ದಾವಣಗೆರೆ ಮಹಿಳೆಯರಿಗೆ ಸುವರ್ಣಾವಕಾಶ!

By Rajendra

ನಾಡಿನ ಮಹಿಳೆಯರನ್ನು ದೃಷ್ಟಿಯಲ್ಲಿರಿಸಿಕೊಂಡು ಜೀ ಕನ್ನಡ ನಿರ್ಮಿಸಿ ಪ್ರಸಾರ ಮಾಡುತ್ತಿರುವ ಹೋಮ್ ಮಿನಿಸ್ಟರ್ ಕಾರ್ಯಕ್ರಮ ಈಗ ಮತ್ತಷ್ಟು ಹೊಸತನದೊಂದಿಗೆ ವೀಕ್ಷಕರನ್ನು ತಲುಪುತ್ತಿದೆ. ವಿವಿಧ ಕ್ಷೇತ್ರಗಳ ಮಹಿಳೆಯರನ್ನು ವೇದಿಕೆಗೆ ಕರೆತಂದು ಅವರಲ್ಲಿರುವ ವೈವಿಧ್ಯಮಯ ಪ್ರತಿಭೆಯನ್ನು ಅನಾವರಣಗೊಳಿಸಲು ಅನುವು ಮಾಡಿಕೊಟ್ಟ ಜೀ ಕನ್ನಡದ 'ಹೋಮ್ ಮಿನಿಸ್ಟರ್' ಕಾರ್ಯಕ್ರಮ ಈಗ ರಾಜ್ಯದ ವಿವಿದ ಜಿಲ್ಲೆಗಳ ಮಹಿಳೆಯರನ್ನು ತಲುಪಲು ಸಿದ್ದತೆ ನಡೆಸಿದೆ.

ಈ ನಿಟ್ಟಿನಲ್ಲಿ ಈ ವಾರ ದಾವಣಗೆರೆ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಇದೇ ಅಕ್ಟೋಬರ್ 18 ರಿಂದ 20 ನೇ ತಾರೀಖಿನವರೆಗೂ (ಸೋಮವಾರದಿಂದ ಬುಧವಾರದವರೆಗೂ) 'ಹೋಂ ಮಿನಿಸ್ಟರ್' ಕಾರ್ಯಕ್ರಮವನ್ನು ಜೀ ಕನ್ನಡ ವಾಹಿನಿ ತಂಡ ದಾವಣಗೆರೆಯಲ್ಲಿ ನಡೆಸಲಿದೆ.

ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿರುವ ತಂಡ ನಿಗದಿತ ಪ್ರದೇಶಗಳಲ್ಲಿನ ಗೃಹಿಣಿಯರನ್ನು ಒಂದೆಡೆ ಸೇರಿಸಿ ಅವರ ನಡುವೆ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಿದೆ. ಗೆದ್ದವರಿಗೆ ಬಹುಮಾನ ಸಹ ನೀಡಲಾಗುವುದು. ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಸುತ್ತು ಸಹ ಇದ್ದು ಪ್ರೇಕ್ಷಕರೂ ಸಹ ಸ್ಪರ್ಧೆ ಹಾಗೂ ಪ್ರಶ್ನಾ ವಿಭಾಗದಲ್ಲಿ ಭಾಗವಿಸಿ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.

ಈ ಮೂಲಕ ಮಹಿಳೆಯರ ವೈವಿಧ್ಯಮಯ ಪ್ರತಿಭೆಯನ್ನು ಒರೆಹಚ್ಚಲು ಜೀ ಕನ್ನಡ ದಾವಣಗೆರೆಯ ಮಹಿಳೆಯರಿಗಾಗಿ ಸುವರ್ಣಾವಕಾಶ ಕಲ್ಪಿಸುತ್ತಿದ್ದು, ದಾವಣಗೆರೆಯ ಮಹಾ ಜನತೆ ಇದರ ಸದುಪಯೋಗ ಪಡೆಯಬಹುದಾಗಿದೆ. ಈ ಕಾರ್ಯಕ್ರಮವನ್ನು ಕುರಿ ಖ್ಯಾತಿಯ ಪ್ರತಾಪ್ ನಿರೂಪಿಸಲಿದ್ದಾರೆ.

ಸುಮಾರು ಮೂರು ದಿವಸಗಳ ಕಾಲ ಆಯೋಜಿಸಿರುವ ಕಾರ್ಯಕ್ರಮ ಈ ಕೆಳಕಂಡ ಸ್ಥಳಗಳಲ್ಲಿ ಬೆಳಗ್ಗೆ 08 ಗಂಟೆಯಿಂದ ಪ್ರಾರಂಭವಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ 99800 17753 ಸಂಪರ್ಕಿಸಬಹುದು.

*ಸೋಮವಾರ(ಅ.18): ವಿಶ್ವವಿದ್ಯಾನಿಲಯ ಲಲಿತಕಲಾ ಮಹಾವಿದ್ಯಾಲಯ, ವಿದ್ಯಾನಗರ, ದಾವಣಗೆರೆ.
*ಮಂಗಳವಾರ (ಅ.19): ಸೋಮೇಶ್ವರ ವಿದ್ಯಾಲಯ, ಅದಾಡಿ ರಸ್ತೆ, ದಾವಣಗೆರೆ.
*ಬುಧವಾರ (ಅ.20) : ಶಿವಯೋಗಿ ಆಶ್ರಮ, ಜಯದೇವ ಸರ್ಕಲ್, ದಾವಣಗೆರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X