ಚೀನಾದಲ್ಲಿ ಜೀ ಟಿವಿ ಸಿರಿಯಲ್ ಗಳ ಹುಚ್ಚು

By Mahesh

Zee TV enters China
ಚೀನಿಯರ ಮನ ಗೆಲ್ಲಲು ಭಾರತದ ಜೀ ಟಿವಿ ಸಿದ್ಧತೆ ನಡೆಸಿದೆ. ಚೀನಾ ಟಿವಿ ಮಾರುಕಟ್ಟೆ ಪ್ರವೇಶಿಸಿದ ಪ್ರಪ್ರಥಮ ಭಾರತದ ಚಾನೆಲ್ ಎಂಬ ಕೀರ್ತಿಗೆ ಜೀ ಟಿವಿ ಪಾತ್ರವಾಗಿದೆ. ಸುಮಾರು 6 ವರ್ಷಗಳ ಕಾಲ ಗುದ್ದಾಟದ ನಂತರ ಜೀ ಟಿವಿಗೆ ಪ್ರಸಾರದ ಹಕ್ಕು ಸಿಕ್ಕಿದೆ.

ಚೀನಾದ ಸ್ಟಾರ್ ಹೋಟೆಲ್ ಗಳಲ್ಲಿ ಇನ್ಮುಂದೆ ಭಾರತದಲ್ಲಿ ಜನಪ್ರಿಯ ಧಾರಾವಾಹಿಗಳು ರಾರಾಜಿಸಲಿದೆ. ಈಗಾಗಲೇ ಕೆಲ ಧಾರಾವಾಹಿಗಳನ್ನು ಭಾಷಾಂತರ ಮಾಡಿಕೊಂಡು ನೋಡಿರುವ ಚೀನಿಯರು ಮನಸೋತಿದ್ದಾರೆ.

ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಚೀನಾ ಕಡೆಗೆ ಹರಿಸುವುದಾಗಿ ಜೀ ಟಿವಿ ಹೇಳಿದೆ.

ಸ್ಥಳೀಯ ಏಜೆಂಟ್ ಸಿಟಿವಿ-ಎಸ್ ಟಿವಿಪಿ ಜೊತೆ ಮಾತುಕತೆ ನಡೆಸಿರುವ ಜೀ ಟಿವಿ ಏಷ್ಯಾ ಫೆಸಿಫಿಕ್ ಚಾನೆಲ್, ಎಲ್ಲಾ ಸ್ಟಾರ್ ಹೋಟೆಲ್ ಗಳಲ್ಲಿ ಪ್ರಸಾರಕ್ಕೆ ಅನುಮತಿ ಪಡೆಯುವ ಸಾಧ್ಯತೆಯಿದೆ.

ಪ್ರೈಂ ಟೈಮ್ ಕಾಮಿಡಿ, ಬಾಲಿವುಡ್ ಸಿನಿಮಾ, ಕಿರುಧಾರಾವಾಹಿ, ಮಕ್ಕಳ ಕಾರ್ಯಕ್ರಮ, ಗೇಮ್ ಶೋ, ಕ್ರೈಂ ಸರಣಿ, ಮರಾಠಿ ಕಾರ್ಯಕ್ರಮಗಳನ್ನು ಕೂಡಾ ಚೀನಿಯರಿಗೆ ಪರಿಚಯಿಸಲು ಜೀ ಟಿವಿ ತುದಿಗಾಲಲ್ಲಿ ನಿಂತಿದೆ. ಚೀನಿಯರು ಜೀ ಟಿವಿ ಮೆಚ್ಚುತ್ತಾರೋ ಇಲ್ಲವೋ ಕಾದು ನೋಡೋಣ...

More from Filmibeat

English summary
Indian programmes broadcast by Zee TV is now made accessible in leading Chinese hotels. Indian drama serials are already popular in Chinese channels. ZTV is having talks with CTV-STVP sole agent authorised by China.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X