twitter
    For Quick Alerts
    ALLOW NOTIFICATIONS  
    For Daily Alerts

    ಜೀ ಕನ್ನಡದಲ್ಲಿ ಪುಟಾಣಿ ಹಕ್ಕಿಗಳ ಕುಹು ಕುಹು ನಾದ

    By Rajendra
    |

    ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಕೆಲ ದಿವಸಗಳ ಹಿಂದಷ್ಟೇ ಚಾಲೆಂಜ್ ಸಂಗೀತ ಸಮರ ಸರಣಿ ಸುತ್ತು ಮುಗಿಸಿದ್ದು ಇದೀಗ ಪುನಃ ಮಕ್ಕಳಿಗಾಗಿ ಲಿಟಲ್ ಚಾಂಪ್ಸ್ ಸರಣಿ ಆರಂಭಿಸಿದೆ.

    ಪುಟಾಣಿ ಹಕ್ಕಿಗಳ ಹಾಡಿನ ಹೂಮಳೆ ಇದೇ ಸೆಪ್ಟಂಬರ್ 15 ರಿಂದ ಜೀ ಕನ್ನಡದಲ್ಲಿ ಪ್ರಾರಂಭವಾಗಲಿದ್ದು ಪ್ರತಿ ಬುಧವಾರ ಹಾಗೂ ಗುರುವಾರ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಅದ್ದೂರಿಯಾಗಿ ನಿರ್ಮಿಸಿರುವ ಈ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕರುಗಳಾದ ಗುರುಕಿರಣ್ ಹಾಗೂ ರಘುದೀಕ್ಷಿತ್ ಮತ್ತು ಖ್ಯಾತ ಗಾಯಕಿ ಎಂ. ಡಿ. ಪಲ್ಲವಿ ತೀರ್ಪುಗಾರರಾಗಿದ್ದಾರೆ.

    ಈ ಸರಣಿಗಾಗಿ ಜೀ ಕನ್ನಡ ಕಳೆದ ಎರಡು ತಿಂಗಳುಗಳಿಂದ ಸಿದ್ಧತೆ ನಡೆಸಿ ರಾಜ್ಯದಾದ್ಯಂತ ಬಾಲ ಪ್ರತಿಭೆಗಳಿಗಾಗಿ ಆಡಿಷನ್ ನಡೆಸಿತ್ತು. ಇದೀಗ ರಾಜ್ಯದಾದ್ಯಂತ 20 ಅಭೂತಪೂರ್ವ ಗಾಯನ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದ್ದು ಇವರ ನಡುವೆ ಹಣಾಹಣಿ ಏರ್ಪಡಲಿದೆ.

    ಈ ಪೈಕಿ 12 ಜನ ಬಾಲಕಿಯರು ಆಯ್ಕೆಯಾಗಿದ್ದು 08 ಜನ ಬಾಲಕರು ಸ್ಪರ್ಧೆಯಲ್ಲಿದ್ದಾರೆ. ಈ ಸರಣಿಯಲ್ಲಿಯೂ ವಿವಿಧ ಹಂತಗಳ ಎಲಿಮಿನೇಷನ್ ಇದ್ದು ಅಂತಿಮ ವಿಜೇತರು ಭಾರಿ ಬಹುಮಾನವನ್ನು ತನ್ನದಾಗಿಸಿಕೊಳ್ಳಲಾಗಿದ್ದಾರೆ ಎಂದು ಜೀ ಕನ್ನಡದ ವ್ಯವಹಾರಗಳ ಮುಖ್ಯಸ್ಥರಾದ ಜೆ. ಶೇಖರ್ ಹೇಳಿದ್ದಾರೆ.

    ಇದು ಮಕ್ಕಳ ಸರಣಿಯಾಗಿರುವ ಹಿನ್ನೆಲೆಯಲ್ಲಿ ಶಾಲೆಯ ಅಂಶಗಳಿಗೆ ಪೂರಕವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಕಾರ್ಯಕ್ರಮವೂ ಸಹ ಶಾಲೆಯ ಮಾಧರಿಯಲ್ಲಿಯೇ ಇದ್ದು ಸ್ಪರ್ಧಿಗಳನ್ನು ವಿದ್ಯಾರ್ಥಿಗಳಂತೆ, ತೀರ್ಪುಗಾರುರು ಗುರುವೃಂದದಂತೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

    ಪಠ್ಯಕ್ಕೆ ಪೂರಕವಾಗಿರುವ ಗೀತೆಗಳನ್ನೇ ಇಲ್ಲಿ ಆಯ್ಕೆ ಮಾಡಿಕೊಳ್ಳಲಿದ್ದು ಇತಿಹಾಸ, ವಿಜ್ಞಾನ, ಕನ್ನಡ ನಾಡು ನುಡಿಯಂತಹ ಇವೇ ಮುಂತಾದ ವಿಷಯಗಳಿಗೆ ಪೂರಕವಾದ ಹಾಡುಗಳು ತೆರೆಯಲ್ಲಿ ರಂಜಿಸಲಿವೆ. ವಿವಿಧ ಹಂತಗಳನ್ನು ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ ಹಾಗೂ ಅಂತಿಮ ಪರೀಕ್ಷೆಗಳೆಂದು ಕರೆಯಲಾಗಿದ್ದು ಫಲಿತಾಂಶ ಕುತೂಹಲ ಮೂಡಿಸಿದೆ.

    Tuesday, September 14, 2010, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X