ಕೆಬಿಸಿ ಬಚ್ಚನ್ ಮೇಲೆ ಕೇಸ್ ಜಡಿಯಲು ಮಹಿಳೆ ಸಿದ್ಧ

By Mahesh

ಫತೇಗರ್ ಸಾಹೀಬ್, ಸೆ.16: ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ) ಖ್ಯಾತಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ವಿರುದ್ಧ ಕೇಸ್ ಜಡಿಯಲು ಮಹಿಳೆಯೊಬ್ಬರು ನಿರ್ಧರಿಸಿದ್ದಾರೆ.

ಕೆಬಿಸಿಯಲ್ಲಿ ಅಮಿತಾಬ್ ನೀಡಿದ ಮೊಬೈಲ್ ನಂಬರ್ ಮಹಿಳೆಯ ಬಳಿ ಇರುವ ನಂಬರ್ ಹೋಲುತ್ತದೆ. ಇದರಿಂದ ಆಕೆಗೆ ದಿನಪೂರ್ತಿ ಸಾವಿರಾರು ಫೋನ್ ಕರೆ ಸ್ವೀಕರಿಸಿ ಸಾಕಾಗಿ ಹೋಗಿದೆ.

ಸೋನಿ ಟಿವಿ ರಾತ್ರಿ 8.30 ಕ್ಕೆ ಆರಂಭವಾಗುವ ಕೆಬಿಸಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಅವರು ಸ್ಪರ್ಧೆಯೊಬ್ಬರ ಕೋರಿಕೆ ಮೇರೆಗೆ ತನ್ನ ಮೊಬೈಲ್ ಸಂಖ್ಯೆ 987730000 ನೀಡಿದ್ದರು.

ಒಂಭತ್ತು ಸಂಖ್ಯೆಯ ಫೋನ್ ನಂಬರ್ ಗೆ ಇನ್ನೊಂದು ಸೊನ್ನೆ ಸೇರಿಸಿ ಕೆಬಿಸಿಗೆ ಹೋಗುವ ಅಮಿತಾಬ್ ರನ್ನು ಕಾಣುವ ಕನಸು ಹೊತ್ತ ಸಾವಿರಾರು ಜನ ನಿತ್ಯ ಕರೆ ಮಾಡತೊಡಗಿದರು.

ಅದರೆ, ದುರದೃಷ್ಟಕ್ಕೆ ಈ ಸಂಖ್ಯೆ ಪುನೀತ್ ಬನ್ಸಾಲ್ ಎಂಬುವರ ತಂಗಿ ನಂಬರ್ ಆಗಿದೆ.

ಭಾರತದಿಂದ ಮಾತ್ರವಲ್ಲ ವಿದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಕರೆಗಳು ಬರತೊಡಗಿದವು. ಮೊಬೈಲ್ ಬ್ಲಾಕ್ ಮಾಡಿಸಲು ಹೋದರೂ ಆಗಲಿಲ್ಲ. ಕೊನೆ ಯತ್ನ ಎಂಬಂತೆ ಅಮಿತಾಬ್ ಹಾಗೂ ಕೆಬಿಸಿ ಮೇಲೆ ಕೇಸ್ ದಾಖಲಿಸಲು ಸಿದ್ಧರಾಗುತ್ತಿದ್ದೆವೆ ಎಂದು ಬನ್ಸಾಲ್ ಹೇಳುತ್ತಾರೆ.

More from Filmibeat

English summary
A woman has decided to move court against megastar Amitabh Bachchan after she became the recipient of thousand calls from across the globe after Big B gave his mobile number on his show Kaun Banega Crorepati (KBC), which was found to be the woman's.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X