15 ವರ್ಷದ ಸುದೀರ್ಘ ದಾಂಪತ್ಯ ಅಂತ್ಯ, ವಿಚ್ಚೇದನ ಘೋಷಿಸಿದ ಖ್ಯಾತ ನಟಿ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ.

ಬದಲಾದ ಈ ಕಾಲದಲ್ಲಿ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಗಾದೆ ಮಾತಿಗೆ ಮಾತ್ರ ಸೀಮಿತವಾಗಿದೆ. ಉಂಡು ಮಲಗಿದ ನಂತರ ಕೂಡ ಮೂಡಿದ ಬಿರುಕು ಇನ್ನೂ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ 6 ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿಯೇ 1 ಲಕ್ಷ 95 ಸಾವಿರಕ್ಕೂ ಅಧಿಕ ಜನ ವಿಚ್ಛೇದನದ ಪ್ರಕರಣಗಳು ವರದಿಯಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

15-Year Marriage Ends Simple Kaul Star of Shararat amp amp Taarak Mehta Files for Divorce

ಇನ್ನೂ.. ಬಣ್ಣದ ಲೋಕದಲ್ಲಿ ಕೂಡ ಡಿವೋರ್ಸ್ ಈಗೀಗ ತುಂಬಾನೇ ಮಾಮೂಲಿ ಎನ್ನುವಂತಾಗಿದೆ. ಹಲವಾರು ತಾರೆಯರು ತಮ್ಮ ಸಂಬಂಧ ಕಡಿದುಕೊಳ್ಳುತ್ತಿದ್ದಾರೆ. ಇದಕ್ಕೆ ಸಿಂಪಲ್ ಕೌಲ್ ವೈವಾಹಿಕ ಬದುಕು ಮತ್ತೊಂದು ಉದಾಹರಣೆ.

ಹೌದು, ಸಿಂಪಲ್ ಕೌಲ್.. ಹಿಂದಿ ಕಿರುತೆರೆಯ ಚಿರಪರಿಚಿತ ಮುಖ. ''ಶರಾರತ್''.. ''ತಾರಕ್‌ ಮೆಹ್ತಾ ಕಾ ಉಲ್ಟಾ ಚಶ್ಮಾ''.. ''ಝಿದ್ದಿ ದಿಲ್ ಮಾನೆ ನಾ''.. ಮೂಲಕ ಅನೇಕರ ಹೃದಯ ಗೆದ್ದ ಸಿಂಪಲ್ ಅವರ ಹೃದಯ ಈಗ ನುಚ್ಚು ನೂರಾಗಿದ್ದು ತಮ್ಮ ಗಂಡ ರಾಹುಲ್ ಲೂಂಬಾ ಅವರಿಂದ ದೂರವಾಗಿದ್ದಾರೆ. 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ''ಟೈಮ್ಸ್ ಆಫ್ ಇಂಡಿಯಾ''ಗೆ ಪ್ರತಿಕ್ರಿಯೆಯನ್ನು ಕೂಡ ನೀಡಿರುವ ಸಿಂಪಲ್, ತೀರಾ ಇತ್ತೀಚೆಗೆ ನಡೆದಿರುವ ಬೆಳವಣಿಗೆ ಇದು. ಇಬ್ಬರು ಕುಂತು ಆಲೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.

ನಾವು ಇಬ್ಬರು ಪ್ರಬುದ್ದರು, ದೂರವಾಗುತ್ತಿದೆವೆಯಾದರೂ ನಮ್ಮ ನಡುವೆ ಸ್ನೇಹ ಮುಂದುವರೆಯುತ್ತೆ. ಯಾಕೆಂದರೆ ನಾವು ಯಾರನ್ನಾದರೂ ಮದುವೆಯಾದಾಗ ಮದುವೆಯಾದ ವ್ಯಕ್ತಿ ನಮ್ಮ ಕುಟುಂಬದವರೇ ಆಗಿರುತ್ತಾರೆ. ನಮ್ಮ ವಿಚಾರದಲ್ಲಿ ಕೂಡ ಹಾಗೇ ಆಗಿದೆ. ಜನ ಹೇಗೆ ದೂರವಾಗುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ ಆದರೆ ನನ್ನಿಂದ ಅದು ಸಾಧ್ಯ ಇಲ್ಲ ಎಂದಿರುವ ಸಿಂಪಲ್ ಮುಂದೆಯೂ ಕೂಡ ಪ್ರೀತಿಯಿಂದ.. ಸಂತೋಷದಿಂದ.. ಆಧ್ಯಾತ್ಮಿಕವಾಗಿ ನಾವು ಬದುಕುತ್ತೇವೆ ಎಂದು ಹೇಳಿದ್ದಾರೆ.

