twitter
    For Quick Alerts
    ALLOW NOTIFICATIONS  
    For Daily Alerts

    ಈಟಿವಿ ಕೊಳ್ಳಲು ಮುಂದಾದ ರಾಜೀವ್ ಚಂದ್ರಶೇಖರ್

    By Rajendra
    |

    Ramoji and Rajeev
    ರಾಜ್ಯಸಭಾ ಸದಸ್ಯ, ಉದ್ಯಮಿ ಹಾಗೂ ಏಷ್ಯಾನೆಟ್ ಕಮ್ಯುನಿಕೇಶನ್ ಲಿಮಿಟೆಡ್‍‌ನ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ ಮತ್ತೊಂದು ದೊಡ್ಡಮಟ್ಟದ ಸಾಹಸಕ್ಕೆ ಕೈಹಾಕಿದ್ದಾರೆ. ರಾಮೋಜಿ ರಾವ್ ಒಡೆತನದ ಈಟಿವಿ ನೆಟ್‌ವರ್ಕ್‌ನ್ನು ಕೊಳ್ಳಲು ರಾಜೀವ್ ಮುಂದಾಗಿದ್ದಾರೆ.

    ಈಟಿವಿ ನೆಟ್‌ವರ್ಕ್ ಒಡೆತನದಲ್ಲಿ ಕನ್ನಡ ಸೇರಿದಂತೆ ಒಟ್ಟು 11 ಪ್ರಾದೇಶಿಕ ಚಾನಲ್‌ಗಳು ಹಾಗೂ ಒಂದು ಸುದ್ದಿ ವಾಹಿನಿ (ಈಟಿವಿ 2) ಕಾರ್ಯನಿರ್ವಹಿಸುತ್ತಿದೆ. ರಾಮೋಜಿ ರಾವ್ ಇಡೀ ತಮ್ಮ ಸಾಮ್ರಾಜ್ಯವನ್ನೇ ಮಾರಾಟಕ್ಕೆ ಇಟ್ಟಿದ್ದಾರೆಯೇ? ಅಥವಾ ಸ್ವಲ್ಪ ಭಾಗವನ್ನು ಮಾತ್ರ ಬಿಕಿರಿಗೆ ಇಡಲಾಗಿದೆಯೇ? ಎಂಬ ಪ್ರಶ್ನೆಗೆ ಇನ್ನೂ ನಿಖರವಾದ ಉತ್ತರ ಸಿಕ್ಕಿಲ್ಲ.

    ಸದ್ಯಕ್ಕೆ ರಾಜೀವ್ ಚಂದ್ರಶೇಖರ್ ಅವರ ಜ್ಯುಪಿಟರ್ ಕ್ಯಾಪಿಟಲ್ ಸಂಸ್ಥೆ ಈಟಿವಿಯನ್ನು ಕೊಳ್ಳಲು ಆಸಕ್ತಿ ತೋರಿಸಿದೆ. ಜ್ಯುಪಿಟರ್ ಸಂಸ್ಥೆಯ ಜೊತೆಗೆ ಮಲ್ಟಿ ಸ್ಕ್ರೀನ್ ಮೀಡಿಯಾ (ಎಂಎಸ್‌ಎಂ) ಎಂಬ ಮತ್ತೊಂದು ಸಂಸ್ಥೆಯೂ ಈಟಿವಿಯನ್ನು ಕೊಳ್ಳಲು ಪೈಪೋಟಿಗೆ ಬಿದ್ದಿದೆ. ಆದರೆ ಅಂತಿಮವಾಗಿ ಈಟಿವಿ ನೆಟ್‌ವರ್ಕ್ ಯಾರ ತೆಕ್ಕೆಗೆ ಬೀಳಲಿದೆ ಎಂಬುದನ್ನು ಕಾಲವೇ ನಿರ್ಧರಿಸಬೇಕು.

    ಏತನ್ಮಧ್ಯೆ ಮತ್ತೊಂದು ಮೀಡಿಯಾ ಕಂಪನಿ ನೆಟ್‌ವರ್ಕ್ 18 ಸಹ ಈಟಿವಿಯೊಂದಿಗೆ ಷೇರು ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಿದೆ. ಆದರೆ ರಾಮೋಜಿ ರಾವ್ ಮಾತ್ರ ಯಾರ ಬಗ್ಗೆಯೂ ಆಸಕ್ತಿ ತೋರದೆ ಮೌನಕ್ಕೆ ಶರಣಾಗಿದ್ದಾರೆ. ಈಟಿವಿಯನ್ನು ಕೊಳ್ಳಲು ಮಾಧ್ಯಮ ದೊರೆಗಳ ನಡುವೆ ಮುಸುಕಿನ ಗುದ್ದಾಟವಂತೂ ನಡೆದೇ ಇದೆ. (ಏಜೆನ್ಸೀಸ್)

    English summary
    Rajeev Chandrasekhar’s Jupiter Capital may be in the fray for Eenadu TV, which is mulling a strategic merger or sale of its assets, said multiple sources familiar with the development. Jupiter will firm up its interest once the Eenadu promoters decide on the final contours of a potential deal, whether they want to divest the entire broadcasting business or sell a part of it, sources added reports Times of India.
    Thursday, December 15, 2011, 16:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X