾ ಅಗ್ನಿವೇಷ್ ಅವರನ್ನು ಕ್ಷಮಿಸಿ ತಂಡಕ್ಕೆ ಸೇರಿಸಿಕೊಳ್ಳಲು ಮನಸ್ಸು ಮಾಡಿದ್ದಾರಂತೆ.

ಕಾವಿಧಾರಿ ಅಗ್ನಿವೇಷ್ ಇರುವಿಕೆಯಿಂದ ಮುಜುಗರ ಅನುಭವಿಸುತ್ತಿದ್ದ ತುಂಡುಡುಗೆಯ ಲಲನೆಯರ ಕಷ್ಟ ಅರ್ಥಮಾಡಿಕೊಂಡ ಕಲರ್ಸ್ ವಾಹಿನಿಯ ಟಿಆರ್‌ಪಿ ಗಮನದಲ್ಲಿಟ್ಟುಕೊಂಡು ಸ್ವಾಮಿಯನ್ನು ವಾಪಾಸ್ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

ರಿಯಾಲಿಟಿ ಶೋಗಳಲ್ಲಿ ಭಾಗಹಿಸಿದ್ದರಿಂದ ತಮ್ಮ ಗೌರವ, ಘನತೆಗಳೇನು ಕಡಿಮೆಯಾಗಲ್ಲ. ಆರಂಭದಲ್ಲಿ ಶೇ.90ರಷ್ಟು ಮಂದಿ ಈ ಶೋನಲ್ಲಿ ಭಾಗವಹಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಕೆಲವೊಂದು ಸಂಚಿಕೆಗಳನ್ನು ನೋಡಿದ ಮೇಲೆ ಭಾಗವಹಿಸಲೇಬೇಕು ಎಂದು ತೀರ್ಮಾನಿಸಿದೆ ಎಂದು ಅಗ್ನಿವೇಷ್ ಹೇಳಿದ್ದಾರೆ.

More from Filmibeat

English summary
Social Activist cum Spiritual guru Swami Agnivesh comes out of Bigg Boss after a sort stay. He said reality shows are a better medium to communicate with people than news channels. Swami Agnivesh is seeking to makes entry into Team Anna once again and Anna is also reportedly agreed his come back.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X