twitter
    For Quick Alerts
    ALLOW NOTIFICATIONS  
    For Daily Alerts

    ಟೈಮ್ಸ್ ನೌ ವಾಹಿನಿ ತಲೆ ಮೇಲೆ 100 ಕೋಟಿ ರೂ ದಂಡ

    By Mahesh
    |

    Times Now Rs 100 crore fine
    ಮುಂಬೈ, ನ.14: ಜನಪ್ರಿಯ ಟಿವಿ ಸುದ್ದಿವಾಹಿನಿ ಟೈಮ್ಸ್ ನೌ ಸಂಸ್ಥೆ ಮೇಲೆ ಮಾನನಷ್ಟ ಆರೋಪದ ಮೇಲೆ 100 ಕೋಟಿ ರು ದಂಡ ವಿಧಿಸಲಾಗಿದೆ. ಸುಪ್ರೀಂಕೋರ್ಟ್ ಕೂಡಾ ಬಾಂಬೈ ಹೈಕೋರ್ಟ್ ನೀಡಿದ ಆದೇಶವನ್ನು ಸೋಮವಾರ(ನ.14) ಎತ್ತಿ ಹಿಡಿದಿದೆ.

    ಈ ಮೂಲಕ ಟೈಮ್ಸ್ ನೌ ಸಂಸ್ಥೆ ಈ ಭಾರಿ ಮೊತ್ತದ ದಂಡವನ್ನು ಕಟ್ಟಬೇಕಾಗಿದೆ. ನೌಕರರ ಭವಿಷ್ಯ ನಿಧಿ(ಪಿಎಫ್) ಹಗರಣವೊಂದರ ವರದಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪಿಬಿ ಸಾವಂತ್ ಅವರ ಭಾವಚಿತ್ರವನ್ನು ತಪ್ಪಾಗಿ ಬಳಸಲಾಗಿತ್ತು.

    15 ಸೆಕೆಂಡುಗಳ ಕಾಲ ನ್ಯಾ. ಪಿಬಿ ಸಾವಂತ್ ಹೆಸರು ಹಿಡಿದು ತನಿಖಾ ವರದಿಯನ್ನು ಪ್ರಸಾರ ಮಾಡಲಾಗಿತ್ತು. ಆದರೆ, ನಂತರ ತನ್ನ ತಪ್ಪನ್ನು ತಿದ್ದುಕೊಂಡ ಟೈಮ್ಸ್ ನೌ ಸುಮಾರು ಐದು ದಿನಗಳ ಕಾಲ ತಾನು ಎಸೆಗಿದ ಪ್ರಮಾದಕ್ಕೆ ಕ್ಷಮಾಪಣೆ ಕೋರಿ ಸುದ್ದಿ ಬಿತ್ತರಿಸಿತ್ತು.

    ಇಷ್ಟಕ್ಕೆ ತೃಪ್ತರಾಗದ ನ್ಯಾ. ಸಾವಂತ್, ಟೈಮ್ಸ್ ನೌ ಸಂಸ್ಥೆಯನ್ನು ಕೋರ್ಟಿಗೆಳೆದು, ಲೀಗಲ್ ನೋಟಿಸ್ ಕೊಟ್ಟಿದ್ದರು.

    ಕೇಸ್ ಹಿಸ್ಟರಿ: ಪುಣೆ ಜಿಲ್ಲಾ ನ್ಯಾಯಾಲಯದಲ್ಲಿ ಟೈಮ್ಸ್ ನೌ ಗೆ 100 ಕೋಟಿ ರು ದಂಡ ವಿಧಿಸಲಾಗಿತ್ತು. ಬಾಂಬೈ ಹೈಕೋರ್ಟ್ ನಲ್ಲಿ ಟೈಮ್ಸ್ ನೌ ಮೇಲ್ಮನವಿ ಸಲ್ಲಿಸಿತು. ಬಾಂಬೈ ಹೈ ಕೋರ್ಟ್ ಕೂಡಾ ದಂಡದಿಂದ ಮಾಫಿ ನೀಡದೆ 20 ಕೋಟಿ ರು ಪಾವತಿಸಿ ನಂತರ ಉಳಿದ ಹಣಕ್ಕೆ ಬ್ಯಾಂಕ್ ಖಾತೆ ಗ್ಯಾರಂಟಿ ನೀಡುವಂತೆ ಟೈಮ್ಸ್ ನೌಗೆ ಸೂಚಿಸಿತ್ತು.

    Broadcast Editors' Association ಕೂಡಾ ನ್ಯಾಯಾಂಗ ಹೋರಾಟದ ಸಾಧ್ಯಸಾಧ್ಯತೆ ಬಗ್ಗೆ ತನ್ನ ಕಳಕಳಿಯನ್ನು ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್ ಕೂಡಾ ಹೈ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿರುವುದರಿಂದ ಟೈನ್ಸ್ ನೌ ಸಂಸ್ಥೆಯ ಮುಂದಿನ ಕಾನೂನು ನಡೆ ಕುತೂಹಲ ಮೂಡಿಸಿದೆ.

    English summary
    Popular Television channel, Times Now has been slapped with a fine of Rs 100 crore in a defamation case. The hearing of the case at the Bombay High Court was not stayed by the Supreme Court forcing the channel to pay the huge amount.
    Monday, November 14, 2011, 13:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X