ಸಚಿವರ ಕೊಲೆಯತ್ನದಲ್ಲಿ ಪಕ್ಕದಲ್ಲಿದ್ದ ಪತ್ನಿಗೆ ಏಟು

Serial Image
ಸೀತಾಪುರದ ಜಾತ್ರೆಗೆ ಆಗಮಿಸುತ್ತಿರುವ ಸಚಿವ ನರಸಿಂಹರಾವ್ ಅವರ ಕೊಲೆಗೆ ಸಂಚು ಹೂಡಲಾಗಿದೆ. ಈ ಯತ್ನ ನಡೆಯಲಿರುವುದು ಜೀ ಕನ್ನಡದ ಧಾರಾವಾಹಿ ಚಿ|ಸೌ|ಸಾವಿತ್ರಿಯಲ್ಲಿ! ಉಸಿರು ಬಿಗಿಹಿಡಿದು ನೋಡಬೇಕಾಗಿರುವ ಶಾಸಕ-ಸಚಿವ ನರಸಿಂಹರಾವ್ ಪಾತ್ರ ನಿರ್ವಹಿಸುತ್ತಿರುವವರು ನಟ ಜೈಜಗದೀಶ್.

ತನಗಿಂತ 30 ವರ್ಷ ಕಿರಿಯ ಸಾವಿತ್ರಿಯನ್ನು ವರಿಸಿದ್ದೂ ಆಗಿದೆ. ಸಾವಿತ್ರಿಯ ಕುಂಕುಮವೇ ನರಸಿಂಹರಾವ್ ಅವರನ್ನು ಕಾಪಾಡುತ್ತದೆ ಎಂದು ಭವಾನಿ ಅಮ್ಮ ಭವಿಷ್ಯ ನುಡಿದಿದ್ದು ಅನುರಣಿಸುತ್ತಿದೆ. ಹೀಗಿದ್ದರೂ ಅವರಿಗೆ ಸಾವಿತ್ರಿ ಮೇಲೆ ಮುನಿಸು. ಅದರೆ ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ ನರಸಿಂಹರಾವ್ ಊರ ಜಾತ್ರೆಗೆ ಪತ್ನಿ ಸಾವಿತ್ರಿ ಸಮೇತ ತೆರಳುತ್ತಾರೆ.

ಈ ವಿಷಯ ಅರಿತ ವಿರೋಧಿಗಳಾದ ಜಗ್ಗು, ಇಂದ್ರಜಿತ್ ಮತ್ತು ಮಹತ್ವಾಕಾಂಕ್ಷಿ ನಾದಿನಿ ಅಹಲ್ಯಾ ಸೇರಿಕೊಂಡು ಜಾತ್ರೆಯಲ್ಲಿ ಕೊಲೆಯ ಷಡ್ಯಂತ್ರ ಹೂಡುತ್ತಾರೆ. ಕೆಂಡಹಾಯುತ್ತಿದ್ದ ಸಾವಿತ್ರಿ ಗಮನಕ್ಕೆ ಬಂದು ಅಕೆ ಪತಿಯನ್ನು ರಕ್ಷಿಸುತ್ತಾಳೆ. ಸಾವಿತ್ರಿಗೆ ಮಾರಣಾಂತಿಕ ಏಟಾಗುತ್ತದೆ.

ಸಾವಿತ್ರಿ ನಿಧನಳಾದರೆ ನರಸಿಂಹರಾವ್ಗೆ ಉಳಿಗಾಲವಿಲ್ಲ! ಹಾಗಾದರೆ ಮುಂದೇನು? ವೈಭವದ ಜಾತ್ರೆ ಸನ್ನಿವೇಶಗಳು, ಮೈ ನವಿರೇಳಿಸುವ ಆಕ್ರಮಣದ ಯತ್ನಗಳು ಇವುಗಳಿಂದ ಕೂಡಿದ ಜನಪ್ರಿಯ ಕೌಟುಂಬಿಕ ಧಾರಾವಾಹಿ 'ಚಿ|ಸೌ| ಸಾವಿತ್ರಿ'ಯನ್ನು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ವೀಕ್ಷಿಸಬಹುದು. (ಒನ್ ಇಂಡಿಯಾ ಕನ್ನಡ)

More from Filmibeat

English summary
Zee Kannada Serial 'Chi Sow Savithri' is running successfully. Actor Jai jagadish acted as son of minister Narasimha Rao, as a effective role. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X