39 ವರ್ಷದ ನಟನ ಜೊತೆ ಪ್ರೀತಿಯಲ್ಲಿ ಬಿದ್ದ 26 ವರ್ಷದ ಖ್ಯಾತ ನಟಿ, ಥಾಯ್ಲೆಂಡ್ ಪ್ರವಾಸದ ನಂತರ ಮುರಿದು ಬಿತ್ತು ಸಂಬಂಧ !
ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಾನೆ ಇರುತ್ತೇವೆ. ಇನ್ನೂ.. ಬಣ್ಣದ ಬದುಕಿನಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು. ಇವತ್ತು 'ಐ ಲವ್ ಯೂ' ..
ಎಂದು ಹೇಳಿದವರೇ ಮರು ದಿನ 'ಐ ಹೇಟ್ ಯು' ಎಂದು ಹೇಳಿ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಎಲ್ಲವನ್ನೂ ಮರೆತು ಹೊಸ ಬದುಕಿನ ಹುಡುಕಾಟ ನಡೆಸುತ್ತಾರೆ. ಉದಾಹರಣೆಗೆ ಶಿವಾಂಗಿ ಜೋಶಿ ಮತ್ತು ಕುಶಾಲ್ ಟಂಡನ್.

ಹೌದು.. ಬರ್ಸಾತೇ ಮೌಸಮ್ ಪ್ಯಾರ್ ಕಾ ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡು ಮೋಡಿ ಮಾಡಿದ್ದವರು ಕುಶಾಲ್ ಟಂಡನ್ ಮತ್ತು ಶಿವಾಂಗಿ ಜೋಶಿ. ಆ ನಂತರ ಬಿಗ್‌ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಇವರಿಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಅನ್ನುವ ಅನುಮಾನ ಅನೇಕರಲ್ಲಿತ್ತು. ಆದರೆ. ಇಬ್ಬರು ನಮ್ಮ ನಡುವೆ ಚಿಗುರೊಡೆದಿದ್ದು ಕೇವಲ ಸ್ನೇಹದ ಚಿಲುಮೆ ಎಂದು ಮಾತ್ರ ಹೇಳ್ತಾ ಬಂದಿದ್ದರು.
ಆದರೆ .. ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ವೇ ? ಕಳೆದ ವರ್ಷ ಥಾಯ್ಲೆಂಡ್‌ನಲ್ಲಿ ಮೈಮರೆತು ಇಬ್ಬರು ರೊಮ್ಯಾನ್ಸ್ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿದ್ದವರು ಇಬ್ಬರ ಫೋಟೊ ಕ್ಲಿಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕ್ಷಣಾರ್ಧದಲ್ಲೇ ಈ ಫೋಟೊಗಳು ವೈರಲ್ ಕೂಡ ಆಗಿದ್ದವು.

