ಐಶ್ವರ್ಯ ರೈ, ಕತ್ರಿನಾರನ್ನು ಹಿಂದಿಕ್ಕಿದ ಸನ್ನಿ ಲಿಯೋನ್
ಭಾರತದಲ್ಲಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಜನಪ್ರಿಯತೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಈಕೆ 'ಬಿಗ್ ಬಾಸ್ 5'ರಲ್ಲಿ ಭಾಗವಹಿಸಿದ ಮೇಲಂತೂ ಬಾಲಿವುಡ್ ತಾರೆಗಳಾದ ಐಶ್ವರ್ಯ ರೈ, ಕತ್ರಿನಾ ಕೈಫ್ ಅವರನ್ನೂ ಜನಪ್ರಿಯತೆಯಲ್ಲಿ ಹಿಂದಿಕ್ಕಿದ್ದಾರೆ.
ಗೂಗಲ್‌ನಲ್ಲಿ ಸನ್ನಿ ಲಿಯೋನ್‌ರನ್ನು ಭಾರತದಲ್ಲಿ ಅತ್ಯಧಿಕವಾಗಿ ಸರ್ಚ್ ಮಾಡಲಾಗಿದೆ. ಸನ್ನಿ ಮೇಲೆ ಪೋರ್ನ್ ಸ್ಟಾರ್ ಎಂಬ ಮುದ್ರೆ ಇದ್ದರೂ ಜನ ಆಕೆಯನ್ನು ಇಷ್ಟಪಟ್ಟು ಆಕೆಯ ಬಗ್ಗೆ ಹೆಚ್ಚು ಒಲವು ತೋರಿರುವುದು ವಿಶೇಷ.
ಗೂಗಲ್‌ನಲ್ಲಿ ಅತ್ಯಧಿಕ ಸರ್ಚ್ ಮಾಡಿದ ಸೆಲೆಬ್ರಿಟಿಗಳಲ್ಲಿ ಐಶ್ವರ್ಯ ರೈ ಹಾಗೂ ಕತ್ರಿನಾ ಕೈಫ್ ಅವರನ್ನೂ ಸನ್ನಿ ಲಿಯೋನ್ ಹಿಂದಿಕ್ಕಿದ್ದಾರೆ. ನೋಯಿಡಾ, ಭುವನೇಶ್ವರ, ಭೂಪಾಲ್‌ಗಳಲ್ಲಿ ಸನ್ನಿಗೆ ಅತ್ಯಧಿಕ ಫಾಲೋವರ್ಸ್ ಇರುವುದು ಗಮನಾರ್ಹ ಅಂಶ.
ಸನ್ನಿಯ ಜನಪ್ರಿಯತೆಯನ್ನು ಮೊದಲು ಕ್ಯಾಚ್ ಮಾಡಿದವರು ಬಾಲಿವುಡ್ ನಿರ್ದೇಶಕ ಮಹೇಶ್ ಭಟ್. ತಮ್ಮ ಮುಂದಿನ ಚಿತ್ರದಲ್ಲಿ ಸನ್ನಿಗೆ ಅವಕಾಶ ನೀಡಲು ಭಟ್ ಮುಂದಾಗಿದ್ದಾರೆ. ಒಟ್ಟಾರೆಯಾಗಿ ಸನ್ನಿ ಏನಾದರೂ ಬಾಲಿವುಡ್‌ಗೆ ಅಡಿಯಿಟ್ಟರೆ ಸಮೂಹ ಸನ್ನಿ ಗ್ಯಾರಂಟಿ. (ಎಜೆನ್ಸೀಸ್)


Click it and Unblock the Notifications











