ರಂಗನಾಥ್ ಅವರ ಟಿವಿ ಚಾನಲ್ಲಿಗೆ ಕೇಂದ್ರ ಅಸ್ತು

ಕೇಂದ್ರ ಗೃಹ ಮಂತ್ರಾಲಯವೂ ಸೇರಿದಂತೆ ಒಟ್ಟು ಆರು ಸಚಿವಾಲಯಗಳ ಕಡತಗಳನ್ನು ದಾಟಿ ಬರುವ ಈ ಹಕ್ಕು 11.11.11 ರ ಶುಕ್ರವಾರದಂದು ತಮ್ಮ Writmen Media ಮಾಧ್ಯಮ ಸಂಸ್ಥೆಗೆ ಪ್ರಾಪ್ತವಾಗಿದೆ ಎಂದು ರಂಗ ಹೇಳಿದ್ದಾರೆ.
24x7 ಸುದ್ದಿ ವಾಹಿನಿಗೆ ಅಗತ್ಯವಾದ ಕಚೇರಿ ಸ್ಥಾಪನೆ, ತಾಂತ್ರಿಕ ಉಪಕರಣಗಳ ಖರೀದಿ ಮತ್ತು ಪ್ರತಿಷ್ಠಾಪನೆ, ಸಿಬ್ಬಂದಿ ನೇಮಕ ಮುಂತಾದ ತಯ್ಯಾರಿಗಳು ಒಂದು ಅಂಶವಾದರೆ, ಪ್ರಸಾರ ಹಕ್ಕುಗಳನ್ನು ಪಡೆಯುವುದು ಬಹುಮುಖ್ಯವಾದ ಅಂಶ ಎಂದು ರಂಗಾ ಕನ್ನಡ ಒನ್ ಇಂಡಿಯ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.
"ನಿಮ್ಮ ಅಂತರ್ ಜಾಲ ತಾಣದಲ್ಲೆ ಬರೆದಂತೆ ನಮ್ಮ ವಾಹಿನಿಯ ಹೆಸರು ಕದಂಬ ಎಂಬುದಾಗಿರುವುದಿಲ್ಲ. ಟಿವಿಗೆ ಹೆಸರು ಇನ್ನೂ ಪಕ್ಕಾ ಆಗಿಲ್ಲ". ಸದ್ಯದಲ್ಲೇ ಟಿವಿಗೆ ನಾಮಕರಣ ಮಾಡಲಿದ್ದು ತಮ್ಮ ಟಿವಿ ಚಾನಲ್ಲಿಗೆ ಸೂಕ್ತ ಹೆಸರನ್ನು ಸಲಹೆ ಮಾಡುವಂತೆ ಅಭಿಮಾನಿಗಳನ್ನು ರಂಗನಾಥ್ ಕೋರಿದರು. (ಒನ್‌ಇಂಡಿಯಾ ಕನ್ನಡ)
More from Filmibeat
English summary
According to H R Ranganath a functionary with Writemen Media Pvt ltd has said that the company has obtained Telecast writes from The Center. The company is planning to bring 24/7 news channel in Kannada.
ಕಿರುತೆರೆ ಎಚ್ ಆರ್ ರಂಗನಾಥ್ ನೇಮಕಾತಿ ಉದ್ಯೋಗ ಪತ್ರಕರ್ತ ಟಿವಿ hr ranganath small screen journalist jobs recruitment tv reporter


Click it and Unblock the Notifications