15-Year Marriage Ends Simple Kaul Star of Shararat amp amp Taarak Mehta Files for Divorce

ಇನ್ನೂ ತಮ್ಮ ದಾಂಪತ್ಯ ಜೀವನ ಮುರಿದು ಬಿದ್ದಿದ್ದೇಕೆ ಎನ್ನುವುದನ್ನು ಸಿಂಪಲ್ ಹೇಳಿಲ್ಲವಾದರೂ 2023ರಲ್ಲಿ ಇದೇ ''ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಸಿಂಪಲ್ ತಮ್ಮ ಸಿಂಪಲ್ ಅಲ್ಲದ ಸಂಕೀರ್ಣ ಸಂಬಂಧದ ಕುರಿತು ಮಾತನಾಡಿದ್ದರು. ತಮ್ಮ ದಾಂಪತ್ಯ ಜೀವನದ ಕುರಿತು ಅಂದು ಮಾತನಾಡಿದ್ದ ಸಿಂಪಲ್ ನನ್ನ ಗಂಡ ನನ್ನ ಜೊತೆ ಇರುವುದು ತುಂಬಾ ಕಡಿಮೆ. ಅವರ ಕೆಲಸದ ಪ್ರಯುಕ್ತ ಅವರು ವಿದೇಶದಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾರೆ. ಹೀಗಾಗಿ ನಾನು ಅವರನ್ನು ಆಗಾಗ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.

ಅವರು ವಿದೇಶದಲ್ಲಿದ್ದರು ಕೂಡ ನಮ್ಮ ನಡುವೆ ಹೊಂದಾಣಿಕೆ ಚೆನ್ನಾಗಿದೆ. ನಮ್ಮ ಸಂಬಂಧ ತುಂಬಾನೇ ಗಟ್ಟಿಯಾಗಿದೆ. ಇನ್ನು ಅವರು ಅವರ ಕೆಲಸದಲ್ಲಿ ವಿದೇಶದಲ್ಲಿ ಬ್ಯುಸಿಯಾದಾಗ ನಾನು ನನ್ನ ವೃತ್ತಿ ಬದುಕಿನ ಮೇಲೆ ಗಮನ ಕೊಡುತ್ತೇನೆ ಎಂದು ಹೇಳಿದ್ದ ಸಿಂಪಲ್ ಜೀವನ ಒಂದು ರೀತಿ ಸಮತೋಲನವಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆ ಇವರ ದಾಂಪತ್ಯ ಮುರಿದು ಬೀಳಲು ಈ ಲಾಂಗ್‌ ಡಿಸ್ಟೆನ್ಸ್‌ ಸಂಬಂಧನೇ ಕಾರಣ ಇರಬಹುದು ಎನ್ನುವ ಅನುಮಾನವನ್ನು ಸದ್ಯ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಅಂದ್ಹಾಗೇ ಸಿಂಪಲ್ ಮತ್ತು ರಾಹುಲ್ 2010ರಲ್ಲಿ ಮದುವೆಯಾಗಿದ್ದರು. ಈಗ 15 ವರ್ಷಗಳ ನಂತರ ಇಬ್ಬರು ದೂರವಾಗಿದ್ದಾರೆ.

More from Filmibeat

English summary
"Shararat" actress Simple Kaul confirms her mutual separation from husband Rahul Loomba, sharing insights on the end of their 15-year marriage.
Read more about: ಟಿವಿ divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X