ಅತಿ ಶೀಘ್ರದಲ್ಲೇ ಎಲ್ಲಾ ಟಿವಿಗಳ ಕೇಬಲ್ ಕಟ್

ನಿಮಗೆ ಬೇಕಾದ ಚಾನಲ್‌ಗಾಗಿ ಕೇಬಲ್ ಆಪರೇಟರ್‌ನನ್ನು ಡಿಮ್ಯಾಂಡ್ ಮಾಡಬಹುದು. ದೇಶದ ನಾಲ್ಕು ಮೆಟ್ರೋ ನಗರಗಳ ಟಿವಿ ವೀಕ್ಷಕರಿಗೆ ಶೀಘ್ರದಲ್ಲೇ ತಮಗಿಷ್ಟವಾದ ಚಾನಲ್‌ಗಳನ್ನು ಡಿಮ್ಯಾಂಡ್ ಮಾಡುವ ಅವಕಾಶ ಸಿಗಲಿದೆ.
ಕೇಂದ್ರ ಸಮಾಚಾರ ಮತ್ತು ಪ್ರಸಾರ ಖಾತೆ ಕೇಬಲ್ ಆಪರೇಟರ್‌ಗಳಿಗೆ ಕಡ್ಡಾಯವಾಗಿ ಸೆಟ್‌ಟಾಪ್ ಬಾಕ್ಸ್ (ಎಸ್‌ಟಿಬಿ) ನೀಡಬೇಕೆಂಬ ನಿಬಂಧನೆಗಳನ್ನು ವಿಧಿಸಿಸಿದೆ. ಈ ಹಿನ್ನೆಲೆಯಲ್ಲಿ ಈ ಬದಲಾವಣೆಗಳು ಬರಲಿವೆ.
ಈ ಬಗ್ಗೆ ಸಮಾಚಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೀವ್ ಟಕ್ರೂ ಮಾತನಾಡುತ್ತಾ, ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲಿ ಜೂ.30ರ ಒಳಗೆ ಕೇಬಲ್ ಕ್ಷೇತ್ರ ಡಿಜಿಟಲೈಜೇಷನ್ ಕೆಲಸ ಪೂರ್ಣವಾಗಲಿದೆ ಎಂದಿದ್ದಾರೆ. 2014ರ ಡಿಸೆಂಬರ್ ವೇಳೆಗೆ ಸಮಗ್ರ ಭಾರತ ಡಿಜಿಟಲೈಜೇಷನ್ ಆಗಲಿದೆ.
ಬಳಕೆದಾರರು ಭಾರತದಲ್ಲಿ ಲಭ್ಯವಿರುವ ಯಾವ ಚಾನಲ್ ಬೇಕಾದರೂ ಡಿಮ್ಯಾಂಡ್ ಮಾಡಬಹುದು. ಪ್ರಸ್ತುತ ಅನಲಾಗ್ ಕೇಬಲ್‌ಗಳು ಪರಿಮಿತ ಸಂಖ್ಯೆಯಲ್ಲಿ ಚಾನಲ್‌ಗಳನ್ನು ಪ್ರಸಾರ ಮಾಡುತ್ತಿವೆ. ಯಾವ ಚಾನಲ್ ನೀಡಬೇಕೆಂದು ಸ್ಥಳೀಯ ಕೇಬಲ್ ಆಪರೇಟರ್ ನಿರ್ಧರಿಸುತ್ತಾನೆ. ಡಿಜಿಟಲೈಜೇಷನ್ ಪೂರ್ಣವಾದರೆ ಬಳಕೆದಾರರು ತಮಗಿಷ್ಟವಾದ ಚಾನಲ್‌ಗಳನ್ನು ಆಯ್ಕೆ ಮಾಡಿಕೊಂಡ, ಅಷ್ಟೇ ಚಾನಲ್‌ಗಳಿಗಷ್ಟೇ ಹಣ ನೀಡಬೇಕಾಗುತ್ತದೆ.


Click it and Unblock the Notifications