ಇದಾದ ನಂತರ ಕಳೆದ ಅಕ್ಟೋಬರ್‌ನಲ್ಲಿ ಇಬ್ಬರು ಸತ್ಯವನ್ನು ಒಪ್ಪಿಕೊಂಡಿದ್ದರು. ನಾವು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದರು. 'ಟೈಮ್ಸ್ ಆಫ್ ಇಂಡಿಯಾ'ಗೆ ನೀಡಿದ್ದ ಸಂದರ್ಶನದಲ್ಲಿ ಇಬ್ಬರು ಪ್ರೀತಿಸುತ್ತಿರುವುದು ನಿಜಾ ಆದರೆ ಮದುವೆಯಾಗುವ ಯಾವ ಆತುರ ಕೂಡ ನಮಗೆ ಇಲ್ಲ ಎಂದು ಹೇಳಿದ್ದರು. ಈ ಸುದ್ದಿ ಕೇಳಿ ಈ ಜೋಡಿಯನ್ನು ಇಷ್ಟ ಪಡುವ ಅಭಿಮಾನಿಗಳು ಕೂಡ ಖುಷಿಯಾಗಿದ್ದರು. ಇಬ್ಬರಿಗೂ ಶುಭಾಶಯಗಳನ್ನು ಕೂಡ ಹೇಳಿದ್ದರು.
ಆದರೆ ಹೀಗೆ ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಇಬ್ಬರು ಒಪ್ಪಿಕೊಂಡು ಇನ್ನೂ ಒಂದು ವರ್ಷವಾಗಿಲ್ಲ. ಆಗಲೇ ಈ ಜೋಡಿ ಈಗ ಬೇರೆಯಾಗಿದೆ. ಖುದ್ದು ಕುಶಾಲ್ ಟಂಡನ್ ತಮ್ಮ ಬ್ರೇಕಪ್ ಕಥೆಯನ್ನು ಹಂಚಿಕೊಂಡಿದ್ದಾರೆ. ಆದರೆ ಆ ನಂತರ ಅದೇನಾಯ್ತೋ ಗೊತ್ತಿಲ್ಲ. ತಾವು ಹಂಚಿಕೊಂಡಿದ್ದ ಪೋಸ್ಟ್‌ನ ಡಿಲೀಟ್ ಮಾಡಿದ್ದಾರೆ. ಸದ್ಯ ಇವರು ಹಂಚಿಕೊಂಡಿದ್ದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ.
ವೈರಲ್ ಆದ ಪೋಸ್ಟ್‌ನಲ್ಲಿ ನಾನು ಮತ್ತು ಶಿವಾಂಗಿ ದೂರ ಆಗಿ ಐದು ತಿಂಗಳಾಗಿವೆ ಎಂದು ಕುಶಾಲ್ ಟಂಡನ್ ಬರೆದುಕೊಂಡಿದ್ದರು. ಸದ್ಯ ನಾನು ಸಿಂಗಲ್ ಆಗಿದ್ದು ಖುಷಿಯಾಗಿದ್ದೇನೆ ಎಂದು ಹೇಳಿದ್ದರು.
ಇನ್ನು ಇಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ದೂರ ಆಗಿದ್ದಾರೆ ಎನ್ನುವ ವಿಚಾರ ಅನೇಕರಿಗೆ ಕುಶಾಲ್ ಟಂಡನ್ ಅವರ ಈ ಇನ್‌ಸ್ಟಾಗ್ರಾಮ್ ಸ್ಟೋರಿ ನೋಡಿದ ನಂತರವೇ ಗೊತ್ತಾಗಿದೆ. ಹೀಗಾಗಿ ಅಂದು ಇಬ್ಬರಿಗೆ ಶುಭ ಕೋರಿದ್ದ ಅನೇಕರು ಈಗ ದುಃಖಿತರಾಗಿದ್ದಾರೆ. ದೂರವಾಗಲು ಕಾರಣವೇನು ಎಂದು ಪ್ರಶ್ನೆಯನ್ನು ಮಾಡುತ್ತಿದ್ಧಾರೆ. ಇಬ್ಬರ ಹಳೆಯ ಪೋಸ್ಟ್‌ಗಳನ್ನು ಕೂಡ ಹೆಕ್ಕಿ ತೆಗೆಯುತ್ತಿದ್ದಾರೆ.
ಇದಕ್ಕೆ ಕೈಗನ್ನಡಿ ಎಂಬಂತೆ ಬ್ರೇಕಪ್ ಆಗಿ ಐದು ತಿಂಗಳಾಗಿದೆ ಎಂದು ಕುಶಾಲ್ ಟಂಡನ್ ಹೇಳಿದರೂ ಕೂಡ ಕಳೆದ ಮಾರ್ಚ್‌ನಲ್ಲಿ ಶಿವಾಂಗಿ ಹುಟ್ಟುಹಬ್ಬದ ಶುಭಾಶಯವನ್ನು ಕುಶಾಲ್‌ಗೆ ಕೋರಿದ್ದರು. ತಮ್ಮ ಇಬ್ಬರ ಫೋಟೊವನ್ನು ಹಂಚಿಕೊಂಡು ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದರು. ಶಿವಾಂಗಿ ಅವರ ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ.
ಮತ್ತೊಂದೆಡೆ ಮೇನಲ್ಲಿ ಶಿವಾಂಗಿ ಅವರ ಬರ್ತ್‌ಡೇ ಇತ್ತು. ಆದರೆ ಕುಶಾಲ್ ಇವರಿಗೆ ಶುಭಾಶಯವನ್ನು ಕೋರಿಲ್ಲ. ಈ ವಿಚಾರ ಕೂಡ ಇವರ ಅಭಿಮಾನಿಗಳ ತಲೆಯನ್ನು ಈಗ ಕೆಡಿಸಿದೆ.

ಅಂದ್ಹಾಗೇ ಶಿವಾಂಗಿ ಜೋಶಿ ಅವರಿಗಿಂತ ವಯಸ್ಸಿನಲ್ಲಿ ಕುಶಾಲ್ ಟಂಡನ್ 14 ವರ್ಷ ದೊಡ್ಡವರು. ಕುಶಾಲ್‌ಗೆ ಈಗ 39 ವರ್ಷವಾದರೆ ಶಿವಾಂಗಿಗೆ ಈಗ 26ರ ಹರೆಯ. ಇಬ್ಬರ ನಡುವೆ ಇರುವ ಈ ವಯಸ್ಸಿನ ಅಂತರದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿರಬಹುದು, ಹೊಂದಾಣಿಕೆಯಾಗದೇ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ಹೊರ ಬಂದಿರಬಹುದು ಎನ್ನುವ ಅನುಮಾನವನ್ನು ಸದ್ಯ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧ ಮುರಿದು ಬೀಳಲು ನಿಜವಾದ ಕಾರಣವೇನು ಎನ್ನುವುದು ಇವರಿಬ್ಬರಿಗೆ ಗೊತ್ತು.
ಇನ್ನುಳಿದಂತೆ ಇಂದಿನಿಂದ ಶಿವಾಂಗಿ ಅಭಿನಯದ ಹೊಸ ಧಾರಾವಾಹಿ ಬಡೇ ಅಚ್ಚೇ ಲಗ್ತೇ ಹೋ-ಸೀಸನ್ 3 ಶುರುವಾಗುತ್ತಿದೆ. ಈ ಹಿನ್ನೆಲೆ ಬೇಕು ಬೇಕಂತಲೇ ಶಿವಾಂಗಿ ಜೋಶಿ ಅವರ ಖುಷಿಗೆ ಕೊಳ್ಳಿ ಇಡುವ ಕೆಲಸವನ್ನು ಈ ಮೂಲಕ ಕುಶಾಲ್ ಟಂಡನ್ ಮಾಡಿದ್ದಾರೆ ಎಂದು ಅನೇಕರು ಕಿಡಿ ಕಾರುತ್ತಿದ್ದಾರೆ.


Click it and Unblock the Notifications











